ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದುರ್ಗ: 20 ತಾಸು ಸತತ ಮಳೆ

Last Updated 28 ಆಗಸ್ಟ್ 2014, 19:53 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನಲ್ಲಿ ಬುಧ­ವಾರ ರಾತ್ರಿ ಆರಂಭವಾದ ಮಳೆ ಗುರುವಾರ ಸಂಜೆವರೆಗೂ ಮುಂದು ವರೆದಿತ್ತು.  ಎಡೆಬಿಡದೆ ಸುರಿಯು­ತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವು ಗ್ರಾಮಗಳ ರಸ್ತೆಗಳು ಜಲಾವೃತ್ತಗೊಂಡಿವೆ.

ಸತತ 20 ಗಂಟೆಗಳ ಮಳೆಯಿಂದಾಗಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿನ ರಸ್ತೆಗಳು ಜಲಾವೃತ್ತಗೊಂಡ ಕಾರಣ ವಿದ್ಯಾರ್ಥಿಗಳು, ವೃದ್ಧರು  ಕಷ್ಟಕ್ಕೆ ಸಿಲುಕಿದರು.

ನಾರಾಯಣ ಬಲದಂಡೆ ಕಾಲುವೆಗೆ 10 ದಿನಗಳ ಹಿಂದೆ ನೀರು ಬಿಟ್ಟಿರು ವುದರಿಂದ ನೀರಾವರಿ ಬೆಳೆಗಳನ್ನು ಬೆಳೆಯಲು ರೈತರ ಕೃಷಿ ಚಟುವಟಿಕೆ­ಯಲ್ಲಿ ನಿರತರಾಗಿದ್ದಾರೆ. ಇದೀಗ ಸತತ ಮಳೆ ಬರುತ್ತಿರುವುದರಿಂದ ರೈತರಿಗೆ  ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.

‘ಎರಡು ತಿಂಗಳ ಹಿಂದೆಯೇ ಮಳೆ ಬಂದಿದ್ದರೆ ಮುಂಗಾರು ಬೆಳೆಗಳ ಫಸಲು ಕೈಗೆ ಬರುತ್ತಿತ್ತು. ಆದರೆ ಈಗ ಮಳೆ ಬಂದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’  ಎಂದು ರೈತ ಶರಣಪ್ಪ ವಅರು ಅಳಲು ತೋಡಿಕೊಂಡರು.

ಮಳೆಯಿಂದಾಗಿ ಪಟ್ಟಣದ ಡಾ. ಅಂಬೇಡ್ಕರ್‌ ವೃತ್ತದಿಂದ ತಪ್ಪರಗುಂಡ ಮಸೀದಿ ಮುಖ್ಯ ರಸ್ತೆ,  ದರ್ಬಾರ್‌ನಿಂದ ಪೊಲೀಸ್‌ ಠಾಣೆವರೆಗಿನ ಮುಖ್ಯ ರಸ್ತೆ ಹಾಳಾಗಿದೆ. ರಸ್ತೆ ವಿಸ್ತರಣೆ ಹೆಸರಿನಲ್ಲಿ 4 ವರ್ಷದ ಹಿಂದೆ ಪುರಸಭೆ ವತಿಯಿಂದ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಈ ಹಿಂದೆ ಇದ್ದ ಚರಂಡಿಗಳು ಮತ್ತು ರಸ್ತೆಗಳು ವಿಸ್ತರಣೆ ಸಂದರ್ಭದಲ್ಲಿ ಮುಚ್ಚಿ ಹೋಗಿವೆ. ಈಗ ಮಳೆ ಹೆಚ್ಚಾಗಿರುವದರಿಂದ ಕೊಳಚೆ ನೀರು ಮುಖ್ಯ ರಸ್ತೆಯ ಮೇಲೆ ಹರಿಯುತ್ತಿದೆ. ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಕ್ರಮಕ್ಕೆ ಮುಂದಾಗಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜ ನವಾಗಿಲ್ಲ ಎಂದು ಜನತೆ ಆರೋಪಿ ಸಿದ್ದಾರೆ.

ರಾಯಚೂರು ತಾಲ್ಲೂಕಿನಲ್ಲಿ 105.7 ಮಿ.ಮೀ, ಮಾನ್ವಿ ತಾಲ್ಲೂ ಕಿನಲ್ಲಿ 125.4 ಮಿ.ಮೀ, ದೇವದುರ್ಗ ತಾಲ್ಲೂಕಿನಲ್ಲಿ 101.2 ಮಿ.ಮೀ, ಲಿಂಗಸುಗೂರು ತಾಲ್ಲೂಕಿನಲ್ಲಿ 50 ಮಿ.ಮ ಮಿ.ಮೀ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT