ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಂಡು ‘ಆಟಗಾರ’ನ ಜೊತೆ!

Last Updated 27 ಆಗಸ್ಟ್ 2015, 19:52 IST
ಅಕ್ಷರ ಗಾತ್ರ

*‘ಆಟಗಾರ’ ಚಿತ್ರದ ವಿಶೇಷಗಳೇನು?
ಕನ್ನಡದಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ ಎನ್ನುವುದೇ ಇದರ ವಿಶೇಷ. ಇದು ರಿಯಾಲಿಟಿ ಗೇಮ್ ಷೋ ಮೇಲೆ ನಡೆಯುವ ಸಿನಿಮಾ. ಇಲ್ಲಿ ಎಲ್ಲರೂ ಮುಖ್ಯ ಆಟಗಾರರೇ.

*ನಿಮ್ಮ ಪಾತ್ರದ ತೂಕ ಎಷ್ಟು?
ನನ್ನ ಪಾತ್ರದ ಆಯಾಮ ಎಲ್ಲರಿಗೂ ಇಷ್ಟವಾಗುವ ಮನರಂಜನೆ ಶೇಡ್‌ನಲ್ಲಿದೆ. ಒಂದು ರೀತಿ ರಿಯಾಲಿಸ್ಟಿಕ್– ಸನ್ನಿವೇಶಕ್ಕೆ ತಕ್ಕಂತೆ ನಡೆದುಕೊಂಡು ಹೋಗುತ್ತದೆ. ಎಲ್ಲರೂ ಕೆಲವು ಸನ್ನಿವೇಶಗಳಲ್ಲಿ ಹೆದರಿಕೊಂಡು ಹೋಗುತ್ತಿದ್ದರೆ ಇವನು ಮಾತ್ರ ಹೆದರಿಕೊಳ್ಳುವುದಿಲ್ಲ. ಮೊಂಡು ಧೈರ್ಯ. ಬಂದಿದ್ದನ್ನು ಎದುರಿಸೋಣ, ಏನಾಗುತ್ತದೆ ನೋಡೋಣ ಎಂದು ಎಲ್ಲದಕ್ಕೂ ಮುಂದೆ ಹೋಗಿ ನಿಂತುಕೊಳ್ಳುವುದು ನನ್ನ ಪಾಲಿನ ಪಾತ್ರ. ನಿರ್ಮಾಪಕರಾದ ಯೋಗೀಶ್ (ದ್ವಾರಕೀಶ್ ಮಗ) ನನಗೆ ಕಥೆ ಹೇಳಿದ ತಕ್ಷಣವೇ ನಾನು ಈ ಪಾತ್ರ ಸಖತ್ತಾಗಿದೆ ನಾನೇ ಮಾಡುವೆ ಎಂದು ಹೇಳಿದೆ. ಕಥೆ ಕೇಳಿದ ತಕ್ಷಣವೇ ನನ್ನದು ಇಂಥ ಪಾತ್ರವೇ ಆಗಬೇಕು ಎಂದು ಕಮಿಟ್ ಆದ ಚಿತ್ರ ಇದು.

*‘ಆಟಗಾರ’ನಲ್ಲಿ ಹಿರಿ–ಕಿರಿಯರ ದಂಡೇ ಇದೆ. ಹೇಗಿತ್ತು ಸಿನಿಮಾ ಪಯಣ?
ಕಲಿಯುವುಕ್ಕೆ ಬಹಳ ಅವಕಾಶವಾಯಿತು. ನನ್ನ ವೃತ್ತಿ ಬದುಕಿನ ಸಿಹಿ ಮತ್ತು ಮರೆಯದ ಕ್ಷಣಗಳು ಎಂದರೆ ಖಂಡಿತಾ ಸುಳ್ಳಾಗುವುದಿಲ್ಲ. ಇಲ್ಲಿ ಯಾರೂ ಚಿಕ್ಕ ನಟರಲ್ಲ. ಪ್ರಮುಖ ನಟರ ಜತೆ ಅಭಿನಯಿಸುವುದು ಒಂದು ಚಾಲೆಂಚ್. ಸಾಧಾರಣವಾಗಿ ನಡೆದುಕೊಂಡರೆ ನಮ್ಮನ್ನೇ ತಿಂದು ಹಾಕಿಬಿಡುತ್ತಾರೆ! ಒಬ್ಬರಿಗಿಂತ ಮತ್ತೊಬ್ಬರು ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎನ್ನುವ ಆರೋಗ್ಯಕರ ಪೈಪೋಟಿ ಇತ್ತು.

*ಚಿತ್ರಕಥೆಯಲ್ಲಿ ಕಾಲ್ಪನಿಕ ಅಂಶಗಳು ಮತ್ತು ಸಮಕಾಲೀನ ವಿಷಯಗಳು ಕಾಣಿಸುತ್ತವೆಯೇ?
ಕಾಲ್ಪನಿಕ ಎಂದು ಹೇಳುವುಕ್ಕೆ ಆಗುವುದಿಲ್ಲ. ಸಸ್ಪೆನ್ಸ್–ಥ್ರಿಲ್ಲರ್ ಸಿನಿಮಾ ಎನ್ನಬಹುದು.

*ಎಷ್ಟು ದಿನ ಆಟ ಆಡುತ್ತೀರಿ?
ಎರಡೇ ದಿನ. ಈ ಆಟ ಹೇಗೆ ಆರಂಭವಾಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಮೊದಲ ದಿನ, ಇದು ಎರಡನೇ ದಿನ ಎಂದು ಗೊತ್ತಾಗುತ್ತದೆ. ಎರಡನೇ ದಿನ ಏನು ಆಗುತ್ತಿದೆ, ಆ ರೀತಿ ಆಗುವುದಕ್ಕೆ ಕಾರಣಗಳು ಏನು, ಯಾವ ಕಾರಣಕ್ಕೆ ಇಷ್ಟೆಲ್ಲ ಆಗುತ್ತದೆ ಇತ್ಯಾದಿ ವಿಷಯಗಳಿಗೆ ಪ್ರಶ್ನೆಗಳು ಸಿಕ್ಕುತ್ತವೆ.

*‘ಆಟಗಾರ’ದ ಅನುಭವದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ತೆರೆದುಕೊಳ್ಳುವ ಯೋಚನೆ ಇದೆಯಾ?
ಖಂಡಿತಾ ನಟಿಸುವೆ. ಕಥೆ ಮತ್ತು ನನ್ನ ಪಾತ್ರದ ಬಗ್ಗೆ ನನಗೆ ವಿಶ್ವಾಸ ಮತ್ತು ನಂಬಿಕೆ ಬಂದರೆ ಮಾತ್ರ ನಾನು ಒಪ್ಪಿಕೊಳ್ಳುವೆ.

*ಇತ್ತೀಚೆಗೆ ನಿಮಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದೂ ಕಡಿಮೆ ಅಲ್ಲವೇ?
ಒಳ್ಳೆಯ ಸಿನಿಮಾ ಮಾಡಬೇಕು ಎಂದರೆ ಒಂದು ನಿರ್ದಿಷ್ಟ ಸಮಯ ತೆಗೆದುಕೊಳ್ಳುತ್ತದೆ. ಕೆಲವು ಕಥೆಗಳನ್ನು ಕುಳಿತು ಮಾಡಬೇಕು ಎಂದಾಗ ಸಮಯ ಹಿಡಿಯತ್ತದೆ. ಬೇರೆ ಮತ್ತೇನೂ ಕಾರಣ ಅಲ್ಲ. ಎಲ್ಲ ನಟರಿಗೂ ಭಿನ್ನ ಸಿನಿಮಾ ಮಾಡಬೇಕು ಎನ್ನುವುದು ಇದ್ದೇ ಇರುತ್ತದೆ.

*ಮುಂದಿನ ಚಿತ್ರ?
ಸೌಂದರ್ಯ ಜಗದೀಶ್ ನಿರ್ಮಾಣದ ‘ರಾಮಲೀಲಾ’. ಅದು ಪಕ್ಕಾ ಮನರಂಜನಾ ಸಿನಿಮಾ. ಅಕ್ಟೋಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT