ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪರ ಜನಾಭಿಪ್ರಾಯ ಇಳಿಕೆ

ಕಪ್ಪು ಹಣ: ಇನ್‌ಸ್ಟಾವಾಣಿ ಸಮೀಕ್ಷೆ
Last Updated 31 ಅಕ್ಟೋಬರ್ 2014, 19:52 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ಬ್ಯಾಂಕ್‌ನಲ್ಲಿನ ಕಪ್ಪುಹಣ ಖಾತೆದಾರರ ವಿಷಯ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲಿಯೇ ‘ಇನ್‌ಸ್ಟಾ­ವಾಣಿ‘ಯು ಈ ಬಗ್ಗೆ ೯೨೭ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಸ್ವಿಟ್ಜರ್‌ಲೆಂಡ್‌ ಬ್ಯಾಂಕುಗಳಲ್ಲಿ ಭಾರ­ತೀಯರು ಇಟ್ಟಿರುವ ಕಪ್ಪುಹಣದ ಬಗ್ಗೆ ಬಂದ ವರದಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಪ್ರೀಂಕೋರ್ಟ್‌ ಕಾರ್ಯವೈಖರಿ ಬಗೆಗಿನ ಜನಾಭಿ­ಪ್ರಾಯದ ಮೇಲೆ ಪರಿಣಾಮ ಬೀರಿವೆ. 

‘ಪ್ರಧಾನಿಯಾಗಿ ಮೋದಿ ಅವರ ಒಟ್ಟಾರೆ ಕಾರ್ಯವೈಖರಿಯನ್ನು ಮೆಚ್ಚಿ­ಕೊಂಡಿದ್ದೀರಾ’ ಎಂದು ಕೇಳಿದ ಪ್ರಶ್ನೆಗೆ ಶೇ ೯೧.೬ರಷ್ಟು ಜನ ಹೌದು ಎಂದು ಉತ್ತರಿಸಿದ್ದಾರೆ. ಇದೇ ಪ್ರಶ್ನೆಗೆ  ಅಧಿಕ ಆದಾಯ ವರ್ಗದ (ಸ್ವಂತ ಕಾರು ಹೊಂದಿರುವವರು) ಶೇ ೯೫ರಷ್ಟು ಜನ ಹೌದು ಎಂದಿದ್ದಾರೆ.

ಆದರೆ, ನಿರ್ದಿಷ್ಟವಾಗಿ ಕಪ್ಪು ಹಣದ ವಿಷಯದಲ್ಲಿ ಮೋದಿ ಅವರ ಕಾರ್ಯ­ವೈಖರಿಯ ಬಗ್ಗೆ ಪ್ರಶ್ನಿಸಿದಾಗ ಶೇ ೮೪ರಷ್ಟು ಜನರಿಂದ ಮಾತ್ರ ಸಮ್ಮತಿ ವ್ಯಕ್ತವಾಗಿದೆ. ಇನ್ನು, ಈ ವಿಷಯದಲ್ಲಿ ಸುಪ್ರೀಂ­ಕೋರ್ಟ್‌್ ಕಾರ್ಯ­ವೈಖರಿಯೆಡೆಗಿನ ಜನರ ಸಮ್ಮತಿ  ಕೂಡ ಇಳಿಮುಖ­ವಾಗಿದೆ. ಶೇ ೭೨.೩ರಷ್ಟು ಜನ ಮಾತ್ರ ಸುಪ್ರೀಂಕೋರ್ಟ್‌ ನಿಲುವನ್ನು ಒಪ್ಪಿ­ಕೊಂಡಿದ್ದಾರೆ.

ಸ್ವಿಟ್ಜರ್‌ಲೆಂಡ್‌ ಬ್ಯಾಂಕ್‌­ನಲ್ಲಿ ಇರುವ ಕಪ್ಪುಹಣದ ಖಾತೆದಾರರ ಪೂರ್ಣ ಪಟ್ಟಿಯನ್ನು ಬಹಿರಂಗಪ­ಡಿಸದಿರಲು  ಸುಪ್ರೀಂಕೋರ್ಟ್‌  ತಳೆದ ನಿರ್ಧಾರಕ್ಕೆ ಶೇ ೫೧ರಷ್ಟು ಮಂದಿ ಅಸಮ್ಮತಿ ಸೂಚಿಸಿದ್ದಾರೆ.    ಕಪ್ಪುಹಣಕ್ಕೆ ಸಂಬಂಧಿಸಿ ಮೋದಿ ಹಾಗೂ ಸುಪ್ರೀಂ­ಕೋರ್ಟ್‌್ ಕಾರ್ಯವೈಖ­ರಿಯೆಡೆಗಿನ ಅಧಿಕ ಆದಾಯ ವರ್ಗದ ಜನ­ಸಮ್ಮತಿಯು ಕ್ರಮವಾಗಿ 10 ಹಾಗೂ ೨೭ ಅಂಶಗಳಷ್ಟು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT