ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸೆರೆ

Last Updated 21 ಆಗಸ್ಟ್ 2014, 19:48 IST
ಅಕ್ಷರ ಗಾತ್ರ

ಬೆಂಗಳೂರು: ಸಬ್‌ಇನ್‌ಸ್ಪೆಕ್ಟರ್‌ ­­ ಎಂದು ಹೇಳಿ­ಕೊಂಡು ಪತ್ರಕ­ರ್ತೆ­ಯೊಬ್ಬರನ್ನು ಮದುವೆ­ಯಾ­ಗುವು­ದಾಗಿ ನಂಬಿಸಿ ಅತ್ಯಾ­ಚಾರ ಎಸಗಿದ ಆರೋಪದ ಮೇಲೆ ರವಿ­ಕುಮಾರ್‌ (40) ಎಂಬುವರನ್ನು ಬಾಗ­ಲೂರು ಪೊಲೀಸರು ಬಂಧಿಸಿದ್ದಾರೆ.

ರವಿಕುಮಾರ್‌, ನಗರದ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯ­ಕರಾ­ಗಿ­ದ್ದಾರೆ. ಈಗಾ­ಗಲೇ ವಿವಾ­­ಹಿತ­­ರಾಗಿ­ರುವ ಅವರಿಗೆ ಮಗಳಿ­ದ್ದಾಳೆ.

ಆರೋಪಿ ತಾನು ಉಪ್ಪಾ­ರ­ಪೇಟೆ ಠಾಣೆಯಲ್ಲಿ ಎಸ್‌ಐ ಎಂದು ಸುಳ್ಳು ಹೇಳಿ ಪತ್ರಕರ್ತೆಯನ್ನು ಪರಿ­ಚ­ಯಿ­­ಸಿ­ಕೊಂಡಿದ್ದರು. ಅಲ್ಲದೇ, ಅವ­ರನ್ನೇ ಮದು­­ವೆ­ಯಾಗುವುದಾಗಿ ಮತ್ತು ಸರ್ಕಾರಿ ಕೆಲಸ ಕೊಡಿಸು­ವು­ದಾಗಿ ನಂಬಿಸಿ ಏಪ್ರಿಲ್‌ನಲ್ಲಿ ತೀರ್ಥ­ಹಳ್ಳಿಯ ಪೊಲೀಸ್‌ ಪ್ರವಾ­ಸಿಮಂದಿ­ರಕ್ಕೆ ಕರೆದುಕೊಂಡು ಹೋಗಿ ಅತ್ಯಾ­ಚಾರ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರಕರ್ತೆ ಗರ್ಭಿಣಿಯಾದ ನಂತರ ರವಿ­ಕುಮಾರ್‌, ಅವರಿಂದ ದೂರ­ವಾಗಿ ಮದು­ವೆಯಾಗಲು ನಿರಾಕ­ರಿಸಿ­ದ್ದಾರೆ. ಅಲ್ಲದೇ, ಅತ್ಯಾ­ಚಾರದ ಸಂಗ­ತಿ­ಯನ್ನು ಯಾರಿಗೂ ತಿಳಿಸದಂತೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಪತ್ರಕರ್ತೆ ನೀಡಿದ ದೂರು ಆಧರಿಸಿ ಅತ್ಯಾಚಾರ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖ­­­ಲಿ­­ಸಿಕೊಂಡು ರವಿಕುಮಾರ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿವಾಹಿತರಾಗಿರುವ ಆ ಪತ್ರಕರ್ತೆ ಕೌಟುಂಬಿಕ ಕಾರಣಕ್ಕೆ ಸುಮಾರು ಆರು ವರ್ಷಗಳ ಹಿಂದೆಯೇ ಪತಿ­ಯಿಂದ ದೂರ­ವಾಗಿದ್ದಾರೆ. ಅವರಿಗೆ ಒಬ್ಬಳು ಮಗ­ಳಿ­ದ್ದಾಳೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT