ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷ ನಾಯಕರ ಅನುಪಸ್ಥಿತಿಯಲ್ಲೂ ಲೋಕಪಾಲಕ್ಕೆ ನೇಮಕ?

Last Updated 25 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಪಾಲ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಪ್ರಕ್ರಿಯೆಗೆ ಪ್ರತಿಪಕ್ಷ ನಾಯಕರ ಅನುಪ­ಸ್ಥಿತಿಯಲ್ಲೇ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ನಿರ್ಧರಿಸಿರುವ ಸುಳಿವು ಕಂಡುಬಂದಿವೆ.

ನಡಾವಳಿಯ ಪ್ರಕಾರ, ಲೋಕಸಭೆ­ಯಲ್ಲಿ ಪ್ರತಿಪಕ್ಷ ನಾಯಕರೂ ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. ಆದರೆ ಸದ್ಯ, ಪ್ರತಿಪಕ್ಷ ನಾಯಕ ಸ್ಥಾನ ಯಾರಿಗೆ ನೀಡಬೇಕೆಂಬುದು ನಿರ್ಧಾರ­ವಾ­ಗಿಲ್ಲ. ಲೋಕ­ಪಾಲ ನೇಮಕಾತಿ ಶೋಧನಾ ಸಮಿ­ತಿ ನಿಯಮಾವಳಿ­ಯನ್ನು ಶೀಘ್ರವೇ ಬದಲಿಸಲಾಗು­ವುದು. ಅದರ ಸಂಯೋ­ಜ­ನೆಯನ್ನು ಅಂತಿಮ­ಗೊಳಿಸಲು ಶೀಘ್ರವೇ ಆಯ್ಕೆ ಸಮಿತಿ ಸಭೆ ನಡೆಯ­ಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT