ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂಶುಪಾಲರ ಬಂಧನಕ್ಕೆ ಒತ್ತಾಯ

Last Updated 26 ಜುಲೈ 2014, 12:07 IST
ಅಕ್ಷರ ಗಾತ್ರ

ಬೆಂಗಳೂರು: ಆರು ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದ ವಿಬ್ಗಯೊರ್ ಶಾಲೆಯ ಪ್ರಾಂಶುಪಾಲ ಅಲಿಸ್ಟೇರ್‌ ಲಾಪೋರ್ಟ್‌ ಅವರನ್ನು ಬಂಧಿಸಬೇಕು ಎಂದು ಶಾಲೆಯ ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ.

ಘಟನೆ ನಡೆದ ದಿನ (ಜುಲೈ 2) ಲಾಪೋರ್ಟ್‌ ಶಾಲೆಯಲ್ಲಿದ್ದರು. ವಿದ್ಯಾರ್ಥಿನಿಯ ಪೋಷಕರನ್ನೂ ಅವರು ಭೇಟಿಯಾಗಿದ್ದರು. ಆದರೆ, ಜುಲೈ 17ರಿಂದ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದ ಬಳಿಕ ಪೋಷಕರು ನಿರಂತರವಾಗಿ ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಾಗೂ ಸಿಬ್ಬಂದಿ ವಿಚಾರಣೆ, ತನಿಖೆಯ ಕಾರಣದಿಂದ ಸುಮಾರು ಒಂದು ವಾರ ಮುಚ್ಚಿದ್ದ ಶಾಲೆ ಸೋಮವಾರದಿಂದ ಪುನರಾರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT