ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ರಾಜಕಾರಣ: ಚಿಂತಕರ ­ವ್ಯಾಖ್ಯಾನ

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯ­ವನ್ನು ‘ಪ್ರಚಂಡ ಗೆಲುವು’ ಎಂದು ಬಣ್ಣಿ­ಸಿರುವ ಅಮೆರಿಕದ ಚಿಂತಕರು ಮತ್ತು ತಜ್ಞರು, ಭಾರತೀಯ ರಾಜ­ಕಾರಣ­ವನ್ನು ಪುನರ್‌­ವ್ಯಾಖ್ಯಾನಿಸುವ ಅವಕಾಶವನ್ನು ಮೋದಿ ಅವರಿಗೆ ಇದು ನೀಡಿದೆ ಎಂದು ಪ್ರತಿ­ಪಾದಿಸಿದ್ದಾರೆ.

‘ಇದೊಂದು ಪ್ರಚಂಡ ವಿಜಯ. ಇದು ಕೇವಲ ಮೋದಿ ಅವರಿಗೆ ದೊರೆತ ಜಯವಲ್ಲ. ಬದಲಿಗೆ ಆರ್ಥಿಕತೆಯ ಕೆಟ್ಟ ನಿರ್ವಹಣೆ ಮತ್ತು ನಿಷ್ಕ್ರಿಯ ನೀತಿಗಳ ವಿರುದ್ಧ ಸ್ಪಷ್ಟವಾಗಿ ಧ್ವನಿ ಎತ್ತಿರುವ ಭಾರತದ ಜನತೆಗೆ ಲಭಿಸಿದ ಗೆಲುವು’ ಎಂದು ಅಂತರರಾಷ್ಟ್ರೀಯ ಶಾಂತಿ­ಗಾಗಿ­ರುವ ಕಾರ್ನೆಗಿ ದತ್ತಿಯ ಆಶ್ಲೆ ಟೆಲಿಸ್‌ ಹೇಳಿದ್ದಾರೆ.

‘ಭಾರತದ ಅರ್ಥ ವ್ಯವಸ್ಥೆ­ಯಲ್ಲಿರುವ ಸಮಸ್ಯೆಗಳನ್ನು ಪರಿಹರಿ­ಸುವ ನಿಟ್ಟಿನಲ್ಲಿ  ಈ ಜಯವು ಮೋದಿ ಅವರಿಗೆ ಹೊಸ ಅವಕಾಶ ಸೃಷ್ಟಿಸಿದೆ ಎಂದು ಆಶಿಸ­ಲಾ­ಗಿದೆ. ಅದು ಸಾಧ್ಯ­ವಾದರೆ, ಅಮೆರಿಕ–ಭಾರತ ಸಂಬಂಧ­ಕ್ಕೆ ಶುಭ ಸುದ್ದಿ­ಯಾ­ಗಲಿದೆ. ಅದಕ್ಕೂ ಮುನ್ನ,  ಸಂಬಂಧ  ಉತ್ತಮ ಪಡಿಸುವ ನಿಟ್ಟಿನಲ್ಲಿ ಅಮೆರಿಕ ಇನ್ನಷ್ಟು ಕೆಲಸ ಮಾಡ­ಬೇಕಾ­ಗಿದೆ’ ಎಂದು ಟೆಲಿಸ್‌ ಅಭಿ­ಪ್ರಾಯ­ಪಟ್ಟಿದ್ದಾರೆ.

‘ಬಿಜೆಪಿಯು ಏಕೈಕ ಪಕ್ಷವಾಗಿ ಭಾರಿ ಬಹುಮತ ಪಡೆದಿರುವುದರಿಂದ ದಶಕ­ಗಳ ಹಿಂದೆ ಕಾಂಗ್ರೆಸ್‌ ಮಾಡಿರುವ ರೀತಿ­ಯಲ್ಲಿ ಭಾರತದ ರಾಜಕೀಯವನ್ನು ಮರು ವ್ಯಾಖ್ಯಾನ ಮಾಡುವ ಅವಕಾಶ­ಮೋದಿ ಮುಂದಿದೆ. ಒಂದು ವೇಳೆ ಅವರು ತಮ್ಮ ಗೆಲುವಿನ ಸೂತ್ರಗಳಿಗೆ ಬದ್ಧರಾಗಿದ್ದರೆ, ಅವರು ಭಾರತದ ಪ್ರಧಾನಿ­ಯಾಗಿ ಸುದೀರ್ಘ ಅವಧಿ ಕಾರ್ಯ­ನಿರ್ವಹಿಸಲಿದ್ದಾರೆ’ ಎಂದು ಅವರು ಭವಿಷ್ಯ ನುಡಿದಿದ್ದಾರೆ.

‘ಮೋದಿ ಅವರ ಗೆಲುವು ಆರ್ಥಿಕತೆಗೆ ದೊರೆತ ದೊಡ್ಡ ಜಯ’ ಎಂದು ಮತ್ತೊಬ್ಬ ಆರ್ಥಿಕ ತಜ್ಞ ಪ್ರೊ. ರಸೆಲ್‌ ಗ್ರೀನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT