ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್ ನಡುವೆ ಉಡುಗೊರೆ ರಾಜತಂತ್ರ

ಮೋದಿ ತಾಯಿಗೆ ಷರೀಫ್‌ ಸೀರೆ ಕೊಡುಗೆ
Last Updated 5 ಜೂನ್ 2014, 19:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತಮ್ಮ ತಾಯಿಗೆ ನೀಡಿದ್ದ ಶಾಲಿನ ಉಡುಗೊರೆಗೆ ಪ್ರತಿ­ಯಾಗಿ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ  ತಾಯಿ  ಹೀರಾಬೆನ್‌ ಅವರಿಗೆ ಬಿಳಿ ಸೀರೆ­ಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮೇ 26ರಂದು ನವದೆಹಲಿಯಲ್ಲಿ ನಡೆದ ಪ್ರಧಾನಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ  ಮರಳುವಾಗ ಷರೀಫ್‌ ಅವರಿಗೆ ಶಾಲು ಉಡುಗೊರೆ ನೀಡಿದ್ದ ಮೋದಿ, ‘ಪಾಕಿಸ್ತಾನಕ್ಕೆ ಮರಳಿದ ನಂತರ ಈ ಉಡುಗೊರೆಯನ್ನು ನಿಮ್ಮ ತಾಯಿ ಶಮೀಮ್ ಅಖ್ತರ್‌ ಅವರಿಗೆ ತಲುಪಿಸಿ’ ಎಂದು  ಕೋರಿದ್ದರು.

ಇದಕ್ಕೆ ಪ್ರತಿಯಾಗಿ ಷರೀಫ್‌ ಕೂಡಾ ಈಗ ಮೋದಿ ಅವರ ತಾಯಿ ಹೀರಾ ಬೆನ್‌ ಅವರಿಗೆ ಸೀರೆಯನ್ನು  ಉಡುಗೊರೆ­ಯಾಗಿ ಕಳುಹಿಸಿ­ಕೊಟ್ಟಿ­ದ್ದಾರೆ.  ಪಾಕಿಸ್ತಾನದಿಂದ ಬಂದ ಬಿಳಿ ಸೀರೆಯ ಜತೆ ಹೀರಾಬೆನ್‌ ಅವರಿರುವ ಚಿತ್ರ ಈಗಾಗಲೇ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ.

‘ನವಾಜ್ ಷರೀಫ್‌ ನನ್ನ ತಾಯಿಗೆ ಸುಂದರವಾದ ಬಿಳಿ ಸೀರೆಯೊಂದನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ಅವರಿಗೆ ನಾನು ಆಭಾರಿ. ಆದಷ್ಟು ಬೇಗ ಈ ಸೀರೆಯನ್ನು ನನ್ನ ತಾಯಿಗೆ ತಲುಪಿಸುವೆ’ ಎಂದು ಮೋದಿ ಗುರುವಾಗ ಟ್ವೀಟ್‌ ಮಾಡಿದ್ದಾರೆ.

ಷರೀಫ್‌ ಕುರಿತು ಮೋದಿ ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಟ್ವೀಟ್‌ ಮಾಡಿದ್ದರು. ತಮ್ಮಿಬ್ಬರ ನಡುವಣ ಭಾವುಕ ಕ್ಷಣಗಳು ಮತ್ತು ಮಾತುಕತೆಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT