ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸ್‌ಗೆ 5 ಲಕ್ಷ ಬಹುಮಾನ

ಅ. 28ಕ್ಕೆ ಕೆಎಎಎ ಪ್ರಶಸ್ತಿ ಪ್ರದಾನ ಸಮಾರಂಭ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಕೂಟಗಳಲ್ಲಿ ಉತ್ತಮ ಸಾಧನೆ ತೋರಿದ ರಾಜ್ಯದ ಅಥ್ಲೀಟ್‌ಗಳನ್ನು ಕರ್ನಾಟಕ ಅಮೆಚೂರ್‌ ಅಥ್ಲೆಟಿಕ್‌ ಸಂಸ್ಥೆ ಅಕ್ಟೋಬರ್‌ 28 ರಂದು ನಗದು ಬಹುಮಾನ ನೀಡಿ ಸನ್ಮಾನಿಸಲಿದೆ.

‘ಅಂತರರಾಷ್ಟ್ರೀಯ ಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲು ವುದು ಹೆಮ್ಮೆಯ ವಿಚಾರ. ರಾಜ್ಯದ ಅಥ್ಲೀಟ್‌ಗಳಿಗೆ ನಗದು ಬಹುಮಾನ ನೀಡಿ ಗೌರವಿಸಲು ನಿರ್ಧರಿಸಿದ್ದೇವೆ’ ಎಂದು ಕೆಎಎಎ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಷ್ಯನ್‌ ಕ್ರೀಡಾಕೂಟ, ಕಾಮನ್‌ ವೆಲ್ತ್‌ ಕ್ರೀಡಾಕೂಟ, ವಿಶ್ವ ಜೂನಿಯರ್‌ ಮತ್ತು ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಕರ್ನಾಟಕದ ಆಥ್ಲೀಟ್‌ಗಳಿಗೆ ಸಂಸ್ಥೆಯು ನಗದು ಬಹುಮಾನ ನೀಡಲಿದೆ.

ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಡಿಸ್ಕಸ್‌ ಥ್ರೋ ಸ್ಪರ್ಧಿ ವಿಕಾಸ್‌ ಗೌಡ ಅವರಿಗೆ ₨ 5 ಲಕ್ಷ ನಗದು ಬಹುಮಾನ ನೀಡಲಾ ಗುವುದು. ಏಷ್ಯನ್‌ ಕ್ರೀಡಾಕೂಟದ 4X400 ಮೀ. ರಿಲೇನಲ್ಲಿ ಚಿನ್ನ ಮತ್ತು 400 ಮೀ. ಓಟದಲ್ಲಿ ಕಂಚು ಗೆದ್ದ ಎಂ. ಆರ್‌. ಪೂವಮ್ಮ ಅವರಿಗೆ ಸಂಸ್ಥೆಯು
₨ 3 ಲಕ್ಷ ನೀಡಲಿದೆ.

ಅದೇ ರೀತಿ ಸಹನಾ ಕುಮಾರಿ (₨50,000), ಅಶ್ವಿನಿ ಅಕ್ಕುಂಜಿ (₨50,000), ಎಚ್.ಎಂ. ಜ್ಯೋತಿ (₨50,000), ಮೇಘನಾ ಶೆಟ್ಟಿ (₨75,000), ಜಿ.ಕೆ. ವಿಜಯ ಕುಮಾರಿ (₨75,000), ಎಸ್‌. ಹರ್ಷಿತ್‌ (₨25,000) ಅವರಿಗೂ ನಗದು ಬಹುಮಾನ ನೀಡಲು ನಿರ್ಧರಿಸ ಲಾಗಿದೆ.
ಮಾಜಿ ಅಥ್ಲೀಟ್‌ ಮತ್ತು ಕೋಚ್‌ ಗಳಾದ ಕೆನೆತ್‌ ಪೊವೆಲ್‌, ಡಿ.ವೈ. ಬಿರಾದಾರ, ಮರ್ಜೊರಿ ಸ್ವಾರೆಸ್‌, ಏಂಜೆಲ್‌ ಮೇರಿ, ಎನ್‌. ಲಿಂಗಪ್ಪ, ಸಿ. ಅರಿವನಾಥನ್‌ ಮತ್ತು ವಿ.ಆರ್‌. ಬೀಡು ಅವರಿಗೆ ತಲಾ ₨ 10 ಸಾವಿರ ನೀಡಲಾಗುವುದು.

ಕಂಠೀರವ ಕ್ರೀಡಾಂಗಣದಲ್ಲಿರುವ ಸೌಕರ್ಯಗಳ ಬಗ್ಗೆ ಪರಮೇಶ್ವರ್‌ ಕಳ ವಳ ವ್ಯಕ್ತಪಡಿಸಿದರು. ‘ಸಿಂಥೆಟಿಕ್‌ ಟ್ರ್ಯಾಕ್‌ ಹಾಗೂ ಇಲ್ಲಿರುವ ಶೌಚಾಲಯಗಳು ಉತ್ತಮ ಸ್ಥಿತಿಯಲ್ಲಿಲ್ಲ. ಕ್ರೀಡಾಂಗಣದ ಸೌಕರ್ಯ ಹೆಚ್ಚಿಸಲು ಸರ್ಕಾರ ಪ್ರತಿ ವರ್ಷ ಒಂದು ನಿಗದಿತ ಮೊತ್ತವನ್ನು ಮೀಸಲಿಡಬೇಕು’ ಎಂದು ಅವರು ನುಡಿದಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷರಾದ ಉದಯ ಪ್ರಭು ಮತ್ತು ಮುನಿ ಸಂಜೀವಪ್ಪ, ಕಾರ್ಯದರ್ಶಿ ಚಂದ್ರ ಶೇಖರ ರೈ ಉಪಸ್ಥಿತರಿದ್ದರು.

ವಿಜಾಪುರದಲ್ಲಿ ನ.9 ರಿಂದ ಜೂನಿಯರ್‌ ಅಥ್ಲೆಟಿಕ್ಸ್‌
30ನೇ ರಾಜ್ಯ ಜೂನಿಯರ್‌ ಅಂತರ ಜಿಲ್ಲಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ನವೆಂಬರ್‌ 9 ರಿಂದ 12ರ ವರೆಗೆ ವಿಜಾಪುರದ ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಾಲಕ ಮತ್ತು ಬಾಲಕಿಯರಿಗೆ 20, 18, 16 ಮತ್ತು 14 ವರ್ಷ ವಯಸ್ಸಿನೊಳಗಿನವರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನವೆಂ ಬರ್‌ 26 ರಿಂದ 30ರ ವರೆಗೆ ನಡೆಯ ಲಿರುವ 30ನೇ ರಾಷ್ಟ್ರೀಯ ಜೂನಿ ಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡವನ್ನು ಈ ಕೂಟದ ವೇಳೆಗೆ ಆಯ್ಕೆ ಮಾಡಲಾಗುವುದು.

ಅಂತರ ಜಿಲ್ಲಾ ಕೂಟದಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳು ನವೆಂಬರ್‌ 1ರ ಒಳಗಾಗಿ ಹೆಸರು ನೋಂದಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT