ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಿ ಆನಂದ್‌ಗೆ ಪ್ರಶಸ್ತಿ ಗರಿ

Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವರ್ಲ್ಡ್ ಬ್ಯುಸಿನೆಸ್ ಅಸೆಂಬ್ಲಿಯು (ಡಬ್ಲ್ಯೂಬಿಎ) ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟ ಮತ್ತು ಉದ್ಯಮ ಘನತೆಗಾಗಿ ನೀಡುವ ಗೋಲ್ಡನ್ ಯುರೋಪಿಯನ್ ಪ್ರಶಸ್ತಿ ಈ ಬಾರಿ ಬನಿ ಆನಂದ್‌ ಅವರಿಗೆ ಲಭಿಸಿದೆ.
ಇವರು ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್ನ ಸಂಸ್ಥಾಪಕಿಯಾಗಿದ್ದಾರೆ.


ಇತ್ತೀಚೆಗೆ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಡಬ್ಲ್ಯೂಬಿಎ ಶೃಂಗದ ಪ್ರತಿಷ್ಠಿತ ಅರಿಸ್ಟಾಟಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ನಾವು ಮಾಡಿದ ಕೆಲಸವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿರುವುದು ಗೌರವದ ಸಂಗತಿಯಾಗಿದೆ. ಇದು ನಮ್ಮ ಕೆಲಸ ಮುಂದುವರಿಸಲು ಮತ್ತು ಈ ಕ್ಷೇತ್ರದಲ್ಲಿ ಹೊಸತನ್ನು ಸಾಧಿಸಲು ಸ್ಫೂರ್ತಿಯಾಗಲಿದೆ’ ಎಂದು ಬನಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT