ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮನೆ ಬೆಲೆ ಇಳಿಕೆ

Last Updated 17 ಜೂನ್ 2014, 19:30 IST
ಅಕ್ಷರ ಗಾತ್ರ

ಚುನಾವಣೋತ್ತರ ಶುಭ ದಿನಗಳ ಆಶಾವಾದದಲ್ಲಿ ದಿನದೂಡಿದ ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಏರಿಳಿತದ ಸಮ್ಮಿಶ್ರಣದ ವಿದ್ಯಮಾನ ಕಾಣಿಸಿಕೊಂಡಿದೆ.

ಒಂದೆಡೆ, ದೇಶದ ಪ್ರಮುಖ 12 ನಗರಗಳಲ್ಲಿ ಮನೆಗಳ ಬೆಲೆ ಏರಿಕೆಯಾಗಿರುವುದು ಕಂಡುಬಂದರೆ, ಇನ್ನೊಂದೆಡೆ, 12 ನಗರಗಳಲ್ಲಿ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬೆಲೆ ಏರಿಕೆ
ದೆಹಲಿ ಮತ್ತು ಮುಂಬೈ  ಸೇರಿದಂತೆ ದೇಶದ ಪ್ರಮುಖ 12 ನಗರಗಳಲ್ಲಿ ಈ ವರ್ಷದ ಜನವರಿ-ಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ, ಈ ನಗರಗಳಲ್ಲಿ ಮಾರಾಟಕ್ಕಿಟ್ಟಿರುವ  ಮನೆಗಳ ಬೆಲೆಯಲ್ಲಿ ಶೇ 7.1ರಷ್ಟು ಏರಿಕೆ ಕಾಣಿಸಿಕೊಂಡಿದೆ.

ಅದಕ್ಕೂ ಹಿಂದಿನ ತ್ರೈಮಾಸಿಕಕ್ಕೆ (2013ರ ಅಕ್ಟೊಬರ್- ಡಿಸೆಂಬರ್ ಅವಧಿಗೆ) ಹೋಲಿಕೆ ಮಾಡಿದಾಗ ಸದ್ಯ ಮನೆಗಳ ಬೆಲೆಯು ಕನಿಷ್ಠ ಶೇ 1.3ರಿಂದ (ಭೂಪಾಲ್‌ನಲ್ಲಿ) ಗರಿಷ್ಠ ಶೇ 7.1ರ ವರೆಗೆ (ಸೂರತ್‌ನಲ್ಲಿ) ಹೆಚ್ಚಳವಾಗಿದೆ ಎನ್ನುತ್ತದೆ ‘ರಾಷ್ಟ್ರೀಯ ವಸತಿ ಬ್ಯಾಂಕ್‌’ನ (ಎನ್‌ಎಚ್‌ಬಿ) ಅಧ್ಯಯನ ಸೂಚ್ಯಂಕ.

ಬೆಲೆ ಇಳಿಕೆ
ಏತನ್ಮಧ್ಯೆ, ಇತರೆ 12 ನಗರಗಳಲ್ಲಿ ಮನೆಗಳ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ವಿಜಯವಾಡದಲ್ಲಿ ಬೆಲೆ ಯು ಶೇ 0.6ರಷ್ಟು ಕುಸಿತವಾದರೆ, ಪಟನಾದಲ್ಲಿ ಶೇ 5.7ಕ್ಕಿಂತ ಕೆಳಕ್ಕಿಳಿದಿದೆ. ಆದರೆ, ಫರಿದಾಬಾದ್ ಮತ್ತು ಕೊಚ್ಚಿಯಲ್ಲಿ ಮನೆ ದರಗಳು ಸ್ಥಿರವಾಗಿವೆ.

ಅಹಮದಾಬಾದ್‌ ಗರಿಷ್ಠ ಏರಿಕೆ
ಅಹಮದಾಬಾದ್ ಶೇ 6.1, ಚೆನ್ನೈ ಶೇ 5.8, ಕೋಲ್ಕತ್ತ ಶೇ 5.1, ಲಖನೌ ಶೇ 4.9, ರಾಯಪುರ್ ಶೇ 4.4, ಮುಂಬೈ ಶೇ 3.2, ನಾಗಪುರ ಶೇ 2.9, ಡೆಹ್ರಾಡೂನ್ ಶೇ 2.7, ಹೈದರಾಬಾದ್‌ ಶೇ 2.2, ದೆಹಲಿ ಶೇ 1.5 ಮತ್ತು ಭೂಪಾಲ್ ಶೇ 1.3ರಷ್ಟು ಬೆಲೆ ಏರಿಕೆಯಾಗಿದೆ.

ಜೈಪುರ ಗರಿಷ್ಠ ಇಳಿಕೆ
ಜೈಪುರ ಶೇ 3.8, ಗೌವಾಹಟಿ ಶೇ 3.75, ಬೆಂಗಳೂರು ಶೇ 3.6, ಮಿರತ್ ಶೇ 3.5, ಭುವನೇಶ್ವರ ಶೇ 3.47 ಮತ್ತು ಲೂಧಿಯಾನಾದಲ್ಲಿ ಶೇ 3.3, ಚಂಡೀಗಡ ಶೇ 2.7, ಕೊಯಮತ್ತೂರು ಶೇ 1.7, ಇಂಧೋರ್ ಶೇ 1.6, ಪುಣೆ ಶೇ 1.3 ಮತ್ತು ವಿಜಯವಾಡದಲ್ಲಿ ಮನೆಗಳ ಬೆಲೆಯಲ್ಲಿ ಶೇ 0.6ರಷ್ಟು  ಇಳಿಕೆಯಾಗಿದೆ.

2014ರ ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ದೇಶದ 26 ನಗರಗಳ ವಿವಿಧ ಪ್ರದೇಶ ಮತ್ತು ಬೇರೆ ಬೇರೆ ವಲಯಗಳಲ್ಲಿ ನಿರ್ಮಿಸಲಾಗಿರುವ ಮನೆಗಳ ಬೆಲೆಯನ್ನು ಆಧರಿಸಿ ಈ ಏರಿಕೆ ಇಳಿಕೆಯ ಲೆಕ್ಕಾಚಾರದ ಅಧ್ಯಯನ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT