ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಣಿ ಮುಳುಗಿ ರಷ್ಯಾದ ಮೂವರ ಸಾವು

Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪಣಜಿ(ಪಿಟಿಐ): ಡಾಲ್ಫಿನ್‌ಗಳನ್ನು ನೋಡಲು ಸಮುದ್ರಕ್ಕೆ ತೆರಳಿದ್ದ ರಷ್ಯಾದ ಪ್ರವಾಸಿಗರಿದ್ದ ದೋಣಿ ಭಾರಿ ಅಲೆಗಳಿಗೆ ಮುಳುಗಿದ ಪರಿಣಾಮ ಮೂವರು ಮಹಿಳೆ­ಯರು ಮೃತಪಟ್ಟು ಏಳು ಜನ ಪಾರಾದ ಘಟನೆ ಮಂಗಳವಾರ ನಡೆದಿದೆ.

ಪಣಜಿಯಿಂದ 60 ಕಿ.ಮೀ.­ದೂರದ  ಬೇತುಲ್ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದೆ.  ಡಾಲ್ಫಿನ್‌ಗಳನ್ನು ನೋಡಲು 10 ರಷ್ಯಾ ಪ್ರವಾಸಿಗರು ತೆರಳಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ದೋಣಿ ಭಾರಿ ಅಲೆಗೆ ಸಿಕ್ಕಿ ಮುಳುಗಿತು ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ನೌಕಾಪಡೆ ಸಿಬ್ಬಂದಿ ಹೇಳಿದ್ದಾರೆ.

ಈ ಮೂವರು ಮಹಿಳೆಯರ ಮೃತದೇಹ­­ವನ್ನು ಮರಣೋತ್ತರ ಪರೀಕ್ಷೆಗೆ ಮಡ­ಗಾಂವ್‌  ಆಸ್ಪತ್ರೆಗೆ ಕೊಂಡೊಯ್ಯ­ಲಾ­ಗಿದೆ. ಪ್ರತಿಕೂಲ ಹವಾಮಾನ ಕಾರಣ­ದಿಂದಾಗಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ  ಸೂಚನೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT