ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲೈವುಡ್‌ ಪಿಜಿ ಡಿಪ್ಲೊಮಾ ಕೋರ್ಸ್‌ಗೆ ಬೆಳ್ಳಿ ಹಬ್ಬದ ಸಂಭ್ರಮ

ಕೋರ್ಸ್‌ ಪೂರೈಸಿದ ಎಲ್ಲರಿಗೂ ಉದ್ಯೋಗ
Last Updated 30 ಅಕ್ಟೋಬರ್ 2014, 19:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ‘ಭಾರತೀಯ ಪ್ಲೈವುಡ್‌ ಕೈಗಾರಿಕಾ ಸಂಶೋಧನಾ ಮತ್ತು ತರಬೇತಿ ಸಂಸ್ಥೆ’ಯ ಸ್ನಾತಕೋತ್ತರ (ಪಿಜಿ) ಡಿಪ್ಲೊಮಾ ಕೋರ್ಸ್‌ಗೆ ಬೆಳ್ಳಿ ಹಬ್ಬದ ಸಂಭ್ರಮ. 2013–14ರ ಸಾಲಿನಲ್ಲಿ ಈ ಕೋರ್ಸ್‌­ನಲ್ಲಿ ವ್ಯಾಸಂಗ ಮಾಡಿದ ಎಲ್ಲ 26 ವಿದ್ಯಾರ್ಥಿಗಳಿಗೂ ದೇಶದ ವಿವಿಧ ಪ್ಲೈವುಡ್‌ ಕೈಗಾರಿಕೆಗಳಲ್ಲಿ ಉದ್ಯೋಗ ದೊರೆತಿದೆ.

ಕೋರ್ಸ್‌ ಕುರಿತ ವಿವರಗಳಿಗೆ ದೂರವಾಣಿ: 080– 30534000 ಅನ್ನು ಸಂಪರ್ಕಿಸಬಹುದು. ವೆಬ್‌ಸೈಟ್‌ ವಿಳಾಸ: www.ipirti.gov.in ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ  ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್‌.ಮೊಹಾಂತಿ, ‘ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅಧೀನದಲ್ಲಿರುವ ನಮ್ಮ ಸಂಸ್ಥೆಯು ಸ್ವಾಯತ್ತ ಸಂಸ್ಥೆಯಾಗಿದೆ.  ಇಲ್ಲಿ ಪ್ಲೈವುಡ್‌ ಉದ್ಯಮಕ್ಕೆ ಸಂಬಂಧಿಸಿದಂತೆ  ನಿರಂತರ ಸಂಶೋಧನೆ, ತರಬೇತಿ, ಪರೀಕ್ಷೆ ಮತ್ತು ಮೌಲ್ಯವರ್ಧನೆಯ ಕಾರ್ಯ ನಡೆದಿದೆ’ ಎಂದರು.

‘ಹನ್ನೊಂದು ತಿಂಗಳ ಅವಧಿಯ  ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌­ನಲ್ಲಿ ಇದುವರೆಗೆ 550 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಈಗಷ್ಟೇ ತರಬೇತಿ ಪಡೆದು ಉದ್ಯೋಗಕ್ಕೆ ಸೇರಿ­ರುವ ವಿದ್ಯಾರ್ಥಿಗಳ ಆರಂಭಿಕ ವಾರ್ಷಿಕ ವೇತನ ₨ 2.4 ಲಕ್ಷದಿಂದ ₨ 3.6 ಲಕ್ಷದವರೆಗೆ ಇದೆ. ಕೋರ್ಸ್‌ ಶುಲ್ಕ ₨ 48,500’ ಎಂದು ಹೇಳಿದರು.

‘ಒಂದು ವಾರ ಸೇರಿದಂತೆ ವಿವಿಧ ಅವಧಿಯ ತರಬೇತಿ ಕಾರ್ಯಕ್ರಮಗಳ ಮೂಲಕ 1400 ಮಂದಿ ತರಬೇತಿ ಪಡೆದು­ಕೊಂಡಿದ್ದಾರೆ’ ಎಂದು ಅವರು ಹೇಳಿದರು. ಸಂಸ್ಥೆಯ ಜಂಟಿ ನಿರ್ದೇಶಕ ಡಾ.ಎಸ್.ಕೆ. ನಾಥ್, ವಿಜ್ಞಾನಿ ಸುಜಾತ ಮೊದಲಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT