ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಂದ್ರ ಗುಪ್ತ ಪಿಟಿಐ ನೂತನ ಅಧ್ಯಕ್ಷ

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಿಂದಿ ದೈನಿಕ ‘ಜಾಗರಣ’ದ ವ್ಯವ­ಸ್ಥಾಪಕ ನಿರ್ದೇಶಕ ಮಹೇಂದ್ರ ಮೋಹನ್‌ ಗುಪ್ತ ಅವರು ಭಾರತೀಯ ಪತ್ರಿಕಾ ಮಂಡಳಿ (ಪಿಟಿಐ) ಅಧ್ಯಕ್ಷ­ರಾಗಿ ಮತ್ತು ‘ಬಾಂಬೆ ಸಮಾಚಾರ’ ಪತ್ರಿಕೆಯ ವ್ಯವ­ಸ್ಥಾಪಕ ನಿರ್ದೇಶಕ ಹೊರ್ಮುಸ್ಜಿ ಎನ್‌ ಕಾಮಾ ಉಪಾಧ್ಯಕ್ಷರಾಗಿ ಬುಧವಾರ ಅವಿ­ರೋಧ­­ವಾಗಿ ಆಯ್ಕೆಯಾಗಿದ್ದಾರೆ.

ಹಿಂದಿ, ಇಂಗ್ಲಿಷ್‌, ಪಂಜಾಬ್‌ ಮತ್ತು ಗುಜ­ರಾತಿ ಪ್ರಕಟಣೆಗಳ ಜತೆಗೆ ಪ್ರತಿನಿತ್ಯ 34 ಮುದ್ರಣಗಳನ್ನು ಪ್ರಕಟಿಸುವ ಜಾಗ­ರಣ ಪ್ರಕಾಶನಕ್ಕೂ ಗುಪ್ತ ಸಂಪಾದಕ ಮಂಡಳಿಯ ನಿರ್ದೇಶಕರಾ­ಗಿದ್ದಾರೆ. 

ಗುಪ್ತ, ಕಾಮಾ ಮತ್ತು ನಿರ್ಗಮಿತ ಅಧ್ಯಕ್ಷ ‘ಪ್ರಜಾವಾಣಿ‘ ಸಂಪಾದಕ ಕೆ.ಎನ್‌.­ಶಾಂತಕುಮಾರ್‌ ಅವರು ಸೇರಿದಂತೆ ಟೈಮ್ಸ್‌ ಆಫ್‌ ಇಂಡಿಯಾದ ವಿನೀತ್‌ ಜೈನ್‌, ಹಿಂದಿ ಸಮಾಚಾರ್‌ನ  ವಿಜಯ್‌ ಕುಮಾರ ಛೋಪ್ರಾ, ದಿ. ಹಿಂದೂ ಪತ್ರಿಕೆಯ ಎನ್‌.ರವಿ,  ಆನಂದ ಬಜಾರ್‌ ಪತ್ರಿಕೆಯ ಅವೀಕ್‌ ಕುಮಾರ್‌ ಸರ್ಕಾರ್‌,  ಮಾತೃಭೂಮಿಯ ಎಂ.ಪಿ.­ವೀರೇಂದ್ರ ಕುಮಾರ್‌, ದಿನ್‌ಮಲಾರ್‌ ಪತ್ರಿಕೆಯ ಆರ್‌. ಲಕ್ಷ್ಮೀಪತಿ, ಮಲ­ಯಾಳಂ ಮನೋರಮಾದ ರಿಯದ್‌ ಮ್ಯಾಥ್ಯೂ, ಹಿಂದೂಸ್ತಾನ ಟೈಮ್ಸ್‌ನ ಸಂಜಯ್‌ ನಾರಾ­ಯಣ್‌ ಮತ್ತು ಇಂಡಿಯನ್‌ ಎಕ್ಸ್‌ಪ್ರೆಸ್‌ನ ವಿವೇಕ್‌ ಗೋಯೆಂಕಾ ಅವರು ಪಿಟಿಐ ಆಡಳಿತ ಮಂಡಳಿ ಸದಸ್ಯರಾಗಿರುತ್ತಾರೆ. ಪಿಟಿಐ ಆಡಳಿತ ಮಂಡಳಿಯ 66ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT