ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿಯಲ್ಲಿ ‘ಹೃದಯ್‌’ ಅನುಷ್ಠಾನಕ್ಕೆ ಸಿದ್ಧತೆ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಮಹ­ತ್ವಾಕಾಂಕ್ಷಿ ಯೋಜನೆಯಾದ ಪಾರಂ­ಪರಿಕ ತಾಣ ಅಭಿವೃದ್ಧಿ ಯೋಜನೆ ‘ಹೃದಯ್‌’ಗೆ (‘HRIDAY’--Heritage Develop­ment And Augmentation Yojana)- ಆಯ್ಕೆ­ಯಾಗಿರುವ ರಾಜ್ಯದ ಏಕೈಕ ಪ್ರವಾಸಿತಾಣವಾದ ಐತಿಹಾಸಿಕ ಬಾದಾ ಮಿಯ ಸರ್ವತೋಮುಖ ಅಭಿವೃದ್ಧಿಗೆ ಭರದ ಸಿದ್ಧತೆ ಪ್ರಾರಂಭವಾಗಿದೆ.

ಈ ಯೋಜನೆ ಅನ್ವಯ ಬಾದಾಮಿ ಪಟ್ಟಣಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಮೂಲಕ ಪ್ರವಾಸಿಗರ ಕಣ್ಮನ ಸೂರೆಗೊಳ್ಳುವ ಸುಂದರ ತಾಣವನ್ನಾಗಿ ರೂಪಿಸಲು ಕೇಂದ್ರ ಸರ್ಕಾರದ ನಿರ್ದೇ­ಶನ­ದಂತೆ ಬಾಗಲಕೋಟೆ ಜಿಲ್ಲಾಡಳಿತ ಕ್ರಿಯಾ ಯೋಜನೆ ರೂಪಿಸಿದೆ.

₨22.26 ಕೋಟಿ ಬಿಡುಗಡೆ: ‘ಇದೇ 21ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪಾರಂಪರಿಕ ನಗರಗಳ ಅಭಿವೃದ್ಧಿ ಯೋಜನೆ ಚಾಲನಾ ಸಭೆಯಲ್ಲಿ ಬಾಗಲಕೋಟೆ ಜಿಲ್ಲಾಡ­ಳಿತದ ವತಿಯಿಂದ ಬಾದಾ ಮಿಯ ಐತಿಹಾಸಿಕ ಹಿನ್ನೆಲೆ, ಸದ್ಯದ ಸ್ಥಿತಿಗತಿ ಹಾಗೂ ವಿಶ್ವ ಪ್ರಸಿದ್ಧ ಸ್ಮಾರಕ ಗಳ ಛಾಯಾಚಿತ್ರಗಳನ್ನು ಪ್ರದರ್ಶಿಸ­ಲಾಯಿತು’ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ   ತಿಳಿಸಿದರು.

‘ಜಿಲ್ಲಾಡಳಿತದ ವತಿಯಿಂದ ಪ್ರಥಮ ಹಂತವಾಗಿ ರೂ52.5 ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಭೆಯ ಮುಂದಿಡಲಾಗಿತ್ತು. ಕೇಂದ್ರ ನಗರಾಭಿ­ವೃದ್ಧಿ ಸಚಿವಾಲಯ ಪ್ರಥಮ ಹಂತ ವಾಗಿ ರೂ22.26 ಕೋಟಿ ಅನುದಾನ ನೀಡಲು ಒಪ್ಪಿದ್ದು, ಹಂತಹಂತವಾಗಿ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದೆ’ ಎಂದರು.

‘ಈ ಯೋಜನೆ ಅನ್ವಯ ಬಾದಾಮಿ ರೈಲು ನಿಲ್ದಾಣದಿಂದ ಗುಹಾಂತರ ದೇವಾಲ­ಯದವರೆಗೆ ರಸ್ತೆ ವಿಸ್ತರಣೆ  ಮಾಡಲಾಗುವುದು. ಅಗಸ್ತ್ಯತೀರ್ಥ ಹೊಂಡದ ಬಳಿ ಇರುವ 69 ಮನೆಗಳು ಹಾಗೂ ತಟಕೋಟೆ ಬಳಿ ಇರುವ ಮನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದ ಬಳಿಕ ಈ ಪ್ರದೇಶದಲ್ಲಿ ಚಾಲುಕ್ಯ ಕಲಾಗ್ರಾಮವನ್ನು ನಿರ್ಮಿಸ­ಲಾಗುವುದು’ ಎಂದರು.

‘ಅಗಸ್ತ್ಯತೀರ್ಥ ಅಭಿವೃದ್ಧಿಪಡಿಸಿ ಜಲ­ಕ್ರೀಡೆಗೆ ಅವಕಾಶ ಕಲ್ಪಿಸಲಾಗು­ವುದು. ಬಾದಾಮಿ ಬೆಟ್ಟದಲ್ಲಿ ಪರ್ವತಾ­ರೋಹಣ ಕೇಂದ್ರ ಅಭಿವೃದ್ಧಿ, ಬನಶಂಕರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾ­ಗು­ವುದು ಹಾಗೂ ಪಾರಂಪರಿಕ ಉದ್ಯಾನ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.

‘ಭಾರತದ ಹೃದಯ’

ಬಾದಾಮಿ, ವಾರಾಣಸಿ, ಅಮೃತ­ಸರ, ಅಜ್ಮೀರ್‌, ಅಮರಾವತಿ, ಕಾಂಚಿ­ಪುರಂ, ಪುರಿ, ಗಯಾ, ನಾಗ­ಪಟ್ಟಣಂ, ಮಥುರಾ, ಭುವನೇಶ್ವರ ಮತ್ತು ಗುಂಟೂರು ಒಳಗೊಂಡಂತೆ ದೇಶದ ಒಟ್ಟು 12 ವಿಶ್ವಪ್ರಸಿದ್ಧ ಪರಂಪರೆ ತಾಣಗಳನ್ನು ‘ಭಾರತದ ಹೃದಯ’ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ.
ಈ ನಗರ – ಪಟ್ಟಣಗಳು ನೋಡು­ಗರ ಮನ­ಸೂ­ರೆಗೊಳ್ಳುವಂತೆ ಮಾ ಡುವ ಉದ್ದೇಶದಿಂದ ಅವುಗಳ ಸರ್ವತೋ­ಮುಖ ಅಭಿವೃದ್ಧಿಗಾಗಿ ‘ಹೃದಯ್‌’  ಯೋಜನೆ ಸಿದ್ಧಪಡಿಸಿದೆ.

ಬಾದಾಮಿ ಪಟ್ಟಣಕ್ಕೆ ಪ್ರವಾಸಿಗರಿಗೆ ಸ್ವಾಗತ ಕೋರುವ ಆಕರ್ಷಕ ಹೆಬ್ಬಾ­ಗಿಲು ನಿರ್ಮಾಣ, ರಸ್ತೆ ಡಾಂಬರೀ ಕರಣ, ಪಾದಚಾರಿ ಮಾರ್ಗವನ್ನು ನಿರ್ಮಾಣ ಮತ್ತು ಪಟ್ಟಣದ ಸ್ವಚ್ಛತೆಗೆ ಆದ್ಯತೆ, ಬಾದಾಮಿ ಸ್ಮಾರಕಗಳಿಗೆ ಹಾಗೂ ಬೆಟ್ಟಗಳಿಗೆ ದೀಪಾಲಂಕಾರ ಮಾಡುವ ಮೂಲಕ ದೇಶ, ವಿದೇಶದಿಂದ ಬರುವ ಪ್ರವಾಸಿಗಳಿಗೆ ಬಾದಾಮಿಯ ಐತಿಹಾಸಿಕ ಗತವೈಭವ ಕಣ್ಮುಂದೆ ಕಟ್ಟಿಕೊಡಲಾ­ಗುವುದು’ ಎಂದರು.

ಶೀಘ್ರ ಚಾಲನೆ: ‘ಹೃದಯ್‌’ ಯೋಜನೆಯಲ್ಲಿ ಬಾದಾಮಿ ಸ್ಥಾನ ಪಡೆಯಲು ಕಾರಣ­ರಾದ ಸಂಸದ ಪಿ.ಸಿ.ಗದ್ದಿಗೌಡರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿ, ಬಾದಾ ಮಿ­ಯಲ್ಲಿ ‘ಹೃದಯ್‌’ ಯೋಜನೆ ಅನು­ಷ್ಠಾನಕ್ಕೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ದು ತಿಂಗಳೊಳಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಬಾದಾಮಿಯನ್ನು ಯುನೆಸ್ಕೊ ‘ವಿಶ್ವ­ಪ­ರಂಪರೆ’ ಪಟ್ಟಿಗೆ ಸೇರ್ಪಡೆ ಮಾಡಲು ಇದ್ದ ಬಹುದಿನಗಳ ಅಡೆತಡೆಗಳು ‘ಹೃದಯ್‌’ ಯೋಜನೆ ಅನುಷ್ಠಾನ­ದಿಂದಾಗಿ ಶೀಘ್ರ ನಿವಾರಣೆ ಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT