ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ 9 ವಿಕೆಟ್‌ಗಳ ಜಯ

ವಿಶ್ವಕಪ್‌ ಕ್ರಿಕೆಟ್‌ 2015
Last Updated 28 ಫೆಬ್ರುವರಿ 2015, 15:36 IST
ಅಕ್ಷರ ಗಾತ್ರ

ಪರ್ತ್‌: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಯುಎಇ ವಿರುದ್ಧ ಭಾರತ ಶನಿವಾರ ಒಂಬತ್ತು ವಿಕೆಟ್‌ಗಳ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಯುಎಇ ತಂಡ 31.3 ಓವರ್‌ಗಳಲ್ಲಿ 102 ರನ್‌ಗಳಿಸಿ ಆಲೌಟ್‌ ಆಗಿತ್ತು. ಭಾರತ 18.5 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟದಿಂದ 104 ರನ್‌ ಗಳಿಸಿ ಜಯ ಸಾಧಿಸಿತು.

ಆರಂಭಿಕ ಆಟಗಾರರಾಗಿ ಬಂದ ಶಿಖರ್‌ ಧವನ್‌ 14 ರನ್‌ ಗಳಿಸಿ ಮೊಹಮ್ಮದ್‌ ನವೀದ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದರು. ಬಳಿಕ ಬಂದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಜತೆಯಾಟದಲ್ಲಿ ಭಾರತವನ್ನು ವಿಜಯದ ಹಾದಿಯಲ್ಲಿ ಮುನ್ನಡೆಸಿದರು.

ರೋಹಿತ್‌ ಶರ್ಮ 55 ಎಸೆತಗಳಲ್ಲಿ 57 ಮತ್ತು ವಿರಾಟ್‌ ಕೊಹ್ಲಿ 41 ಎಸೆತಗಳಲ್ಲಿ 33 ರನ್‌ ಕಲೆಹಾಕಿದರು. ನಾಲ್ಕು ವಿಕೆಟ್‌ ಪಡೆದ ಆರ್‌.ಅಶ್ವಿನ್‌ ಪಂದ್ಯ ಪುರುಷ ಗೌರವಕ್ಕೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT