ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲ್ಲಪೆರಿಯಾರ್ ನೀರಿನ ಮಟ್ಟ ಏರಿಕೆ– ಕೇರಳ ಆತಂಕ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮುಲ್ಲಪೆರಿಯಾರ್ ಅಣೆಕಟ್ಟೆಯ ನೀರಿನ ಸಂಗ್ರಹ 142 ತಲುಪಿರುವುದರಿಂದ 117 ವರ್ಷ­ಗ­ಳಷ್ಟು ಹಳೆಯದಾದ ಅಣೆಕಟ್ಟೆ ಒಡೆದು ಅಪಾಯವಾಗುವ ಆತಂಕವನ್ನು ತಮಿಳು­ನಾಡು ಸರ್ಕಾರ ಅರ್ಥ ಮಾಡಿ­ಕೊಳ್ಳಬೇಕು ಕೇರಳ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಹೇಳಿದ್ದಾರೆ.

ನೆರೆಯ ರಾಜ್ಯದ ಜತೆ ನೀರು ಹಂಚಿಕೆ ವಿಚಾರದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.
‘ಅಣೆಕಟ್ಟೆಗೆ 117 ವರ್ಷಗಳಾಗಿರು­ವು­­ದ­ರಿಂದ ತೀರಾ ದುರ್ಬಲ­ಗೊಂ­ಡಿದ್ದು, ಅದರ ಹತ್ತಿರ ವಾಸಿಸು­ತ್ತಿರುವ ಜನರ ಸುರಕ್ಷತೆ ಬಗ್ಗೆ ನಮಗೆ ಆತಂಕ­ವಾಗಿದೆ’ ಎಂದು ತಿಳಿಸಿದ್ದಾರೆ.

‘ತಮಿಳುನಾಡಿನ ಐದಾರು ಜಿಲ್ಲೆ­ಗಳು ಈ ಅಣೆಕಟ್ಟೆಯ ನೀರನ್ನೇ ಅವ­ಲಂ­­ಬಿಸಿ­ವೆ ಎಂಬುದು ನಿಜ. ಆದರೆ ಅಣೆಕಟ್ಟೆ ದುರ್ಬಲ­ಗೊಂಡಿರು­ವು­ದ­ರಿಂದ ಜನತೆಯ ಸುರಕ್ಷತೆಯನ್ನೂ ಗಂಭೀ­ರ­ವಾಗಿ ಪರಿಗಣಿಸಬೇಕಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT