ಭಾರತದಲ್ಲಿ ‘66ಎ’ಯ ಸಮಸ್ಯೆ ಇದ್ದರೆ ವಿಶ್ವದ ಉಳಿದೆಡೆ ಇನ್ನೂ ಹೆಚ್ಚು ಸಂಕೀರ್ಣವಾದ ಇಂಟರ್ನೆಟ್ ಸಂಬಂಧಿ ಸಮಸ್ಯೆಗಳಿವೆ. ಅಂತರ್ಜಾಲ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ವಿಶ್ವದ ಹತ್ತು ದೇಶಗಳ ಪಟ್ಟಿ ಹೀಗಿದೆ:

ಉತ್ತರ ಕೊರಿಯ: ಇಲ್ಲಿ ಶೇ 4ರಷ್ಟು ನಾಗರಿಕರು ಇಂಟರ್ನೆಟ್ ಬಳಸುತ್ತಾರೆ. ಇವರು ನೋಡುವ ಎಲ್ಲ ವೆಬ್ಸೈಟ್ಗಳೂ ಸರ್ಕಾರಿ ನಿಯಂತ್ರಣದಲ್ಲಿ ಇರುತ್ತವೆ.

ಬರ್ಮಾ: ಸರ್ಕಾರ ಹೊರಹೋಗುವ ಮತ್ತು ಒಳಬರುವ ಎಲ್ಲ ಇ–ಮೇಲ್ಗಳನ್ನೂ ಪರಿಶೀಲಿಸುವ ವ್ಯವಸ್ಥೆಯೊಂದನ್ನು ರೂಪಿಸಿಕೊಂಡಿದೆ. ಸರ್ಕಾರವನ್ನು ವಿರೋಧಿಸುವ, ಮಾನವ ಹಕ್ಕು ಉಲ್ಲಂಘನೆಗಳನ್ನು ವರದಿ ಮಾಡುವ ಜಾಲತಾಣಗಳು ಮತ್ತು ಇ–ಮೇಲ್ಗಳನ್ನು ತಡೆಹಿಡಿಯುವ ವ್ಯವಸ್ಥೆ ಇದೆ.

ಕ್ಯೂಬ: ಸರ್ಕಾರ ನಿಗದಿಪಡಿಸಿರುವ ಆಕ್ಸೆಸ್ ಪಾಯಿಂಟ್ಗಳ ಮೂಲಕವಷ್ಟೇ ಇಂಟರ್ನೆಟ್ ಲಭ್ಯ. ಪ್ರತಿಯೊಂದು ಅಂತರ್ಜಾಲ ಚಟುವಟಿಕೆಯ ಮೇಲೂ ಸರ್ಕಾರದ ನಿಗಾ ಇರುತ್ತದೆ. ಕೇವಲ ಆಡಳಿತದ ಪರವಾದ ಮಾಹಿತಿ ಮಾತ್ರ ಇಲ್ಲಿಂದ ಹೊರಹೋಗಲು ಸಾಧ್ಯವಿದೆ.

ಸೌದಿ ಅರೇಬಿಯ: ಸುಮಾರು ನಾಲ್ಕು ಲಕ್ಷ ವೆಬ್ಸೈಟುಗಳನ್ನು ಬ್ಲಾಕ್ ಮಾಡಲಾಗಿದೆ. ಸೌದಿಯ ರಾಜಪ್ರಭುತ್ವ ಮತ್ತು ಅದು ನಂಬಿರುವ ಇಸ್ಲಾಮನ್ನು ವಿರೋಧಿಸುವ ಅಥವಾ ಅದನ್ನು ವಿಮರ್ಶಾತ್ಮಕವಾಗಿ ನೋಡುವ ಯಾವುದೂ ಇಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ.

ಇರಾನ್: ಬ್ಲಾಗರ್ಗಳು ಕಲೆ ಮತ್ತು ಸಂಸ್ಕೃತಿ ಸಚಿವಾಲಯದಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಸರ್ಕಾರಿ ಧರ್ಮ ಪಂಡಿತರನ್ನು ಟೀಕಿಸುವವರಿಗೆ ಬಹುದೊಡ್ಡ ಶಿಕ್ಷೆಗಳಿವೆ. ಅನೇಕರು ಇದೇ ಕಾರಣದಿಂದ ದೇಶ ತೊರೆದಿದ್ದಾರೆ.

ಚೀನಾ: ಅತ್ಯಂತ ‘ದಕ್ಷ’ ಮತ್ತು ‘ಸುಧಾರಿತ’ ಇಂಟರ್ನೆಟ್ ಸೆನ್ಸಾರಿಂಗ್ ವ್ಯವಸ್ಥೆ ಇಲ್ಲಿದೆ. ಸರ್ಕಾರಕ್ಕೆ ಇರುಸುಮುರುಸುಂಟು ಮಾಡುವ ಯಾವುದನ್ನೂ ನಾಗರಿಕರು ಕಾಣಲಾಗದು. ಥೈವಾನ್ ಸ್ವಾತಂತ್ರ್ಯ ಅಥವಾ ತಿಯಾನನ್ಮನ್ ಚೌಕದ ದುರಂತಕ್ಕೆ ಸಂಬಂಧಿಸಿದಂತೆ ಹುಡುಕಾಡಿದರೆ ಎಲ್ಲ ಫಲಿತಾಂಶಗಳೂ ಸರ್ಕಾರದ ಪರ ವೆಬ್ಸೈಟಿಗೇ ಹೋಗುತ್ತವೆ!

ಸಿರಿಯಾ: ‘ರಾಷ್ಟ್ರೀಯ ಏಕತೆ’ಗೆ ವಿರುದ್ಧವಾಗಿರುವ ಏನನ್ನು ನಡೆಸಿದರೂ ಬಂಧನಕ್ಕೆ ಒಳಗಾಗಬೇಕಾಗುತ್ತದೆ. ಸೈಬರ್ ಕೆಫೆಗಳು ತಮ್ಮ ಗ್ರಾಹಕರ ಗುರುತನ್ನು ಇಟ್ಟುಕೊಂಡು ಅಧಿಕಾರಿಗಳು ಕೇಳಿದಾಗ ಒದಗಿಸಬೇಕು.

ಟ್ಯುನೀಶಿಯಾ: ಇಲ್ಲಿನ ಎಲ್ಲ ಇಂಟರ್ನೆಟ್ ಸೇವಾದಾತರೂ ದೇಶದ ಎಲ್ಲ ಬ್ಲಾಗರ್ಗಳ ವಿವರವನ್ನೂ ಸರ್ಕಾರಕ್ಕೆ ಒದಗಿಸಬೇಕು. ಸರ್ಕಾರ ಇ–ಮೇಲ್ ಸೇರಿದಂತೆ ಎಲ್ಲ ಮಾಹಿತಿಗಳ ಮೇಲೆ ನಿಗಾ ಇಟ್ಟಿರುತ್ತದೆ.

ವಿಯೆಟ್ನಾಮ್: ಯಾಹೂ, ಗೂಗಲ್ ಮೈಕ್ರೊಸಾಫ್ಟ್ ಕಂಪೆನಿಗಳು ತಮ್ಮ ಸೇವೆಗಳನ್ನು ಬಳಸುವ ಗ್ರಾಹಕರ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವುದು ಕಡ್ಡಾಯ. ಸರ್ಕಾರವನ್ನು ಟೀಕಿಸುವ ಎಲ್ಲಕ್ಕೂ ಇಲ್ಲಿ ನಿಷೇಧವಿದೆ.

ತುರ್ಕ್ಮೆನಿಸ್ತಾನ್: ಇಲ್ಲಿನ ಏಕೈಕ ಇಂಟರ್ನೆಟ್ ಸೇವಾದಾತ ಸರ್ಕಾರ. ಹಲವಾರು ವೆಬ್ಸೈಟುಗಳಿಗೆ ಇಲ್ಲಿ ನಿಷೇಧವಿದೆ. ಯಾಹೂ, ಜಿಮೇಲ್, ಹಾಟ್ಮೇಲ್ಗಳಲ್ಲಿ ಸಾಗುವ ಎಲ್ಲವೂ ಸರ್ಕಾರದ ಪರಿಶೀಲನೆಗೆ ಒಳಪಟ್ಟೇ ಮುಂದುವರಿಯಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.