ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ವಾರಕ್ಕೊಮ್ಮೆಯಾದರೂ ಮುಖ ತೋರಬೇಕು: ಖರ್ಗೆ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಪ್ರಧಾನಿ ನರೇಂದ್ರ ಮೋದಿ ಅವರು ಕನಿಷ್ಠ ವಾರಕ್ಕೊಮ್ಮೆಯಾದರೂ ಸಂಸತ್ತಿನಲ್ಲಿ ಕಾಣಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ಸಭಾನಾಯಕ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಲೋಕಸಭೆಯಲ್ಲಿ ಹೇಳಿದರು.

‘ಅವರು ಇಲ್ಲಿಗೆ (ಸಂಸತ್ತಿಗೆ) ದಿನಾ ಬರಲಿ ಎಂದೇನೂ ಅಪೇಕ್ಷಿಸುವುದಿಲ್ಲ. ಆದರೆ, ವಾರಕ್ಕೊಮೆಯಾದರೂ ಕಾಣಿಸಿಕೊಳ್ಳದಿದ್ದರೆ ಹೇಗೆ? ಅವರು ತಮ್ಮ ವಿದೇಶ ಪ್ರವಾಸದ ಬಗ್ಗೆ ಸದನದಲ್ಲಿ ಹೇಳಿಕೆ ನೀಡಬೇಕು. ಬ್ರಿಕ್ಸ್‌ ಶೃಂಗಸಭೆಯಲ್ಲಿ ಏನಾಯಿತು ಎಂಬುದನ್ನು ಅವರಿಂದ ತಿಳಿಯಲು ಇಡೀ ದೇಶ ಕಾತರದಿಂದ ಎದುರುನೋಡುತ್ತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ರಾಜೀವ್‌ ಪ್ರತಾಪ್‌ ರೂಢಿ, ‘ಮೋದಿ  ‘‘ಕಾರ್ಯನಿರತ ಪ್ರಧಾನಿ’’. ಅವರು ಸದನಕ್ಕೆ ಬರುವ ಬಗ್ಗೆ ಸರ್ಕಾರ ನಂತರದಲ್ಲಿ ಪ್ರತಿಕ್ರಿಯಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT