ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಈಡೇರಿಸದಿದ್ದರೆ ನೋಟಿಸ್‌

ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಆರ್.ಯಾವಗಲ್‌
Last Updated 2 ಸೆಪ್ಟೆಂಬರ್ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ನೀಡುವ ಭರವಸೆಗಳನ್ನು ಸಕಾಲದಲ್ಲಿ ಈಡೇರಿಸಲು ವಿಫಲವಾದ ಪ್ರಕರಣ­ಗಳಲ್ಲಿ ಅಗತ್ಯ ಕಂಡುಬಂದರೆ ಸಂಬಂ­ಧಿಸಿದ ಸಚಿವರನ್ನೂ ಸಮಿತಿಯ ಎದುರು ಕರೆಸಿ ವಿವರಣೆ ಪಡೆಯಲಾ­ಗುವುದು ಎಂದು ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಆರ್‌.ಯಾವಗಲ್‌ ತಿಳಿಸಿದರು.

ಸಮಿತಿಯ ಈ ವರ್ಷದ ಮೊದಲ ಸಭೆ ಮಂಗಳವಾರ ವಿಕಾಸಸೌಧದಲ್ಲಿ ನಡೆಯಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿಗಳಿಗೂ ನೋಟಿಸ್‌ ನೀಡಿ ವಿವರಣೆ ಪಡೆಯುವ ಅಧಿಕಾರ ಸಮಿತಿಗೆ ಇದೆ. ಅಗತ್ಯ ಕಂಡು­ಬಂದರೆ ಈ ಅಧಿಕಾರ ಚಲಾಯಿಸಲಾಗುವುದು ಎಂದರು.

ರಾಜ್ಯ ಸರ್ಕಾರದ 35 ಇಲಾಖೆಗಳಿಗೆ ಸಂಬಂಧಿಸಿದಂತೆ 1996ರಿಂದ 2013ರವರೆಗೆ ನೀಡಿರುವ 2,638 ಭರವಸೆ­ಗಳು ಬಾಕಿ ಇವೆ. ಈ ಭರವಸೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ಆಗಿರುವ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ. 1996ರಿಂದ 2004ರವರೆಗಿನ ಭರವಸೆಗಳನ್ನು ಆದ್ಯತೆ ಮೇಲೆ ಅನುಷ್ಠಾನಕ್ಕೆ ತರುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಈ ವರ್ಷ 2,638 ಭರವಸೆಗಳ ಕುರಿತು ಸಮಿತಿ ಚರ್ಚೆ ನಡೆಸಲಿದೆ. ಈ ಪೈಕಿ 1,405 ಬೇಡಿಕೆಗಳ ಕುರಿತು ಉತ್ತರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ, ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗ­ಣಿಸಿಲ್ಲ. ಆದ್ದರಿಂದ ವಿವರಣೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯ­ದರ್ಶಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದರು.

2013–14ನೇ ಸಾಲಿನಲ್ಲಿ ಸಮಿತಿಯು 13 ಇಲಾಖೆ­ಗಳಿಗೆ ಸಂಬಂಧಿಸಿದ 1,560 ಭರವಸೆಗಳ ಬಗ್ಗೆ ಚರ್ಚೆ ನಡೆಸಿದೆ. 1,260 ಭರವಸೆಗಳಿಗೆ ಸಂಬಂಧಿಸಿದ ಚರ್ಚೆಯನ್ನು ಮುಕ್ತಾಯಗೊಳಿಸಲಾಗಿದೆ. 300 ಭರವಸೆಗಳ ಬಗೆಗಿನ ಚರ್ಚೆಯನ್ನು ಕಾಯ್ದಿರಿಸಲಾಗಿದೆ. 13 ಇಲಾಖೆಗಳಿಗೆ ಸಂಬಂಧಿಸಿದಂತೆ ಎರಡು ವರದಿಗಳನ್ನು ವಿಧಾನಮಂಡಲ­ದಲ್ಲಿ ಮಂಡಿಸಲಾಗಿದೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT