ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ಭಾರತಕ್ಕೆ ಮತ್ತೊಂದು ಕಂಚು

Last Updated 21 ಸೆಪ್ಟೆಂಬರ್ 2014, 10:27 IST
ಅಕ್ಷರ ಗಾತ್ರ

ಇಂಚೆನ್(ಪಿಟಿಐ, ಐಎಎನ್ ಎಸ್): ಪದಕಗಳ ಬೇಟೆ ಮುಂದುವರಿಸಿರುವ ಭಾರತೀಯ ಶೂಟರ್ ಗಳು 17ನೇ ಏಷ್ಯನ್ ಕ್ರೀಡಾಕೂಡದ 2ನೇ ದಿನ 10 ಮೀ. ಏರ್ ಪಿಸ್ತೂಲ್ ನ ಗುಂಪು ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಮೊದಲ ದಿನ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿರುವ ಜಿತು ರಾಯ್ ಅವರ ನೇತೃತ್ವದಲ್ಲಿ ಸಮರೇಶ್ ಜಂಗ್ ಮತ್ತು ಪ್ರಕಾಶ ನಂಜಪ್ಪ ಅವರನ್ನೊಳಗೊಂಡ ಮೂವರ ತಂಡ ಭಾನುವಾರ ನಡೆದ ಗುಂಪು ವಿಭಾಗದ ಸ್ಪರ್ಧೆಯಲ್ಲಿ ರಾಷ್ಟ್ರಕ್ಕೆ ಕಂಚು ತಂದುಕೊಡುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಭಾರತಕ್ಕೆ ಎರಡನೇ ಕಂಚು ಲಭಿಸಿದೆ.

ಪ್ರಥಮ ಸ್ಥಾನ ಪಡೆದ ದಕ್ಷಿಣ ಕೊರಿಯ ತಂಡ 1,744 ಪಾಯಿಂಟ್ ಕಲೆಹಾಕಿ ಚಿನ್ನ ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನಕ್ಕೆ ಪೈಪೋಟಿ ನಡೆಸಿದ ಭಾರತ ಮತ್ತು ಚೀನಾ ತಲಾ 1,743 ಪಾಯಿಂಟ್ ಕಲೆಹಾಕಿ ಸಮಬಲ ಸಾಧಿಸಿದವು. ತಾಂತ್ರಿಕ ಅಂಶಗಳನ್ನು ಪರಿಗಣಿಸಿ (ಭಾರತದ ತಂಡ 64 ಪಾಯಿಂಟ್, ಚೀನಾ 65 ಪಾಯಿಂಟ್) ಚೀನಾಕ್ಕೆ ಎರಡನೇ ಸ್ಥಾನ ನೀಡಲಾಯಿತು.

ಭಾರತದ ಜಿತು ರಾಯ್ 585, ಸಮರೇಶ್ ಜಂಗ್ 580, ಪ್ರಕಾಶ ನಂಜಪ್ಪ 578 ಪಾಯಿಂಟ್ ಗಳಿಸಿ ಒಟ್ಟಾರೆ 1,744 ಪಾಯಿಂಟ್ ಕಲೆಹಾಕುವಲ್ಲಿ ಯಶ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT