ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಪೌರ ಕಾರ್ಮಿಕರ ಮನವಿ

Last Updated 5 ಮಾರ್ಚ್ 2015, 7:36 IST
ಅಕ್ಷರ ಗಾತ್ರ

ಯಾದಗಿರಿ:  ನಗರದಲ್ಲಿ ವಾಸಿಸುವ ಸಪಾಯಿ ಕರ್ಮಚಾರಿಗಳು ಪರಿಶಿಷ್ಟ ಜಾತಿಯಲ್ಲಿಯೇ ಅತೀ ಹಿಂದುಳಿದವ­ರಾಗಿದ್ದು, ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸಫಾಯಿ ಕರ್ಮಚಾರಿಗಳ ಸಂಘದ ವತಿ­ಯಿಂದ ಇಲ್ಲಿಯ ಹೆಚ್ಚುವರಿ ಜಿಲ್ಲಾಧಿ­ಕಾರಿ ಶಿವಾನಂದ ಕರಾಳೆ ಅವರಿಗೆ ಮನವಿ ಸಲ್ಲಿಸಲಾಯಿತು.

ಸಫಾಯಿ ಕರ್ಮಚಾರಿಗಳು ಸಾಮಾ­ಜಿಕ­ವಾಗಿ, ಆರ್ಥಿಕವಾಗಿ ಮತ್ತು ಮುಖ್ಯ­ವಾಗಿ ಶೈಕ್ಷಣಿಕವಾಗಿ ಬಹಳಷ್ಟು ಹಿಂದೆ ಬಿದ್ದಿದ್ದು, ಈ ಬಗ್ಗೆ ಅಧ್ಯಯನ ಮಾಡಲು ಕೇಂದ್ರದಲ್ಲಿ ಮತ್ತು ರಾಜ್ಯ­ದಲ್ಲಿ ಆಯೋಗವನ್ನು ರಚಿಸಲಾಗಿದೆ.

ಜನವರಿ 21 ರಂದು ಜಿಲ್ಲೆಗೆ ಆಗಮಿ­ಸಿದ್ದ ಆಯೋಗದ ಅಧ್ಯಕ್ಷ ನಾರಾಯಣ ಅವರು ಜಿಲ್ಲಾಧಿಕಾರಿಗಳ ಸಭಾಂಗಣ­ದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದರು. ಸಫಾಯಿ ಕರ್ಮಚಾರಿಗಳಿಗೆ ಆಗುತ್ತಿ­ರುವ ಅನಾ್ಯಯಗಳ ಬಗ್ಗೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಇವರಿಗೆ ತಲುಪದೇ ಲೂಟಿಯಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.

ಸಂಬಂಧಿಸಿದ ಇಲಾಖಾ ಅಧಿಕಾರಿ­ಗಳ ನಿರ್ಲಕ್ಷ್ಯ, ಹಲವಾರು ಯೋಜನೆ­ಗಳು ಕಾರ್ಮಿಕರಿಗೆ ತಲುಪದೇ ಇರು­ವುದು, ಸಫಾಯಿ ಕರ್ಮಚಾರಿಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರು­ವುದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದೇ ಇರುವುದು ಮತ್ತು ಅವರ ಅವಲಂಬಿತರಿಗೆ ಸುಲಭ ಶೌಚಾ­ಲಯ ನಿರ್ವಹಣೆ ನೀಡಲು ಸಭೆಯಲ್ಲಿ ಆಯೋಗದ ಅಧ್ಯಕ್ಷರು ತಿಳಿಸಿದ್ದರು.

ಒಂದು ತಿಂಗಳಾದರೂ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಫಾಯಿ ಕರ್ಮಚಾರಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದು ಹೇಳಿದರು.

ಕೂಡಲೇ ಈ ಬಡ ಕಾರ್ಮಿಕರ ಮೇಲೆ ಕರುಣೆಯನ್ನು ತೋರಬೇಕು. ಮನೆಗಳ ನಿರ್ಮಾಣ, ಆರೋಗ್ಯ ಕಾಪಾ­ಡಲು ಮತ್ತು ಶೈಕ್ಷಣಿಕವಾಗಿ ಮೇಲೆ­ತ್ತಲು ಕೇಂದ್ರ ಮತ್ತು ರಾಜ್ಯ ಸರ್ಕಾರ­ಗಳ ಯೋಜನೆಗಳನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಸಫಾಯಿ ಕರ್ಮಚಾರಿಗಳ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಭಾಸ್ಕ­ರಬಾಬು ನೇತೃತ್ವದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಣಿ -ದೀಪಕ್, ಕೃಷಾ್ಣಬಾಯಿ -ಶಾಮಾ­ಸಿಂಗ್, ಜಗ­ದೀಶ್ವರಿ- ಪ್ರವೀಣ, ಶಾಮಾ­ಬಾಯಿ ಕಿರ­ಣ­ಪಾಲ್, ಶಾರದಾ­, ರಾಜೇಶ, ಮೇಹ­ಪಾಲ್, ಗೀತಾ­ಬಾಯಿ, ಪ್ರಮೀಳಾ,  ರೂಪಾ, ಅರುಣಾ, ಸುನಿತಾ, ಅಪರ್ಣಾ, ಗೋಪಾಲ್, ಕಲ್ಪನಾ ಹಟ್ವಾಲ್ ಮತ್ತು ಪುಷ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT