ಪ್ಯಾರಿಸ್ (ಎಪಿ): ‘ಚಾರ್ಲಿ ಹೆಬ್ದೊ’ ವಾರಪತ್ರಿಕೆ ಕಚೇರಿ ಮೇಲೆ ದಾಳಿ ಮಾಡಿದವರ ಪೈಕಿ ಒಬ್ಬ ಪೊಲೀಸರಿಗೆ ಶರಣಾಗಿದ್ದು, ಇನ್ನಿಬ್ಬರು ಸಹೋದರರಿಗಾಗಿ ಹುಡುಕಾಟ ನಡೆಯುತ್ತಿದೆ.

ಈ ಇಬ್ಬರು ಗುರುವಾರ ಬೆಳಿಗ್ಗೆ ಉತ್ತರ ಫ್ರಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಪೆಟ್ರೋಲ್ ಬಂಕ್ ವ್ಯವಸ್ಥಾಪಕರು ಇವರನ್ನು ಗುರುತಿಸಿದ್ದಾಗಿ ಮೂಲಗಳು ತಿಳಿಸಿವೆ. ಇವರಿಬ್ಬರಲ್ಲಿ ಷರೀಫ್ ಕವೊಚಿ (32) ಎಂಬಾತನ ವಿರುದ್ಧ ಪೊಲೀಸರು ಬಂಧನ ವಾರಂಟ್ ಹೊರಡಿಸಿದ್ದಾರೆ.

ಇರಾಕ್‌ಗೆ ದಾಳಿಕೋರರನ್ನು ರವಾನೆ ಮಾಡಿದ ಜಾಲದಲ್ಲಿ ಇದ್ದ ಕಾರಣ 2008ರಲ್ಲಿ ಕವೊಚಿ ಶಿಕ್ಷೆಗೆ ಒಳಗಾಗಿದ್ದ. ಈ ಸಹೋದರರು ಪ್ಯಾರಿಸ್ನಲ್ಲಿಯೇ ಹುಟ್ಟಿದವರು.

‘ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇವರು ಅಪಾಯಕಾರಿ ಸಹೋದರರು’ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪೊಲೀಸರಿಗೆ ಶರಣಾದ ದಾಳಿಕೋರನನ್ನು ಮೌರದ್ ಹಮೀದ್ (18) ಎಂದು ಗುರುತಿಸಲಾಗಿದೆ. ದಾಳಿಕೋರರು ಯೆಮನ್ ಉಗ್ರ ಜಾಲದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಂಕಿತರು ವಶಕ್ಕೆ: ಈ ಮಧ್ಯೆ ಪೊಲೀಸರು ದಾಳಿಕೋರರ ಸಂಪರ್ಕದಲ್ಲಿದ್ದಾರೆ ಎನ್ನಲಾದ ಏಳು ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಮಹಿಳೆಯರು ಕೂಡ ಇದ್ದಾರೆ.

ಒಲಾಂಡ್ ಭೇಟಿ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್, ವಾರಪತ್ರಿಕೆ ಕಚೇರಿ ಮೇಲಿನ ದಾಳಿಯನ್ನು ‘ಬರ್ಬರ ಕೃತ್ಯ’ ಎಂದು ಖಂಡಿಸಿದ್ದಾರೆ. ವಿದೇಶಗಳಲ್ಲಿ ಯುದ್ಧ ತರಬೇತಿ ಪಡೆದ ಜಿಹಾದಿಗಳು ಮನೆಗಳ ಮೇಲೆ ದಾಳಿ ನಡೆಸಬಹುದು ಎನ್ನುವ ಭೀತಿ ಫ್ರಾನ್ಸ್ ಹಾಗೂ ಯೂರೋಪ್‌ನಲ್ಲಿ ಮನೆ ಮಾಡಿದೆ.

‘ಯೆಮನ್ ಅಲ್ ಕೈದಾ ಉಗ್ರರು ದಾಳಿ ನಡೆಸಿದ್ದಾಗಿ ಮಾಧ್ಯಮಗಳಿಗೆ ತಿಳಿಸಿ’ ಎಂದು ದಾಳಿಕೋರರು ಹೇಳಿದ್ದಾಗಿ ಪ್ರತ್ಯಕ್ಷದರ್ಶಿ ಸೆಡ್ರಿಕ್ ಲೆ ಬೆಚೆ ಹೇಳಿದ್ದಾರೆ. ದಾಳಿಕೋರರು ಗುಂಡು ಹಾರಿಸುತ್ತ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಿದ್ದರು. ಅವರು ಫ್ರೆಂಚ್ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

*ಫ್ರಾನ್ಸ್: ಮಸೀದಿಗಳ ಮೇಲೆ ಗ್ರೆನೇಡ್ ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.