ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಯೋಜನೆ ಸಭೆ ರಾಜ್ಯ ಸಂಸದರ ಗೈರು

Last Updated 23 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸಂಸದರು ಎಲ್ಲ­ದರಲ್ಲೂ ಹಿಂದೆ. ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳುವುದರಲ್ಲೂ ಹಿಂದೆ. ಚರ್ಚೆ­ಯಲ್ಲಿ ಭಾಗವಹಿಸುವು­ದ­­ರಲ್ಲೂ ಹಿಂದೆ. ರಾಜ್ಯಕ್ಕೆ ಬರ­ಬೇ­ಕಾದ ಸವ­ಲತ್ತು­ಗಳನ್ನು ಪಡೆಯುವುದ­ರಲ್ಲೂ ಹಿಂದೆ. ಇದಕ್ಕೊಂದು ಜ್ವಲಂತ ಉದಾ­ಹರಣೆ ಇಲ್ಲಿದೆ. ರಾಜ್ಯ ರೈಲ್ವೆ ಯೋಜನೆ­ಗಳನ್ನು ಕುರಿತು ಚರ್ಚಿಸಲು ಕೇಂದ್ರ ರೈಲ್ವೆ ಸಚಿವ  ಸುರೇಶ್‌ ಪ್ರಭು ಸೋಮವಾರ ಮಧ್ಯಾಹ್ನ ಕರೆದಿದ್ದ ಅನೌಪಚಾರಿಕ ಭೋಜನಾ ಸಭೆಗೆ ಬಹುತೇಕ ಸಂಸದರು ಹಾಜರಾಗಲಿಲ್ಲ.

ವಿವಿಧ ರಾಜ್ಯಗಳ ರೈಲ್ವೆ ಯೋಜನೆ­ಗಳನ್ನು ಕುರಿತು ಚರ್ಚಿಸಲು ಸುರೇಶ್‌ ಪ್ರಭು ಸರದಿ ಮೇಲೆ ಸಂಸದರ ಸಭೆ ಕರೆಯುತ್ತಿದ್ದಾರೆ. ಅದರಂತೆ ಲೋಕ­ಸಭೆ ಮತ್ತು ರಾಜ್ಯ ಸಭೆ ಸೇರಿ ರಾಜ್ಯದ ಎಲ್ಲ 41 ಸಂಸದರನ್ನು ಕರೆದಿದ್ದರು. ಆದರೆ, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್‌ ಜೋಶಿ, ಮಾಜಿ ಸಚಿವ ಕೆ.ಎಚ್‌.­ಮುನಿಯಪ್ಪ ಅವರನ್ನು ಹೊರತು­ಪಡಿಸಿ ಮತ್ಯಾರು ಸಭೆಗೆ ಬರಲಿಲ್ಲ.

ಮಂತ್ರಿ ಸಮಯಕ್ಕೆ ಸರಿಯಾಗಿ ಸಭೆಗೆ ಬಂದರು. ಸಂಸದರ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಹಿರಿಯ ಅಧಿಕಾರಿ­ಗಳನ್ನು ಕರೆ ತಂದಿದ್ದರು. ಜೋಶಿ ಹುಬ್ಬಳ್ಳಿ­ಯಿಂದ ವಿವಿಧ ಸ್ಥಳಗಳಿಗೆ ರೈಲು­ಗಳನ್ನು ಓಡಿಸುವಂತೆ ಮನವಿ ಮಾಡಿ­ದರು. ಮುನಿಯಪ್ಪ ಕೋಲಾರ ಬೋಗಿ ತಯಾರಿಕಾ ಘಟಕ ಸ್ಥಾಪನೆಯನ್ನು ತ್ವರಿತಗೊಳಿಸುವಂತೆ ಕೇಳಿದರು.

ರೈಲ್ವೆ ಯೋಜನೆಗಳನ್ನು ಚುರುಕು­ಗೊಳಿಸುವ ಉದ್ದೇಶದಿಂದ ರೈಲ್ವೆ ಸಚಿವರು ಎಲ್ಲ ರಾಜ್ಯಗಳ ಸಂಸದರ ಜತೆ ಚರ್ಚಿಸುತ್ತಿದ್ದಾರೆ. ಬೇರೆ  ರಾಜ್ಯ­ಗಳ ಸಂಸದರು ಆಸಕ್ತಿಯಿಂದ ಸಭೆ-­ಯಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ರಾಜ್ಯಗಳಲ್ಲಿ ಆಗಬೇಕಾಗಿರುವ ಕೆಲಸ­ಗಳನ್ನು ಕುರಿತು ಸಚಿವರಿಗೆ ವಿವರಿಸು­ತ್ತಿದ್ದಾರೆ. ಕರ್ನಾಟಕ ರೈಲ್ವೆ ಅಭಿವೃದ್ಧಿ­ಯಲ್ಲಿ ತೀರಾ ಹಿಂದುಳಿದಿದೆ. ರಾಜ್ಯ­ದಲ್ಲಿ ಇರುವುದು ಸಾವಿರ ಕಿ.ಮೀಗೆ 16 ಕಿ.ಮೀ ರೈಲು ಮಾರ್ಗ ಮಾತ್ರ. ರಾಷ್ಟ್ರೀಯ ಸರಾಸರಿ 27 ಕಿ.ಮೀ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT