ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀಡಂ ಟ್ರೋಫಿ

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಭಾರತ- ದಕ್ಷಿಣ ಆಫ್ರಿಕಾದ ಮುಂಬರುವ ಕ್ರಿಕೆಟ್ ಸರಣಿಗೆ ‘ದ ಮಹಾತ್ಮ ಗಾಂಧಿ- ನೆಲ್ಸನ್ ಮಂಡೇಲಾ ಸರಣಿ’ ಎಂದು ಹೆಸರಿಡಲು ಎರಡೂ ರಾಷ್ಟ್ರಗಳ ಕ್ರೀಡಾ ಸಂಸ್ಥೆಗಳು ನಿರ್ಧರಿಸಿರುವುದು ಸ್ವಾಗತಾರ್ಹ.

ಇದೇ ಅಕ್ಟೋಬರ್‌ನಿಂದ ನಡೆಯಲಿರುವ ಈ ಕ್ರಿಕೆಟ್‌ ಸರಣಿಗೆ ಇಂಥ ಪಿತಾಮಹರ ಹೆಸರಿಡುವುದು ಹೆಮ್ಮೆಯ ವಿಚಾರ. ಇಬ್ಬರೂ ನಾಯಕರು ಅಹಿಂಸೆ ಮತ್ತು ಅಸಹಕಾರ ತತ್ವದ ಮೂಲಕ ತಮ್ಮ ದೇಶಗಳಿಗೆ ಸ್ವಾತಂತ್ರ್ಯ ತಂದುಕೊಟ್ಟವರು. ಶಾಂತಿಯುತ ಮಾದರಿಯಲ್ಲಿ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ಇಡೀ ವಿಶ್ವಕ್ಕೆ ದಾರಿದೀಪವಾದವರು.

ಉಭಯ ತಂಡಗಳ ಟೆಸ್ಟ್ ಸರಣಿ ವಿಜೇತರಿಗೆ ನೀಡಲಾಗುವ ಟ್ರೋಫಿಯನ್ನು ‘ಫ್ರೀಡಂ ಟ್ರೋಫಿ’ ಎಂದು ಕರೆಯಲಿರುವುದು ಸಹ ಸೂಕ್ತವಾಗಿದೆ. ಆದರ್ಶ ನಾಯಕರ ಹೆಸರಿಡುವುದರಿಂದ, ಕ್ರೀಡೆಗಳು ಇನ್ನಷ್ಟು ಜನಪ್ರಿಯಗೊಳ್ಳಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT