ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಇರಲಿ

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ವಿಶ್ವಕ್ಕೇ ಮಾದರಿಯಾದ ಭಾರತದ ಸಂವಿಧಾನ, ಆರ್ಥಿಕವಾಗಿ ದುರ್ಬಲರಾದವರೆಲ್ಲರಿಗೂ ಮೀಸಲಾತಿ ನೀಡಿ ಅವರನ್ನು ಮುಂಚೂಣಿಗೆ ತರಬೇಕೆನ್ನುವ ಸದಾಶಯ ಹೊಂದಿತ್ತು. ಆದರೆ ಸಂಸತ್ತು ಹಾಗೂ ರಾಜಕಾರಣಿಗಳು ಆರ್ಥಿಕವಾಗಿ ದುರ್ಬಲರಾದವರನ್ನು ಜಾತಿಯ  ಆಧಾರದ ಮೇಲೆ ಗುರುತಿಸಿರುವುದು ಸಂವಿಧಾನದ ಮೂಲ ಆಶಯವನ್ನು ಮೂಲೆಗುಂಪಾಗಿಸಿದೆ.

ಪ್ರಸ್ತುತ ಬ್ರಾಹ್ಮಣ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸಾಕಷ್ಟು ಮಂದಿ ಇದ್ದಾರೆ. ಆದರೂ ಇವರೆಲ್ಲರೂ ಆರ್ಥಿಕವಾಗಿ ಮುಂದುವರಿದವರೆಂದು ತಪ್ಪಾಗಿ ಅರ್ಥೈಸಿ, ಮೀಸಲಾತಿಯಿಂದ ವಂಚಿಸಲಾಗಿದೆ. ಬ್ರಾಹ್ಮಣ ಸಮುದಾಯದವರು ಸರ್ಕಾರದ ಮುಂದೆ ಗೋಗರೆಯುವ ಜಾಯಮಾನದವರಲ್ಲ. ಆದರೆ, ಬಡತನದಲ್ಲಿದ್ದರೆ ಜಾತಿ ವಿಂಗಡಣೆ ಹೊರತಾಗಿ ಮೀಸಲಾತಿ ಪಡೆಯುವುದು ಅವರ ಜನ್ಮಸಿದ್ಧ ಹಕ್ಕು.

ಕೇವಲ ಮತ ಗಳಿಕೆ ಉದ್ದೇಶದಿಂದ ಜಾತಿ ಭೇದ ಸೃಷ್ಟಿಸಿ ಅನವಶ್ಯಕವಾಗಿ ಮೀಸಲು ನೀಡುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ. ದಲಿತರೂ ಸೇರಿದಂತೆ ಸರ್ಕಾರ ಮೀಸಲು ಸವಲತ್ತು ನೀಡಿರುವ ವರ್ಗಗಳಲ್ಲೂ ಶ್ರೀಮಂತರಿದ್ದಾರೆ. ಮೀಸಲಾತಿಯ ನೆಪದಲ್ಲಿ ಸರ್ಕಾರಿ ಕೆಲಸಗಳನ್ನು, ಶಿಕ್ಷಣ ಕ್ಷೇತ್ರದಲ್ಲಿ ಸವಲತ್ತುಗಳನ್ನು ಪಡೆದುಕೊಳ್ಳಲು ಸಫಲರಾಗಿದ್ದಾರೆ. ಹೀಗಾಗಿ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಬ್ರಾಹ್ಮಣ ವರ್ಗಕ್ಕೆ ಈಗಲಾದರೂ ನ್ಯಾಯಯುತವಾದ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT