ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಷ್ಕರ್‌ ಸೂಚನೆಯಂತೆ ‘ಬಿಎಆರ್‌ಸಿ’ ವಿಡಿಯೊ ಚಿತ್ರೀಕರಣ: ಹೆಡ್ಲಿ

ಶಿವಸೇನೆ ಭವನ, ಮುಂಬೈ ವಿಮಾನ ನಿಲ್ದಾಣ, ನೌಕಾ ನೆಲೆ ಸ್ಫೋಟಕ್ಕೂ ಸಂಚು
Last Updated 12 ಫೆಬ್ರುವರಿ 2016, 14:51 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸೂಚನೆ ಮೇರೆಗೆ 2008ರ ಜುಲೈನಲ್ಲಿ ಭಾಭಾ ರಿಸರ್ಚ್‌ ಆಟೊಮಿಕ್‌ ಸೆಂಟರ್‌ನ (ಬಿಎಆರ್‌ಸಿ) ವಿಡಿಯೊ ಚಿತ್ರೀಕರಣ ನಡೆಸಿದ್ದೆ.  ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಪರ ಗೂಢಚರ್ಯೆ ನಡೆಸಲು ‘ಬಿಎಆರ್‌ಸಿ’ಯ ಉದ್ಯೋಗಿಯೊಬ್ಬನನ್ನು ನೇಮಿಸುವ ಹೊಣೆಯನ್ನೂ ನನಗೆ ವಹಿಸಲಾಗಿತ್ತು ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್‌ ಹೆಡ್ಲಿ ಶುಕ್ರವಾರ ಬಹಿರಂಗಪಡಿಸಿದ್ದಾನೆ.

ಅಮೆರಿಕದ ಅಜ್ಞಾತ ಸ್ಥಳದಿಂದ  ವಿಡಿಯೊ ಕಾನ್ಫರೆನ್ಸ್‌ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಂಡ ಹೆಡ್ಲಿ, 2008ರ ಮುಂಬೈ ದಾಳಿಯ ಇನ್ನಷ್ಟು ವಿವರಗಳನ್ನು ಹೊರಹಾಕಿದ್ದಾನೆ.  26/11 ದಾಳಿಯ ಸಂದರ್ಭದಲ್ಲಿ ಲಷ್ಕರ್ ಮತ್ತು ಐಎಸ್‌ಐ ಸಂಘಟನೆ ಮುಂಬೈ ವಿಮಾನ ನಿಲ್ದಾಣ ಮತ್ತು  ನೌಕಾನೆಲೆ ಮೇಲೂ ದಾಳಿ ನಡೆಸಲು ಸಂಚು ರೂಪಿಸಿದ್ದವು ಎಂದು ಹೆಡ್ಲಿ ಹೇಳಿದ್ದಾನೆ. 

‘ಭವಿಷ್ಯದಲ್ಲಿ ಶಿವಸೇನೆ ಮುಖಂಡನನ್ನು ಹತ್ಯೆ ಮಾಡುವ ಅಥವಾ ಶಿವಸೇನೆ ಭವನದ ಮೇಲೆ ದಾಳಿ ನಡೆಸುವ ಯೋಜನೆಯನ್ನು  ಎಲ್‌ಇಟಿ ಹೊಂದಿತ್ತು. ಹೀಗಾಗಿ ಶಿವಸೇನೆ ಸದಸ್ಯರ ಜತೆಗೆ ಆತ್ಮೀಯ ಸಂಬಂಧ ಬೆಳೆಸುವ ಹೊಣೆಯನ್ನೂ ನನಗೆ ವಹಿಸಲಾಗಿತ್ತು ಎಂದು ವಿಚಾರಣೆ ವೇಳೆ ಹೆಡ್ಲಿ ಹೇಳಿದ್ದಾರೆ. 

ಬಾಬಾ ಆಟೊಮಿಕ್‌ ರೀಸರ್ಚ್‌ ಸೆಂಟರ್‌ನ ವಿಡಿಯೊ ಚಿತ್ರೀಕರಣವನ್ನು ಲಷ್ಕರ್‌ ಕಮಾಂಡರ್‌ ಮೇಜರ್‌ ಇಕ್ಬಾಲ್‌ ಮತ್ತು ಸಾಜಿದ್‌ಮಿರ್‌ ಅವರಿಗೆ ಹಸ್ತಾಂತರಿಸಿದ್ದೆ ಎಂದೂ ಹೆಡ್ಲಿ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT