ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟೌನ್ ಸೆಲ್ಫಿ ಸ್ಟೋರಿ

ಪಂಚರಂಗಿ
Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕುಳಿತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನಿಮ್ಮ ಮುಖವನ್ನು ನೀವೇ ಕ್ಲಿಕ್ಕಿಸಿಕೊಂಡು ನೋಡುವ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಖಯಾಲಿ ನಿಮ್ಮದೂ ಆಗಿರಬಹುದು. ಅದು ನಿಮಗಷ್ಟೇ ಹಿಡಿದ ಹುಚ್ಚಲ್ಲ ಎನ್ನುವುದು ಸಮಾಧಾನದ ಸಂಗತಿ. ಏಕೆಂದರೆ ಬಾಲಿವುಡ್‌ನಲ್ಲಿ ಇತ್ತೀಚೆಗೆ ಈ ಸೆಲ್ಫಿ ಜ್ವರ ಹೆಚ್ಚಿದಂತೆ ಕಾಣುತ್ತಿದೆ.

ಹೌದು, ಪಾರ್ಟಿ ಇರಲಿ, ಶೂಟಿಂಗ್ ಆಗಲಿ, ವಾಕಿಂಗ್‌ ಇರಲಿ, ಔಟಿಂಗ್‌ಗೆ ಹೋಗಲಿ, ಅದೇನೂ ಇಲ್ಲದೇ ಸುಮ್ಮನೇ ಮನೆಯಲ್ಲಿ ಹಾಯಾಗಿರಲಿ... ಎಲ್ಲೆಲ್ಲೂ ಸೆಲ್ಫಿ ತೆಗೆದುಕೊಂಡು, ಕೂಡಲೇ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡುವಲ್ಲಿ ಬಾಲಿವುಡ್‌ ಖ್ಯಾತನಾಮರು ಈಗ ಬ್ಯುಸಿ.

ತಮ್ಮ ಬದುಕಿನ ಪ್ರತಿ ಹೆಜ್ಜೆಯನ್ನು, ಎಲ್ಲಾ ಕ್ಷಣಗಳನ್ನು ನೆನಪಿಟ್ಟುಕೊಳ್ಳಲೋ, ಜನರಿಗೆ ತೋರಿಸಲೋ ಗೊತ್ತಿಲ್ಲ, ಒಟ್ಟಾರೆ ಶೂಟಿಂಗ್‌ಗೂ ಮುನ್ನ ಮೇಕಪ್ ನಡೆಯುವಾಗಿನಿಂದ ಹಿಡಿದು, ಐಸ್‌ಕ್ರೀಮ್‌ ಸವಿಯುವ, ವರ್ಕೌಟ್‌ ಮಾಡುವ, ಅಪರೂಪಕ್ಕೆ ಅಡುಗೆ ಮನೆಯಲ್ಲಿ ನಿಂತಿರುವ ಎಲ್ಲಾ ಘಟನಾವಳಿಗಳನ್ನು ಸೆರೆಹಿಡಿಯುವ ಹುಚ್ಚನವರು ಸಾಕಷ್ಟು ಜನ ಇಲ್ಲಿ ಸಿಗುತ್ತಾರೆ.

ಮಿಜ್ವಾನ್ ಷೋದಲ್ಲಿ ಸೆಲ್ಫಿ ಜಾತ್ರೆ
ಬಿ–ಟೌನ್ ಮಹಿಳೆಯರಿಗೆ ಜಾಗತಿಕ ವೇದಿಕೆ ಒದಗಿಸಲು ಶಬಾನಾ ಏರ್ಪಡಿಸಿದ್ದ ಮಿಜ್ವಾನ್ ಫ್ಯಾಷನ್ ಷೋದಲ್ಲಿ ಸೆಲ್ಫಿಯದೇ ಜಾತ್ರೆ. ಒಂದೆರಡು ಮಾತು, ಮಾತಿಗಿಂತ ಹೆಚ್ಚು ಪೋಸು ಕೊಡುವುದರಲ್ಲಿಯೇ ಅನೇಕರು ಬ್ಯೂಸಿ ಆಗಿದ್ದು ಕಂಡುಬರುತ್ತಿತ್ತು. ಮಾತ್ರವಲ್ಲ, ಹಾಗೆ ತೆಗೆದುಕೊಂಡ ಸೆಲ್ಫಿ ಕ್ಷಣದಲ್ಲಿಯೇ ಟ್ವಿಟರ್‌ನಲ್ಲಿ ಹರಿದಾಡಿ ಹತ್ತಾರು ಲೈಕ್ಸ್, ಕಾಮೆಂಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡ ಸೆಲ್ಫಿಗಳ ಸಾಲಿನಲ್ಲಿ ಇದೂ ಒಂದು.

ಹೋದಲ್ಲೆಲ್ಲ ಸೆಲ್ಫಿ
ಹ್ಯಾಪಿ ನ್ಯೂ ಇಯರ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಊರೂರು ಸುತ್ತಿದ ಚಿತ್ರತಂಡ, ಹೋದಲ್ಲೆಲ್ಲ ಸೆಲ್ಫಿ ಕ್ಲಿಕ್ಕಿಸಿಕೊಂಡು ಶೇರ್ ಮಾಡುವುದನ್ನು ಮಾತ್ರ ಮರೆಯಲಿಲ್ಲ.

ಮೋದಿ ಜೊತೆ ಸೋನಂ ಕಪೂರ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕ್ಷಣವನ್ನು ಹಾಗೇ ಸೆರೆಹಿಡಿದುಕೊಂಡರು ಸೋನಂ ಕಪೂರ್. ಫೋಟೊ ತೆಗೆದುಕೊಂಡ ಕೆಲವೇ ಕ್ಷಣಗಳಲ್ಲಿ ಸೋನಂ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು. ಅಷ್ಟೇ ವೇಗವಾಗಿ ಚಿತ್ರಕ್ಕೆ ಲೈಕ್‌ ಹಾಗೂ ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿತ್ತು.

ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣೀತಿ ಚೋಪ್ರಾ ಕ್ಲಿಕ್ ಮಾಡಿದ ಈ ಚಿತ್ರದಲ್ಲಿ ಮೂರು ತಲೆಮಾರುಗಳ ಬಾಲಿವುಡ್ ನಟಿಯರ ಸಮ್ಮಿಲನವಿದೆ. ಬಿಟೌನ್‌ನಿಂದ ಹಾಗೂ ಅಭಿಮಾನಿಗಳಿಂದ ಹೆಚ್ಚು ಮನ್ನಣೆ ಗಳಿಸಿದ ಚಿತ್ರಗಳಲ್ಲಿ ಇದೂ ಒಂದು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT