ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬಂದ್‌ಗೆ ಬಿಗಿ ಪೊಲೀಸ್ ಭದ್ರತೆ

Last Updated 29 ಜುಲೈ 2014, 20:33 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಸರಣಿ ಅತ್ಯಾಚಾರ ಪ್ರಕರಣಗಳು ಹಾಗೂ ಬೆಳಗಾವಿಯಲ್ಲಿ ನಡೆ­ಯು­ತ್ತಿ­ರುವ ಎಂಇಎಸ್‌ ಕಾರ್ಯಕರ್ತರ ಪುಂಡಾ­­­ಟಿಕೆಯನ್ನು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಜುಲೈ 31­ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಆ ದಿನ ಯಾವುದೇ ಅಹಿ­ತ­ಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

‘ಬಂದ್‌ನ ದಿನ ನಗರದ 17 ಸಾವಿರ ಪೊಲೀಸರು ಬಂದೋಬಸ್ತ್‌ ಕಾರ್ಯ­ದಲ್ಲಿ ತೊಡಗಿರುತ್ತಾರೆ. ಜತೆಗೆ ಕ್ಷಿಪ್ರ ಕಾರ್ಯ­ಪಡೆಯ (ಆರ್‌ಪಿಎಫ್‌) ಎರಡು ಕಂಪೆನಿಗಳು, ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 52 ತುಕಡಿ, ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್‌) 20 ತುಕಡಿ ಹಾಗೂ 1,000 ಗೃಹ ರಕ್ಷಕ ದಳದ ಸಿಬ್ಬಂದಿ­ಯನ್ನು ಭದ್ರತೆಗೆ ನಿಯೋಜಿ­ಸ­ಲಾ­­ಗುವುದು’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸ್ಥಳ­ಗ­ಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸ­ಲಾ­ಗು­ವುದು. ಆ ಸ್ಥಳಗಳಲ್ಲಿ ಗಸ್ತು ಸಹ ಹೆಚ್ಚಿಸ­ಲಾ­ಗುವುದು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಮತ್ತು ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.ರಜೆ ಘೋಷಿಸಿಲ್ಲ: ಬಂದ್‌ನ ದಿನ ಶಾಲಾ–ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
‘ಕಾಲೇಜುಗಳಿಗೆ ರಜೆ ನೀಡುವ ಸಂಬಂಧ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಸರ್ಕಾರದಿಂದ ಸುತ್ತೋಲೆ ಬಂದ ನಂತರ ಈ ಬಗ್ಗೆ ನಿರ್ಧಾರ ಪ್ರಕಟಿಸುಸಲಾಗುವುದು’ ಎಂದು ಬೆಂಗಳೂರು ವಿ.ವಿಯ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್‌ ಮೊಹ್ಸಿನ್ ಸಹ ‘ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿಲ್ಲ’ ಎಂದು ಹೇಳಿದ್ದಾರೆ.

ಬಿಎಂಟಿಸಿ, ಮೆಟ್ರೊ ಸೇವೆ ಲಭ್ಯ:  ಬಂದ್‌ ದಿನ ಬಿಎಂಟಿಸಿ ಮತ್ತು ಮೆಟ್ರೊ ಸೇವೆ ಎಂದಿನಂತೆ ಲಭ್ಯವಾಗಲಿವೆ.
ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೀಜ್, ‘ಬಸ್‌ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗು­ವು­ದಿಲ್ಲ. ಪ್ರಯಾಣಿಕರ ಅನುಕೂಲ­ಕ್ಕಾಗಿ ಪೊಲೀ­ಸರ ನೆರವು ಪಡೆದು ಸೇವೆ ಒದಗಿ­ಸಲಾಗುವುದು’ ಎಂದು ಹೇಳಿದರು.

ಅದೇ ರೀತಿ ‘ಮೆಟ್ರೊ ಸೇವೆ ಕೂಡ ಎಂದಿನಂತೆ ಲಭ್ಯವಿರುತ್ತದೆ’ ಎಂದು ಬಿಎಂ­ಆ­ರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇ­­ಶಕ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದ್ದಾರೆ.ಆಟೊ ಚಾಲಕರು ಮತ್ತು ಟ್ಯಾಕ್ಸಿ ಚಾಲ­ಕರ ಒಕ್ಕೂಟ ಸಹ ಬಂದ್‌ ಕಾರಣ­ದಿಂದ ಸೇವೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ‘ಬಂದ್‌ಗೆ ಬೆಂಬಲ ಸೂಚಿಸುವುದು ಚಾಲಕರ ವೈಯಕ್ತಿಕ ವಿಚಾರ’ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT