ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ: ಕರ್ನಾಟಕ ಚಾಂಪಿಯನ್‌

ಮಯಂಕ್‌ ಶತಕ
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ):ರಣಜಿ ಚಾಂಪಿಯನ್‌ ಕರ್ನಾಟಕ ತಂಡ ದೇಶಿಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದಿದೆ. ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಪಂಜಾಬ್‌ ತಂಡವನ್ನು 156 ರನ್‌ಗಳಿಂದ ಮಣಿಸಿ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು.

ಮೋಟೆರಾದ ಸರ್ದಾರ್ ಪಟೇಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಿತು. ಬ್ಯಾಟ್‌ ಮಾಡಲು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ವಿನಯ್‌ ಕುಮಾರ್‌ ನಾಯಕತ್ವದ ಕರ್ನಾಟಕ 50 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 359 ರನ್‌ ಕಲೆ ಹಾಕಿತು.

ಸವಾಲಿನ ಗುರಿ ಎದುರು ಪರದಾಡಿದ ಪಂಜಾಬ್‌ 38.2 ಓವರ್‌ಗಳಲ್ಲಿ 203 ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಯಿತು. ಹಿಂದಿನ ಟೂರ್ನಿಯಲ್ಲೂ ಕರ್ನಾಟಕವೇ ಚಾಂಪಿಯನ್‌ ಆಗಿತ್ತು.

ಮಯಂಕ್‌ ಶತಕ: ಕರ್ನಾಟಕದ ಆರಂಭಿಕ ಜೋಡಿ ರಾಬಿನ್‌ ಉತ್ತಪ್ಪ (87) ಮತ್ತು ಮಯಂಕ್‌ ಅಗರವಾಲ್‌ (125, 100ಎಸೆತ, 10 ಬೌಂಡರಿ, 3 ಸಿಕ್ಸರ್‌) ಮೊದಲ ವಿಕೆಟ್‌ಗೆ ಅಮೋಘ ಜೊತೆಯಾಟವಾಡಿದರು. ಈ ಜೋಡಿ 24.2 ಓವರ್‌ಗಳಲ್ಲಿ 162 ರನ್‌ ಕಲೆ ಹಾಕಿ ಗಟ್ಟಿ ಬುನಾದಿ ನಿರ್ಮಿಸಿತು. ಕರುಣ್‌ ನಾಯರ್‌ (86) ಕೂಡಾ ಅಬ್ಬರಿಸಿದರು.

ಬಲಗೈ ಬ್ಯಾಟ್ಸ್‌ಮನ್‌ ಕರುಣ್ 71 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದರು. ಮನೀಷ್‌ ಪಾಂಡೆ (40) ಜೊತೆಯಾದರು. ಆದ್ದರಿಂದ ಕರ್ನಾಟಕಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ಪಂಜಾಬ್‌ ಪರದಾಟ: ಪಂಜಾಬ್‌ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು. ಅಮಿತೋಜ್‌ ಸಿಂಗ್‌ (46) ಹಾಗೂ ಮನ್‌ದೀಪ್‌ ಸಿಂಗ್‌ (76) ಅವರನ್ನು ಬಿಟ್ಟರೆ ಬೇರೆ ಯಾರೂ ಹೋರಾಟ ತೋರಲಿಲ್ಲ.

ವೇಗಿಗಳಾದ ಅಭಿಮನ್ಯು ಮಿಥುನ್‌ (37ಕ್ಕೆ3), ಸ್ಟುವರ್ಟ್‌ ಬಿನ್ನಿ (62ಕ್ಕೆ2) ಪಂಜಾಬ್‌ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು. ಆದ್ದರಿಂದ ಪಂಜಾಬ್‌ ತಂಡಕ್ಕೆ ಮೊದಲ ಬಾರಿಗೆ ವಿಜಯ್‌ ಹಜಾರೆ ಟ್ರೋಫಿ ಗೆಲ್ಲುವ ಅವಕಾಶ ತಪ್ಪಿ ಹೋಯಿತು.

ಸ್ಕೋರ್ ವಿವರ
ಕರ್ನಾಟಕ: 50 ಓವರ್‌ಗಳಲ್ಲಿ  7 ವಿಕೆಟ್‌ಗೆ 359

ರಾಬಿನ್‌ ಉತ್ತಪ್ಪ ಸಿ ಮನನ್‌ ವೋಹ್ರಾ ಬಿ ಬಲತೇಜ್‌ ಸಿಂಗ್‌  87
ಮಯಂಕ್‌ ಅಗರವಾಲ್‌ ಸಿ ಸಿದ್ದಾರ್ಥ್‌ ಕೌಲ್‌ ಬಿ ಸಂದೀಪ್‌ ಶರ್ಮ  125
ಕರುಣ್‌ ನಾಯರ್‌ ಸಿ ತರುವಾರ್‌ ಕೊಹ್ಲಿ ಬಿ ಬಲತೇಜ್‌ ಸಿಂಗ್‌ 86
ಮನೀಷ್‌ ಪಾಂಡೆ ಬಿ ಅಮಿತೋಜ್‌ ಸಿಂಗ್‌  40
ಸ್ಟುವರ್ಟ್‌ ಬಿನ್ನಿ ಸಿ ಗುರುಕೀರತ್‌ ಸಿಂಗ್‌ ಬಿ ಬಲತೇಜ್‌ ಸಿಂಗ್‌ 05
ಆರ್‌.ವಿನಯ್‌ ಕುಮಾರ್‌ ಔಟಾಗದೆ  01
ಶಿಶಿರ್‌ ಭವಾನೆ ಸಿ ಬಲತೇಜ್‌ ಸಿಂಗ್‌ ಬಿ ಸಂದೀಪ್‌ ಶರ್ಮ  05
ಅಭಿಮನ್ಯು ಮಿಥುನ್‌ ಬಿ ಸಂದೀಪ್‌ ಶರ್ಮ  00
ಜೆ.ಸುಚಿತ್‌ ಔಟಾಗದೆ  05
ಇತರೆ: (ಲೆಗ್‌ಬೈ–1, ವೈಡ್‌–3, ನೋಬಾಲ್‌–1) 05
ವಿಕೆಟ್‌ ಪತನ: 1–162 (ಉತ್ತಪ್ಪ; 24.2), 2–247 (ಅಗರವಾಲ್‌; 36.4), 3–334 (ಮನೀಷ್‌; 47.1), 4–344 (ಕರುಣ್‌; 48.2), 5–348 (ಬಿನ್ನಿ; 48.4), 6–353 (ಭವಾನೆ; 49.1), 7–353 (ಮಿಥುನ್‌; 49.2).
ಬೌಲಿಂಗ್‌: ಸಂದೀಪ್‌ ಶರ್ಮ 9–0–68–3 (ವೈಡ್‌–1), ಸಿದ್ದಾರ್ಥ್‌ ಕೌಲ್‌ 8–0–72–0 (ವೈಡ್‌–1, ನೋಬಾಲ್‌–1), ಬಲತೇಜ್‌ ಸಿಂಗ್‌ 9–0–59–3, ಹರಭಜನ್‌ ಸಿಂಗ್‌ 8–0–61–0, ಅಮಿತೋಜ್‌ ಸಿಂಗ್‌ 7–0–49–1 (ವೈಡ್‌–1), ಯುವರಾಜ್‌ ಸಿಂಗ್‌ 9–0–49–0.
ಪಂಜಾಬ್‌: 38.2 ಓವರ್‌ಗಳಲ್ಲಿ 203
ಅಮಿತೋಜ್‌ ಸಿಂಗ್‌ ರನೌಟ್‌ (ವಿನಯ್‌/ಮನೀಷ್‌)  46
ಮನನ್‌ ವೋಹ್ರಾ ಸಿ ರಾಬಿನ್‌ ಉತ್ತಪ್ಪ ಬಿ ವಿನಯ್‌ ಕುಮಾರ್‌  05
ಮಂದೀಪ್‌ ಸಿಂಗ್‌ ಬಿ ಸ್ಟುವರ್ಟ್‌ ಬಿನ್ನಿ  76
ಯುವರಾಜ್‌ ಸಿಂಗ್‌ ಸಿ ಮಯಂಕ್‌ ಅಗರವಾಲ್‌ ಬಿ ಎಸ್‌.ಅರವಿಂದ್‌  23
ಗುರುಕೀರತ್‌ ಸಿಂಗ್‌ ಎಲ್‌ಬಿಡಬ್ಲ್ಯು ಬಿ ಸ್ಟುವರ್ಟ್‌ ಬಿನ್ನಿ  01
ತರುವಾರ್‌ ಕೊಹ್ಲಿ ರನೌಟ್‌ (ಸುಚಿತ್‌/ಉತ್ತಪ್ಪ)  02
ಗಿತಾನ್ಶ್‌ ಖೇರಾ ಬಿ ಅಭಿಮನ್ಯು ಮಿಥುನ್‌  14
ಹರಭಜನ್‌ ಸಿಂಗ್‌ ಎಲ್‌ಬಿಡಬ್ಲ್ಯು ಬಿ ಜೆ.ಸುಚಿತ್‌  10
ಸಿದ್ದಾರ್ಥ್‌ ಕೌಲ್‌ ಬಿ ಅಭಿಮನ್ಯು ಮಿಥುನ್‌  05
ಸಂದೀಪ್‌ ಶರ್ಮ ಸಿ ರಾಬಿನ್‌ ಉತ್ತಪ್ಪ ಬಿ ಅಭಿಮನ್ಯು ಮಿಥುನ್‌  06
ಬಲತೇಜ್‌ ಸಿಂಗ್‌ ಔಟಾಗದೆ  12
ಇತರೆ: (ವೈಡ್‌–3) 03
ವಿಕೆಟ್‌ ಪತನ: 1–9 (ವೋಹ್ರಾ; 2.3), 2–91 (ಅಮಿತೋಜ್‌; 14.3), 3–134 (ಯುವರಾಜ್‌; 21.5), 4–143 (ಗುರುಕೀರತ್‌; 24.2), 5–148 (ಕೊಹ್ಲಿ; 26.6), 6–156 (ಮಂದೀಪ್‌; 28.4), 7–169 (ಹರ­ಭಜನ್‌; 31.2), 8–185 (ಕೌಲ್‌; 36.2), 9–186 (ಖೇರಾ; 36.6), 10–203 (ಸಂದೀಪ್‌; 38.2).
ಬೌಲಿಂಗ್‌: ಆರ್‌.ವಿನಯ್‌ ಕುಮಾರ್‌ 7–0–39–1, ಎಸ್‌.ಅರವಿಂದ್‌ 5–0–32–1  (ವೈಡ್‌–1), ಅಭಿಮನ್ಯು ಮಿಥುನ್‌ 6.2–0–37–3, ಸ್ಟುವರ್ಟ್‌ ಬಿನ್ನಿ 10–0–62–2 (ವೈಡ್‌–1), ಜೆ.ಸುಚಿತ್‌ 8–0–22–1 (ವೈಡ್‌–1), ಮನೀಷ್‌ ಪಾಂಡೆ 2–0–11–0
ಫಲಿತಾಂಶ: ಕರ್ನಾಟಕಕ್ಕೆ 156ರನ್‌ ಗೆಲುವು ಹಾಗೂ ವಿಜಯ್‌ ಹಜಾರೆ ಪ್ರಶಸ್ತಿ
ಪಂದ್ಯ ಶ್ರೇಷ್ಠ: ಮಯಂಕ್‌ ಅಗರವಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT