ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನೆಜಿರ್‌ ಭುಟ್ಟೊ ಹತ್ಯೆ : ವಿದ್ಯಾರ್ಥಿ ಕೈವಾಡ

Last Updated 27 ಫೆಬ್ರುವರಿ 2015, 12:54 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌(ಪಿಟಿಐ): ರಾವಲ್ಪಿಂಡಿಯಲ್ಲಿ ೨೦೦೭ರಲ್ಲಿ ನಡೆದಿದ್ದ ಬೆನೆಜಿರ್‌ ಭುಟ್ಟೊ ಹತ್ಯೆ ಪ್ರಕರಣದಲ್ಲಿ ‘ಫಾದರ್‌ ಆಫ್‌ ದಿ ತಾಲಿಬಾನ್‌’ ಎಂಬ ಮದರಸಾದ  ದರುಲ್‌ ಉಲಂ ಎಂಬ ವಿದ್ಯಾರ್ಥಿಯ ಕೈವಾಡ ಇದೆ ಎಂದು ತನಿಖಾಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ.

ಭುಟ್ಟೊ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಫೆಡರಲ್‌ ತನಿಖಾ ಸಂಸ್ಥೆ (ಎಫ್‌ಐಎ) ಮತ್ತು ಪೇಶಾವರದ ಇನ್‌ಸ್ಟೆಕ್ಟರ್‌ ನಾಸೀರ್‌ ಅಹಮದ್‌  ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ಗೆ ಈ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ಆತ್ಮಹತ್ಯಾ ಬಾಂಬ್‌ ದಾಳಿ ಮೂಲಕ ಭುಟ್ಟೊ ಹತ್ಯೆ ಮಾಡಿದ  ಆರೋಪಿಗಳಾದ ಅಬ್ದುಲ್ಲಾ ಅಲಿಯಾಸ್‌ ಸದ್ದಾಂ ನಾದಿರ್‌, ರಶೀದ್‌ ಅಲಿಯಾಸ್‌ ತುರಬಿ ಮತ್ತು ಫಯಾಜ್‌ ಮಹಮ್ಮದ್‌ ಕೂಡ ಈ ಮದರಸಾದ ವಿದ್ಯಾರ್ಥಿಗಳು ಎಂಬ ಸಂಗತಿಯನ್ನು ತನಿಖಾಧಿಕಾರಿಗಳು ಬಯಲಿಗೆಳೆದಿದ್ದಾರೆ.

ಪಾಕ್‌ನ ನೌಸೇರ ಜಿಲ್ಲೆಯ ಕೈಬರ್‌ ಪಕ್ತುನ್ವಾದಲ್ಲಿ ಸಮೀವುಲ್‌ ಹಕ್‌ ಎಂಬ ವ್ಯಕ್ತಿ ಈ ಮದರಸಾ ನಡೆಸುತ್ತಿದ್ದಾರೆ. ತಾಲಿಬಾನ್‌ ಸಂಘಟನೆಯ ಉಗ್ರ ಮುಖಂಡರನ್ನು ತಯಾರಿಸುವುದಕ್ಕೆ ಈ  ಮದರಸಾ ಕುಖ್ಯಾತಿ ಪಡೆದಿದೆ.

ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ವಿಶೇಷ ನ್ಯಾಯಾಲಯದಲ್ಲಿ  300ಕ್ಕೂ ವಿಚಾರಣೆಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT