ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈರ್‌ಫಾಕ್ಸ್‌ ಟೂಲ್‌ಬಾರ್‌

ತಂತ್ರೋಪನಿಷತ್ತು
Last Updated 26 ನವೆಂಬರ್ 2015, 8:31 IST
ಅಕ್ಷರ ಗಾತ್ರ

ಬ್ರೌಸರ್‌ ಆರಿಸಿಕೊಳ್ಳುವಾಗ ಕೆಲವರು ಸುರಕ್ಷತೆಗೆ, ಕೆಲವರು ವೇಗಕ್ಕೆ ಮಹತ್ವ ನೀಡುತ್ತಾರೆ. ವೇಗ ಮತ್ತು ಸುರಕ್ಷತೆ ಜತೆಗೆ ಅಷ್ಟೇ ಮಹತ್ವದ ಇನ್ನೊಂದು ಅಂಶ ಉತ್ತಮ ಟೂಲ್‌ಬಾರ್‌ಗಳು. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಇವು ಕೂಡ ಅತಿಯಾದರೆ ಕಿರಿಕಿರಿ. ಆದರೆ, ಬಳಕೆಸ್ನೇಹಿಯಾದ ಕೆಲವು ಆ್ಯಡ್‌–ಆನ್‌ಗಳು ತಡೆಯಿಲ್ಲದ ವೆಬ್‌ ಬ್ರೌಸಿಂಗ್‌ ಅನುಭವ ನೀಡುತ್ತದೆ. ಫೈರ್‌ಫಾಕ್ಸ್‌ ಬ್ರೌಸರ್‌ ಬಳಸುವವರು ಹೊಂದಿರಬೇಕಾದ ಕೆಲವು ಒಳ್ಳೆ ಆ್ಯಡ್‌–ಆನ್‌ಗಳ ಮಾಹಿತಿ ಇಲ್ಲಿದೆ. ಇವುಗಳನ್ನು ಫೈರ್‌ಫಾಕ್ಸ್‌ ವೆಬ್‌ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Foxmarks Bookmark Synchronizer: ಒಂದಕ್ಕಿಂತ ಹೆಚ್ಚು ಪಿಸಿಯಲ್ಲಿ (multiple PCs) ಫೈರ್‌ಫಾಕ್ಸ್‌ ಬ್ರೌಸರ್‌ ಬಳಸುತ್ತಿದ್ದರೆ, ಬುಕ್‌ ಮಾರ್ಕ್‌ಗಳನ್ನು Synchronize ಮಾಡಲು ಇದು ಒಳ್ಳೆಯ ಎಕ್ಸ್‌ಟೆನ್ಷನ್‌. ಬ್ರೌಸಿಂಗ್‌ ಬುಕ್‌ ಮಾರ್ಕ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ, ಈ ಟೂಲ್‌ಬಾರ್‌ ಸ್ವಯಂ ಚಾಲಿತವಾಗಿ ಅದನ್ನು ಅಪ್‌ಡೇಟ್‌ ಮಾಡಿಕೊಳ್ಳುತ್ತದೆ. ಒಂದು ವೇಳೆ ಬುಕ್‌ ಮಾರ್ಕ್‌ ಡಿಲೀಟ್‌ ಆದರೂ, Foxmarks ಸರ್ವರ್‌ನಲ್ಲಿರುವ ಬ್ಯಾಕ್‌ ಅಪ್‌ ಮೂಲಕ ಅದನ್ನು ಮರಳಿ ಪಡೆಯಬಹುದು. ಒಂದು ವೇಳೆ ಇನ್ನೊಬ್ಬರ ಪಿಸಿಯಲ್ಲಿ ನೀವು ಬ್ರೌಸ್‌ ಮಾಡುತ್ತಿದ್ದರೆ Foxmarks server ಮೂಲಕ ನಿಮ್ಮ ಪಿಸಿಯಲ್ಲಿರುವ ಬುಕ್‌ ಮಾರ್ಕ್‌ಗಳನ್ನು ಪಡೆದುಕೊಳ್ಳಬಹುದು.

Secure Login: ಆನ್‌ಲೈನ್‌ ವಹಿವಾಟುಗಳನ್ನು ಸುರಕ್ಷಿತವಾಗಿ ಮಾಡಲು ಈ ಆ್ಯಡ್‌–ಆನ್‌ ನೆರವಾಗುತ್ತದೆ. ಒಂದಕ್ಕಿಂತ ಹೆಚ್ಚು ವೆಬ್‌ ತಾಣಗಳ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ಗಳನ್ನು ಈ ಟೂಲ್‌ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಅಷ್ಟೇ ಅಲ್ಲ ಹ್ಯಾಕರ್‌, cross-site scripting (XSS) ದಾಳಿಯಿಂದಲೂ ರಕ್ಷಿಸುತ್ತದೆ.

BugMeNot: ಜಾಲಿಗನ ವೈಯಕ್ತಿಕ ಮಾಹಿತಿ, ದತ್ತಾಂಶಗಳು ಸೋರಿಕೆಯಾದಂತೆ ತಡೆದು, ಖಾಸಗೀತನ ರಕ್ಷಿಸುವ ಟೂಲ್‌ಬಾರ್‌ ಇದು. ಕೆಲವು ವೆಬ್‌ ಸೈಟ್‌ಗಳಿಗೆ ಲಾಗ್‌–ಇನ್‌ ಆಗಲು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ವೆಬ್‌ ಸೈಟ್‌ಗಳಿಗೆ ಲಾಗಿನ್‌ ಆಗುವಾಗ, ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಇರುವಲ್ಲಿ BugMeNot ಟೂಲ್‌ ಆಯ್ಕೆ ಮಾಡಿಕೊಂಡು ಲಾಗಿನ್‌ ಆದರೆ ಸಾಕು. ಪಾಸ್‌ವರ್ಡ್‌, ಇಮೇಲ್‌ ಐಡಿ, ದೂರವಾಣಿ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಭಯ ಬೇಡ.

Better Gmail 2: ಈ ಆ್ಯಡ್‌–ಆನ್‌ ಬಳಸಿ ನಿಮ್ಮ ಜಿಮೇಲ್‌ ಪುಟವನ್ನು ನಿಮಗಿಷ್ಟ ಬಂದಂತೆ customize ಮಾಡಿಕೊಳ್ಳಬಹುದು. ವಿನ್ಯಾಸ, ಬಣ್ಣ ಬದಲಿಸಬಹುದು. ಅಷ್ಟೇ ಅಲ್ಲ,  ಇಮೇಲ್‌ಗೆ HTML signatures ಕೂಡ ಸೇರಿಸಿಕೊಳ್ಳಬಹುದು.

Adblock Plus: ವೆಬ್‌ ಪುಟ ತೆರೆಯುತ್ತಿದ್ದಂತೆ ದಿಢೀರ್‌ ಪ್ರತ್ಯಕ್ಷವಾಗುವ ಪಾಪ್‌–ಅಪ್‌ ಆ್ಯಡ್‌ಗಳನ್ನು ಈ ಎಕ್ಸ್‌ಟೆನ್ಷನ್ಸ್‌ ತಡೆಯುತ್ತದೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ ಆಟೊ ಪ್ಲೇಯಿಂಗ್‌ ವಿಡಿಯೊ ಕಿರಿಕಿರಿ ಕೂಡ ತಪ್ಪಿಸಬಹುದು. Adblockನಿಂದ  ವೆಬ್‌ ಪುಟ ಲೋಡ್‌ ಆಗಲು ತೆಗೆದುಕೊಳ್ಳುವ ಸಮಯ ಗಣನೀಯವಾಗಿ ತಗ್ಗುತ್ತದೆ.

Sage-Too: ನಿಮ್ಮ ನೆಚ್ಚಿನ ನ್ಯೂಸ್‌ ವೆಬ್‌ಸೈಟ್‌, ಬ್ಲಾಗ್‌ಗಳ RSS feedsಗಳನ್ನು ಸುಲಭವಾಗಿ ಓದಲು, ನಿರ್ವಹಣೆ ಮಾಡಲು ಇದು ಅತ್ಯುತ್ತಮ ಟೂಲ್‌. ಪ್ರತಿ ಬರಹಗಳ summary ಕೂಡ feedsನಲ್ಲಿ ಕಾಣುವುದರಿಂದ ಸುಲಭವಾಗಿ, ಬೇಕಿರುವುದನ್ನು ಆಯ್ಕೆ ಮಾಡಿಕೊಂಡು ಓದಬಹುದು.

Google Preview: ಈ ಟೂಲ್‌ಬಾರ್‌ ಇದ್ದರೆ ಗೂಗಲ್‌ ಸರ್ಚ್‌ನಲ್ಲಿ ಟೈಪ್ ಮಾಡಿ, ಎಂಟರ್‌ ಬಟನ್‌ ಒತ್ತುತ್ತಿದ್ದಂತೆ ಇದು ಪ್ರತಿ ವೆಬ್‌ ಪುಟಗಳ thumbnail image ಮತ್ತು ಪುಟ್ಟ ಸಾರಾಂಶವನ್ನು ನೀಡುತ್ತದೆ. ಇದರಿಂದ ಆ ವೆಬ್‌ಸೈಟ್‌ ಪ್ರವೇಶಕ್ಕೆ ಯೋಗ್ಯವೇ ಇಲ್ಲವೇ ಎಂದು ನಿರ್ಧರಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT