ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಾದರಿ ಆಡಳಿತ: ಫಡ್ನವೀಸ್‌

Last Updated 1 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಆಡಳಿತಕ್ಕೆ ಚುರುಕು ನೀಡಲು ಪ್ರಧಾನಿ ಕಚೇರಿ ಮಾದರಿ­ಯಲ್ಲಿಯೇ ಮುಖ್ಯಮಂತ್ರಿ ಕಚೇರಿಯನ್ನೂ ಮಾರ್ಪಡಿಸಲು ಮಹಾ­­­­ರಾಷ್ಟ್ರದ ಹೊಸ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮುಂದಾಗಿದ್ದಾರೆ. ಶುಕ್ರವಾರ ಪ್ರಮಾಣವಚನ ಸ್ವೀಕರಿ­ಸಿದ  ಬೆನ್ನಲ್ಲೇ ಮುಖ್ಯಮಂತ್ರಿ ಕಚೇರಿ   ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸಕ್ಕೆ ಕೈಹಾಕಿರುವ ಅವರು, ಕಾರ್ಯವೈಖರಿಯಲ್ಲಿ ಹೊಸತನ ತರುವುದಾಗಿ ಹೇಳಿದ್ದಾರೆ.

ಎಲ್ಲ ಕೆಲಸಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಸಚಿವರಿಗೆ ದಕ್ಷ ಅಧಿಕಾರಿ­ಗಳ ತಂಡ ನೆರವು ನೀಡಲಿದೆ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ­ಯಂತೆ  ಸ್ಥಳೀಯ ತೆರಿಗೆ ರದ್ದುಗೊ­ಳಿಸಲು  ಸರ್ಕಾರ ಬದ್ಧವಾಗಿದ್ದು, ತೆರಿಗೆ ನೀತಿಯಲ್ಲೂ ಬದಲಾವಣೆ ತರುವ ಬಗ್ಗೆ ಚಿಂತಿಸುತ್ತಿರುವುದಾಗಿ ಹೇಳಿದರು. ಟೋಲ್‌ ತೆರಿಗೆ ರದ್ದುಪಡಿಸುವ ಮತ್ತೊಂದು ಭರವ­ಸೆ­ಬಗ್ಗೆ  ಪ್ರಸ್ತಾಪಿ ಸಿದ ಅವರು, ಮತ್ತೊಂದು ಪರ್ಯಾಯ ವ್ಯವಸ್ಥೆ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದರು.

ಜನರನ್ನು ಕಡೆಗಣಿಸಿದರೆ ತಕ್ಕಶಾಸ್ತಿ: ಸೇನೆ
ಅಧಿಕಾರಕ್ಕೆ ಬಂದ ನಂತರ ಏನು ಮಾಡಿದರೂ ನಡೆಯುತ್ತದೆ ಎಂಬ ನಿರ್ಲಕ್ಷ್ಯ ಧೋರಣೆ ಬೇಡ.  ಜನ­ಸಾಮಾನ್ಯ­ರನ್ನು ಕಡೆಗಣಿಸದರೆ ಅವರೇ  ಕಿವಿಹಿಂಡಿ ಬುದ್ಧಿ ಕಲಿಸುತ್ತಾರೆ. ಹೀಗಾಗಿ ಜನರನ್ನು ಸಂತುಷ್ಟಗೊಳಿಸು­ವುದನ್ನು ಬಿಟ್ಟು ಅವರ ಆಶೋತ್ತರಗಳನ್ನು ಈಡೇರಿಸುವತ್ತ ಹೊಸ ಸರ್ಕಾರ ಗಮನ ಹರಿಸಲಿ ಎಂದು ‘ಸಾಮ್ನಾ’ದ ಸಂಪಾದಕೀಯ ಹೊಸ ಮುಖ್ಯಮಂತ್ರಿ ಫಡ್ನವೀಸ್‌ ಅವರಿಗೆ ಕಿವಿಮಾತು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT