ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಝಿ ಪದಚ್ಯುತಿಗೆ ಕಸರತ್ತು

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪಟ್ನಾ (ಐಎಎನ್‌ಎಸ್‌): ‘ಮುಖ್ಯ­ಮಂತ್ರಿ ಕಚೇರಿ­ಯಲ್ಲಿ ನನ್ನ ದಿನಗಣನೆ ಆರಂಭವಾ­ಗಿದೆ’ ಎಂದು ಬಿಹಾರದ ಮುಖ್ಯ­ಮಂತ್ರಿ  ಜೀತನ್‌  ರಾಮ್‌ ಮಾಂಝಿ ಹೇಳಿರುವ ಬೆನ್ನಲ್ಲೇ ಅವರನ್ನು ಮುಖ್ಯ­ಮಂತ್ರಿ ಹುದ್ದೆ­ಯಿಂದ ಕೆಳಗಿಳಿ­ಸಲು ತೆರೆ­ಮರೆಯ ಕಸರತ್ತು ಆರಂಭ ಆಗಿದೆ ಎನ್ನುವ ಸುದ್ದಿ ರಾಜ­ಕೀಯ ವಲಯದಲ್ಲಿ ಹರಿದಾ­ಡುತ್ತಿದೆ.

‘ನನ್ನನ್ನು ಮುಖ್ಯಮಂತ್ರಿ ಹುದ್ದೆ­ಯಿಂದ ಕೆಳಗಿಳಿಸಲು ಪ್ರಯತ್ನಗಳು ನಡೆ­ದಿವೆ. ಇದನ್ನು ನಾನು ಬಲ್ಲೆ, ನವೆಂಬರ್‌ ಅಂತ್ಯದ­ವರೆಗೆ ಈ ಹುದ್ದೆಯಲ್ಲಿರು­ತ್ತೇನೆಂದು ಹೇಳಲು ಸಾಧ್ಯವಿಲ್ಲ’ ಎಂದು ಮಾಂಝಿ ಹೇಳಿದ್ದಾರೆ.

ಮಾಂಝಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಸೃಷ್ಟಿಯಾಗಿರುವ ರಾಜಕೀಯ ಬೆಳವಣಿಗೆಗಳ ಕುರಿತು  ಬಿಹಾರದ ಮಾಜಿ ಮುಖ್ಯ­­ಮಂತ್ರಿ ನಿತೀಶ್‌ ಕುಮಾರ್ ಮತ್ತು ಜೆಡಿಯು ಪಕ್ಷದ ಅಧ್ಯಕ್ಷ ಶದರ್‌ ಯಾದವ್‌ ಅವರು ಸೋಮವಾರ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು.

ಸಭೆಯ ನಂತರ ಈ ಕುರಿತು ಪ್ರತಿಕ್ರಿಯೆ ನೀಡಲು ನಿತೀಶ್‌ ಕುಮಾರ್‌ ನಿರಾಕ­ರಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ಮಾಂಝಿ ಅವರನ್ನು ಪದಚ್ಯುತಗೊ­ಳಿ­ಸಬೇಕು ಎಂದು ಶರದ್‌ ಯಾದವ್‌ ಬೆಂಬಲಿಗರು ಮತ್ತು ಕೆಲ ಸಚಿವರು ನಿತೀಶ್‌ ಕುಮಾರ್‌ ಅವರನ್ನು ಒತ್ತಾಯಿ­ಸಿದ್ದಾರೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಮಾಂಝಿ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ನಿತೀಶ್‌ ಕುಮಾರ್‌ ಅವರನ್ನು ಪುನಃ ನೇಮಕ ಮಾಡುವಂತೆ ಪಕ್ಷದ ಪ್ರಭಾವಿ­ಗಳ ಗುಂಪೊಂದು ಪ್ರಯತ್ನಿಸುತ್ತಿದೆ. ‘ನಾನು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗ ಹಾಗೂ ಪಕ್ಷದಲ್ಲಿರುವ ಮೇಲ್ಜಾತಿಯವರು ವಿದೇಶಿಗರು ಮತ್ತು ಎಸ್‌ಸಿಎಸ್‌ಟಿಗಳು ಸ್ಥಳೀಯರು’ ಎಂದು ಮಾಂಝಿ ಹೇಳಿದ್ದರು.

ಈ ಹೇಳಿಕೆ ಪಕ್ಷದೊಳಗೆ ವಿವಾದಕ್ಕೆ ನಾಂದಿ ಹಾಡಿತ್ತು.  ‘ಈ ರೀತಿ ಮಾತನಾಡದಂತೆ ನನಗೆ ಯಾರು ಸಲಹೆ ನೀಡಿದ್ದಾರೋ ಅವರಿ­ಗಿಂತ ಹೆಚ್ಚು ಜ್ಞಾನ ನನಗಿದೆ’ ಎಂದು ಮಾಂಝಿ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT