ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಒಬಾಮ: ಮೊದಲ ದಿನದ ದಿನಚರಿ

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

*ಬೆಳಿಗ್ಗೆ 10: ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ದೆಹಲಿಗೆ ಬಂದಿಳಿದ ಬರಾಕ್ ಒಬಾಮ ಹಾಗೂ ಮಿಷೆಲ್‌ ದಂಪತಿ. ಶಿಷ್ಟಾಚಾರ ಬದಿಗಿಟ್ಟು ವಿಮಾನ ನಿಲ್ದಾಣದಲ್ಲಿ ದಂಪತಿಯನ್ನು ಖುದ್ದಾಗಿ ಬರ­ಮಾಡಿ­ಕೊಂಡ ಪ್ರಧಾನಿ ನರೇಂದ್ರ ಮೋದಿ. ಪಾಲಂ ವಿಮಾನ ನಿಲ್ದಾಣದಿಂದ ಹೋಟೆಲ್‌ ಐಟಿಸಿ ಮೌರ್ಯದತ್ತ ಒಬಾಮ ದಂಪತಿ ಪಯಣ

*ಅಪರಾಹ್ನ 12: ಬೀಸ್ಟ್ ಕ್ಯಾಡಿಲ್ಯಾಕ್‌ ಕಾರಿನಲ್ಲಿ ರಾಷ್ಟ್ರಪತಿ ಭವನಕ್ಕೆ ಆಗ­ಮನ. ರಾಷ್ಟ್ರಪತಿ ಪ್ರಣವ್‌, ಪ್ರಧಾನಿ ಮೋದಿ ಅವರಿಂದ ಸ್ವಾಗತ.  ಮೂರು ಪಡೆಗಳಿಂದ ಗೌರವ ವಂದನೆ ಸ್ವೀಕಾರ

*ಅಪರಾಹ್ನ 12.40: ರಾಜಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ. ಭೇಟಿಯ ಸ್ಮರಣಾರ್ಥ ಸಸಿ ನೆಟ್ಟ ಅಮೆರಿಕ ಅಧ್ಯಕ್ಷ

*ಮಧ್ಯಾಹ್ನ 1.30: ಹೈದರಾಬಾದ್‌ ಹೌಸ್‌ನಲ್ಲಿ ಮೋದಿ ಅವರೊಂದಿಗೆ ಔತಣಕೂಟದಲ್ಲಿ ಭಾಗಿ

*ಮಧ್ಯಾಹ್ನ 3.45: ಹೈದರಾಬಾದ್‌ ಹೌಸ್‌ನ ಹುಲ್ಲಿನ ಮೇಲೆ ಲಘು ವಾಯು ವಿಹಾರ. ಚಹಾ ಸೇವಿಸುತ್ತ ಪರಮಾಣು ಸಹಕಾರ ಒಪ್ಪಂದ ಕುರಿತು ಚರ್ಚೆ

*ಸಂಜೆ 4.30: ಪ್ರಧಾನಿ ಮೋದಿ ಜತೆ ಜಂಟಿ ಪತ್ರಿಕಾಗೋಷ್ಠಿ

*ಸಂಜೆ 6.45: ಭಾರತದಲ್ಲಿರುವ  ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ, ಕುಟುಂಬ ಸದಸ್ಯರೊಂದಿಗೆ ಹೋಟೆಲ್‌ ಐಟಿಸಿ ಮೌರ್ಯದಲ್ಲಿ ಭೇಟಿ

*ಸಂಜೆ 7.50: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ  ಹಮ್ಮಿಕೊಂಡ ಔತಣಕೂಟದಲ್ಲಿ ಭಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT