ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಕಾಂಗ್ರೆಸ್‌ ಬಿಕ್ಕಟ್ಟು: ಸೋನಿಯಾಗೆ ಸಂಧಾನದ ಹೊಣೆ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ಮಂಬೈ (ಪಿಟಿಐ): ಮಹಾರಾಷ್ಟ್ರ ಕಾಂಗ್ರೆ­ಸ್‌ನಲ್ಲಿ ಎದ್ದಿ­ರುವ ವಿವಾದವನ್ನು ಶಮನ­ಗೊಳಿ­ಸಲು ಮುಖ್ಯ­­ಮಂತ್ರಿ ಪೃಥ್ವಿರಾಜ್‌ ಚವಾಣ್‌ ಮತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಮಾಣಿಕ­ರಾವ್‌ ಠಾಕ್ರೆ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ­ದ ನಾರಾಯಣ ರಾಣೆ ಅವರೊಂದಿಗೆ ಮಂಗಳ­ವಾರ ಮಾತುಕತೆ ನಡೆಸಿದರು.

ತಮ್ಮ ರಾಜೀ­ನಾಮೆ ಹಿಂಪಡೆ­ಯು­ವಂತೆ ರಾಣೆ ಅವರ ಮನವೊಲಿಸಲು ಚವಾಣ್‌ ಮತ್ತು ಠಾಕ್ರೆ ಅವರು ನಡೆಸಿದ  ಪ್ರಯತ್ನಗಳು ಫಲ ನೀಡಲಿಲ್ಲ. ಹೀಗಾಗಿ ಈ ಬಿಕ್ಕಟ್ಟು ಬಗೆಹರಿಸುವ ಜವಾಬ್ದಾರಿ­ಯನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಅವರಿಗೆ ಬಿಡಲಾಗಿದೆ.
‘ನಾನು, ಚವಾಣ್‌ ಮತ್ತು ಠಾಕ್ರೆ ಮಧ್ಯೆ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಸೋನಿಯಾ ಭೇಟಿ  ನಂತರ ರಾಜೀ­ನಾಮೆಗೆ ಕಾರಣ­ವಿರುವ  ಅಂಶ­ಗಳ ಬಗ್ಗೆ ಪ್ರಸ್ತಾಪ ಮಾಡು­ತ್ತೇನೆ’ ಎಂದು ರಾಣೆ ಸುದ್ದಿಗಾರರಿಗೆ ತಿಳಿಸಿದರು.

‘ಸರ್ಕಾರಕ್ಕೆ ನಿಮ್ಮ ಸೇವೆ ಅಗತ್ಯ. ರಾಜೀನಾಮೆ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿ­ದರು. ಆದರೆ, ರಾಜೀನಾಮೆ ಪತ್ರದಲ್ಲಿ ಉಲ್ಲೇ­ಖಿಸಿರುವ ವಿಷಯಗಳ ಬಗ್ಗೆ ಮೊದಲು ಪ್ರತಿಕ್ರಿಯಿಸಲು ನಾನು ತಿಳಿಸಿದೆ’ ಎಂದು ರಾಣೆ ಹೇಳಿದರು.

ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣೀಟ್ಟಿದ್ದೀರಾ ಎಂಬ ಪತ್ರ­ಕರ್ತರ ಪ್ರಶ್ನೆಗೆ ‘ಅಂತಹ ಯಾವುದೇ ಬೇಡಿಕೆಯನ್ನು ನಾನು ಇಟ್ಟಿಲ್ಲ. ನನ್ನ ರಾಜೀನಾಮೆ ಅಂಗೀಕರಿಸು­ವುದರಲ್ಲಿ ಪರಿಹಾರ ಅಡಗಿದೆ’ ಎಂದರು.

‘ರಾಜೀನಾಮೆ ಪತ್ರದಲ್ಲಿ ಉಲ್ಲೇಖಸಿ­ರುವ ಅಂಶಗಳ ಬಗ್ಗೆ ಪರಿಹಾರ  ಕಂಡು ಹಿಡಿಯೋಣ. ಈಗ ರಾಜೀ­ನಾಮೆ ಹಿಂಪ­ಡೆ­ಯಿರಿ’ ಎಂದು ರಾಣೆ ಅವ­ರಿಗೆ ಸೂಚಿಸ­ಲಾಗಿದೆ. ಒಪ್ಪಂದದ ಮೂಲಕ ಸಮಸ್ಯೆ ಬಗೆಹರಿಯಲಿದೆ ಎನ್ನುವ ವಿಶ್ವಾಸವನ್ನು ಚವಾಣ್‌ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT