ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌: ಮಸೀದಿಗಳ ಮೇಲೆ ಗ್ರೆನೇಡ್ ದಾಳಿ

Last Updated 8 ಜನವರಿ 2015, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌ (ಎಪಿ): ಫ್ರಾನ್ಸ್‌ನ ಎರಡು ಪಟ್ಟಣಗಳಲ್ಲಿ ಮಸೀದಿಗಳ ಮೇಲೆ ದಾಳಿ ನಡೆದಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯರಾತ್ರಿ ಬಳಿಕ ಲೆಮಾನ್ಸ್‌ ನಗರದ ಮಸೀದಿಯೊಂದರ ಮೇಲೆ   ಮೂರು ನಿಷ್ಕ್ರಿಯ ಗ್ರೆನೇಡ್‌­ಗಳನ್ನು ಎಸೆಯಲಾಗಿತ್ತು. ದಕ್ಷಿಣ ಫ್ರಾನ್ಸ್‌ನ ನರ್‌ಬೋನ್‌ ಬಳಿಯ ಪೊರ್ಟಾನೌವೆಲ್‌ ಜಿಲ್ಲೆಯ ಮಸೀದಿ­ಯೊಂದರ ಪ್ರಾರ್ಥನಾ ಮಂದಿರವನ್ನು ಗುರಿಯಾಗಿಟ್ಟುಕೊಂಡು  ದಾಳಿ ನಡೆಸಲಾಯಿತು.

ಗುಂಡಿನ ದಾಳಿ: ಪ್ಯಾರಿಸ್‌ ಹೊರಗೆ ವ್ಯಕ್ತಿ­ಯೊಬ್ಬ ಗುಂಡು ಹಾರಿಸಿದ ಪರಿ-ಣಾಮ ಮಹಿಳಾ ಪೊಲೀಸ್‌ ಹಾಗೂ ಉದ್ಯೋಗಿ­ಯೊಬ್ಬರು ತೀವ್ರ­ವಾಗಿ ಗಾಯಗೊಂಡಿದ್ದಾರೆ.

ವಿಶ್ವಸಂಸ್ಥೆ ಖಂಡನೆ: ಫ್ರೆಂಚ್‌ ವಾರಪತ್ರಿಕೆ ಕಚೇರಿ ಮೇಲೆ ನಡೆದ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ‘ಈ ಕೃತ್ಯ ಇದು ಅಭಿವ್ಯಕ್ತಿ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ’ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT