ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸಾಧನೆ ದಾಖಲಾಗಲಿ

ವಿಶ್ವ ಹಿಂದೂ ಸಮ್ಮೇಳನದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ
Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ರಾಷ್ಟ್ರ ನಿರ್ಮಾಣ­­­­­ದಲ್ಲಿ ಮಹಿಳೆ­ಯ­­ರದ್ದೂ ಮಹ­ತ್ತರ­ ಪಾತ್ರವಿದೆ. ಅವರು ತಮ್ಮ ಸಾಧನೆ­ಗಳನ್ನು ದಾಖಲಿ­ಸಬೇಕು’ ಎಂದು ಕೇಂದ್ರ ವಾಣಿಜ್ಯ ರಾಜ್ಯ ಖಾತೆ ಸಚಿವೆ ನಿರ್ಮಲಾ ಸೀತಾ­ರಾಮನ್ ಸಲಹೆ ನಿಡಿದ್ದಾರೆ.

ಇಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಸಮ್ಮೇಳ­ನ­ದಲ್ಲಿ ಶನಿವಾರ, ‘ರಾಜಕೀಯ ಮತ್ತು ಸಾಮಾಜಿಕ ನಾಯ­ಕ­ತ್ವ­­ದಲ್ಲಿ ಹಿಂದೂ ಮಹಿಳೆಯರ ಪಾಲ್ಗೊ­ಳ್ಳು­ವಿಕೆ’ ಕುರಿತು ಅವರು ಮಾತನಾಡಿದರು.

‘ಮಹಿಳೆಯರು ದೇಶಕ್ಕಾಗಿ ಮತ್ತು ಸಮಾಜ­ಕ್ಕಾಗಿ ಮೊದ­ಲಿನಿಂದಲೂ ದುಡಿದೇ ಇದ್ದಾರೆ. ಅದನ್ನು ದಾಖ­ಲಿ­­ಸುವ ಕೆಲಸ ಆರಂಭಿಸಬೇಕು. ಆದರದು ಸ್ವಪ್ರತಿಷ್ಠೆಯ ವಿಷಯ­ವಾ­ಗದೆ, ಉತ್ತಮ ದಾಖಲೆಗಳಾಗಬೇಕು. ಅವನ್ನು ಹೊರ ಜಗತ್ತಿಗೆ ತೋರಿಸಬೇಕು. 21ನೇ ಶತ­ಮಾನ­ದಲ್ಲಿ ಇಂತಹ ಒಂದು ವಿಶಿಷ್ಟ ದಾಖಲಾತಿಯ ಅವಶ್ಯಕತೆಯಿದೆ’ ಎಂದು ಅವರು ಹೇಳಿದರು.

‘ರಾಜಕಾರಣ ಎಂಬುದು ಒಂದು ಮುಕ್ತ ಪ್ರವೇಶ­ವುಳ್ಳ ಪೆಟ್ಟಿಗೆಯಿದ್ದಂತೆ. ಅದು ಎಲ್ಲರನ್ನೂ ತನ್ನೊಳಗೆ ಎಳೆದು­­ಕೊಳ್ಳುತ್ತದೆ. ಹೀಗಾಗಿ ಅದು ಕೆಲವರಿ­ಗಷ್ಟೇ ಮೀಸ­ಲಾಗಿರಬೇಕಿಲ್ಲ. ಮಹಿಳೆ­ಯರು ಇಂದು ರಾಜ­ಕಾರಣ­­ದಲ್ಲಿ­ದ್ದಾರೆ. ಮುಂದೆಯೂ ಈ ಕ್ಷೇತ್ರದಲ್ಲಿ ಅವರು ಇರಲೇಬೇಕು’ ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ‘ಮಹಿಳೆಯರಿಗೆ ಶಿಕ್ಷಣ ನೀಡು­ವತ್ತ ನಮ್ಮ ಗಮನ ಕೇಂದ್ರೀಕೃತ­ವಾಗ­ಬೇಕು’ ಎಂದರು.
ಆಯ್ಕೆ ಸ್ವಾತಂತ್ರ್ಯ ಬಳಸಿ: ಮಹಿಳೆಯರು ಆಯ್ಕೆ ಸ್ವಾತಂತ್ರ್ಯ­ವನ್ನು ಬಳಸಲು ಮುಂದಾಗಬೇಕು. ಆದರೆ ಯುಕ್ತವಾಗಿ, ಸರಿಯಾದ ಮಾರ್ಗ­ದಲ್ಲಿ ಈ ಹಕ್ಕನ್ನು ಬಳಸಿಕೊಳ್ಳ­ಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಮಾಧ್ಯಮಗಳು ಮಹಿಳೆಯರನ್ನು ಸರಕಿನಂತೆ ಬಿಂಬಿಸು­ತ್ತಿರುವ ಸಿದ್ಧಾಂತ­ಗಳು, ನಿರೂಪಣೆಗಳು, ಕಥೆಗಳನ್ನು ನೀವು ಸುಮ್ಮನೆ ನೋಡು­ತ್ತೀರಿ ಮತ್ತು ಕಣ್ಣೀರು ಹಾಕುತ್ತೀರಿ. ಆದರೆ ಮಹಿಳೆಯರು ಇದಕ್ಕಿಂತಲೂ ಭಿನ್ನವಲ್ಲವೆ? ಹೊಸತನಕ್ಕೆ ಮುಂದಡಿಯಿಟ್ಟ ಮಹಿಳೆಯರ ಮೇಲೆ ಒತ್ತಡ ಬಂದೊಡನೆ ಇದು ನೈತಿಕ
ಪೊಲೀ­ಸ್‌ಗಿರಿ ಎಂದು ಕೂಗುತ್ತೇವೆ. ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಳುವ ಮುನ್ನ, ನಾವು ಏನು ಮಾಡಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು ಎಂದರು.

ಮಹಿಳೆಯರು ಭಾಗವಹಿಸಿದ ಚಿಪ್ಕೋ ಚಳವಳಿಯಂತಹ ಉದಾರಣೆಗಳು ನಮ್ಮ ಮುಂದಿವೆ. ಮಹಿಳೆಯರು ಆಯ್ಕೆ ಸ್ವಾತಂ­ತ್ರ್ಯವನ್ನು ಬಳಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT