ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶದ ಬಳಿಕ ಕುತೂಹಲದ ಅಂಶಗಳು...

Last Updated 16 ಮೇ 2014, 19:30 IST
ಅಕ್ಷರ ಗಾತ್ರ

ಗೆದ್ದ ಪ್ರಮುಖರು
ಎಚ್‌.ಡಿ.ದೇವೇಗೌಡ
ಬಿ.ಎಸ್‌.ಯಡಿಯೂರಪ್ಪ
ಡಿ.ವಿ.ಸದಾನಂದಗೌಡ
ಎಂ.ವೀರಪ್ಪ ಮೊಯಿಲಿ
ಮಲ್ಲಿಕಾರ್ಜುನ ಖರ್ಗೆ
ಕೆ.ಎಚ್.ಮುನಿಯಪ್ಪ
ಪ್ರಕಾಶ್‌ ಹುಕ್ಕೇರಿ
ಅನಂತಕುಮಾರ್
ಅನಂತಕುಮಾರ್‌ ಹೆಗಡೆ
ಪ್ರಹ್ಲಾದ ಜೋಶಿ
ಸುರೇಶ ಅಂಗಡಿ
ರಮೇಶ್‌ ಜಿಗಜಿಣಗಿ

ಸೋತ ಪ್ರಮುಖರು
ಎಚ್‌.ಡಿ.ಕುಮಾರಸ್ವಾಮಿ
ಸಿ.ನಾರಾಯಣಸ್ವಾಮಿ
ಬಿ.ಎನ್‌.ಬಚ್ಚೇಗೌಡ
ರೇವೂನಾಯಕ ಬೆಳಮಗಿ
ಚಂದ್ರಶೇಖರಯ್ಯ
ಎನ್‌.ವೈ.ಹನುಮಂತಪ್ಪ
ಸೋತ ಹಾಲಿ ಸಂಸದರು
ಧರ್ಮಸಿಂಗ್‌
ಎಚ್‌.ವಿಶ್ವನಾಥ್‌
ಜಯಪ್ರಕಾಶ್‌ ಹೆಗ್ಡೆ
ರಮೇಶ್‌ಕತ್ತಿ
ಜನಾರ್ದನಸ್ವಾಮಿ
ಜಿ.ಎಸ್‌.ಬಸವರಾಜು
ರಮ್ಯಾ

ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದವರು
ಬಿ.ಎಸ್‌.ಯಡಿಯೂರಪ್ಪ (ಶಿವಮೊಗ್ಗ), ಪ್ರಕಾಶ್‌ ಹುಕ್ಕೇರಿ (ಚಿಕ್ಕೋಡಿ), ಶೋಭಾ ಕರಂದ್ಲಾಜೆ (ಉಡುಪಿ –ಚಿಕ್ಕಮಗಳೂರು), ಬಿ.ಶ್ರೀರಾಮುಲು (ಬಳ್ಳಾರಿ), ಭಗವಂತ ಖೂಬಾ (ಬೀದರ್‌), ಪ್ರತಾಪ ಸಿಂಹ (ಮೈಸೂರು), ಬಿ.ವಿ.ನಾಯಕ (ರಾಯಚೂರು), ಸಿ.ಎಸ್‌.ಪುಟ್ಟರಾಜು (ಮಂಡ್ಯ), ಮುದ್ದಹನುಮೇಗೌಡ (ತುಮಕೂರು), ಕರಡಿ ಸಂಗಣ್ಣ (ಕೊಪ್ಪಳ), ಬಿ.ಎನ್‌.ಚಂದ್ರಪ್ಪ (ಚಿತ್ರದುರ್ಗ).

ಮೂರು ಕಡೆ ಉಪ ಚುನಾವಣೆ
ಸಚಿವ ಪ್ರಕಾಶ್‌ ಹುಕ್ಕೇರಿ, ಶಾಸಕ ಬಿ.ಎಸ್‌.ಯಡಿಯೂರಪ್ಪ ಲೋಕಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ಪ್ರತಿನಿಧಿಸುತ್ತಿರುವ  ಚಿಕ್ಕೋಡಿ, ಶಿಕಾರಿಪುರ  ವಿಧಾನಸಭಾ ಕ್ಷೇತ್ರಗಳು ತೆರವಾಗಲಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಜಯಗಳಿಸಿದ್ದು, ಅವರಿಂದ ತೆರವಾಗಿರುವ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದೆ.

ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಯಡಿಯೂರಪ್ಪ, ಪ್ರಕಾಶ್‌ ಹುಕ್ಕೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ಸೋತ ಶಾಸಕರು
ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ನಾಲ್ವರು ಸೇರಿದಂತೆ ಎಂಟು ಮಂದಿ ಶಾಸಕರು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.

ಈ ಪೈಕಿ ಎಸ್‌.ಎಸ್‌. ಮಲ್ಲಿಕಾರ್ಜುನ (ದಾವಣಗೆರೆ), ಎ.ಮಂಜು (ಹಾಸನ), ವಿನಯ್‌ ಕುಲಕರ್ಣಿ (ಧಾರವಾಡ), ಎಚ್.ಡಿ.ಕುಮಾರಸ್ವಾಮಿ (ಚಿಕ್ಕಬಳ್ಳಾ ಪುರ), ಸಿ.ಎಚ್‌.ವಿಜಯಶಂಕರ್‌ (ಹಾಸನ) ಸೋತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಪ್ರಕಾಶ್‌ ಹುಕ್ಕೇರಿ ಗೆದ್ದಿದ್ದಾರೆ.

ಗೆದ್ದ ಏಕೈಕ ಮಹಿಳೆ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟು 20 ಮಂದಿ ಮಹಿಳೆಯರು ಕಣದಲ್ಲಿದ್ದರು. ಈ ಪೈಕಿ ಬಿಜೆಪಿಯ ಶೋಭಾ ಕರಂದ್ಲಾಜೆ (ಉಡುಪಿ – ಚಿಕ್ಕಮಗಳೂರು) ಮಾತ್ರ ಜಯಗಳಿಸಿದ್ದಾರೆ.

2009ರ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿಯಿಂದ ಜೆ.ಶಾಂತಾ (ಬಳ್ಳಾರಿ) ಜಯಗಳಿಸಿದ್ದರು. 2013ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಮ್ಯಾ ಆಯ್ಕೆಯಾಗಿದ್ದರು.

ಅತಿ ಹೆಚ್ಚು – ಕಡಿಮೆ ಅಂತರ
ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗ ಕ್ಷೇತ್ರದಲ್ಲಿ 3,63,305 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಮಟ್ಟಿಗೆ ಇದು ಅತಿ ದೊಡ್ಡ ಅಂತರ. ರಾಯಚೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ವಿ.ನಾಯಕ ಅವರು ಕೇವಲ 1,499 ಮತಗಳ ಅಂತರದಿಂದ ಗೆದ್ದಿದ್ದಾರೆ. ಇದು ಅತಿ ಕಡಿಮೆ ಅಂತರದ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT