ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭಾಷಣೆಯಲ್ಲಿ ಬಹೂಪಯೋಗಿ ಪದಗಳು

English ಕಲಿಯೋಣ ಬನ್ನಿ, 11
Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೆಲವು ಇಂಗ್ಲಿಷ್ ಪದಗಳು ಸಂದರ್ಭಾನುಸಾರವಾಗಿ ಬೇರೆಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ.
ಉದಾ: ‘watch’ ಎನ್ನುವ ಪದ ಕೈಗಡಿಯಾರ ಎನ್ನುವ nounಆಗಿ ಹಾಗೂ ‘ಗಮನಿಸು’ ಅಥವಾ ‘ನೋಡು’ ಎನ್ನುವ verb ಆಗಿಯೂ ಕೆಲಸ ಮಾಡುತ್ತದೆ.

ಈ ಪದ ವಾಕ್ಯಗಳಲ್ಲಿ ಈ ರೀತಿ ಇರುತ್ತದೆ:
Tie your watch properly (noun).
I watch movies on Sundays (verb).

ಅದೇ ರೀತಿ ‘light’ ಎನ್ನುವ ಪದ ಬೆಳಕು ಎನ್ನುವ noun ಆಗಿ, ‘ಬೆಳಗಿಸು’ ಎನ್ನುವ verb ಆಗಿ ಹಾಗೂ ‘ಹಗುರ’ ಎನ್ನುವ adjective ಆಗಿಯೂ ಕೆಲಸ ಮಾಡುತ್ತದೆ. ಈ ಪದವನ್ನು ಬೇರೆ ಬೇರೆ ವಾಕ್ಯಗಳಲ್ಲಿ ಗಮನಿಸಿ:
There is no light in the street (noun).
Light the lamp, as it is very dark (verb).
Children’s school bags are never light (adjective).

ಇದರಲ್ಲಿನ ಒಂದು ಸ್ವಾರಸ್ಯಕರವಾದ ವಿಷಯವೆಂದರೆ, watch ಅಥವಾ light ಎನ್ನುವಂತಹ ಪದಗಳು ಬೇರೆ part of speech ಗಳಾಗಿ ಕೆಲಸ ಮಾಡಿ, ಬೇರೆ ಅರ್ಥಗಳನ್ನು ಹೊಮ್ಮಿಸಿದರೂ ಸಹಾ, ಅವುಗಳ pronunciation(ಪ್ರನನ್ಸಿಯೇಷನ್-ಉಚ್ಚಾರಣೆ) ಹಾಗೂ sspelling (ಸ್ಪೆಲಿಂಗ್) ಒಂದೆ ಅಗಿರುತ್ತದೆ.

ಇವು ಒಂದು ಬಗೆಯ ಪದಗಳಾದರೆ, ಇನ್ನೊಂದು ಬಗೆಯ ಪದಗಳು, ಅವುಗಳ spelling ಒಂದನ್ನು ಬಿಟ್ಟು, ಅರ್ಥ, part of speech ಹಾಗೂ ಉಚ್ಚಾರಣೆ ಎಲ್ಲವೂ ಬೇರೆ ಬೇರೆ ಹೊಂದಿರುವಂತಹ ಪದಗಳಾಗಿರುತ್ತವೆ.
ಉದಾ:  ‘object’ ಎನ್ನುವ ಪದಕ್ಕೆ ವಸ್ತು ಎಂಬ ಅರ್ಥ, ಆಬ್ಜೆಕ್ಟ್ ಎನ್ನುವ pronunciation ಇದ್ದು, noun ಆಗಿ ಕೆಲಸ ಮಾಡುತ್ತದೆ. ಹಾಗೆಯೇ, ಆಕ್ಷೇಪಿಸು ಎಂಬ ಅರ್ಥ, ಅಬ್ಜೆಕ್ಟ್ ಎನ್ನುವ ಉಚ್ಚಾರಣೆ ಇದ್ದು, verb ಆಗಿ ಕೆಲಸ ಮಾಡುತ್ತದೆ.

ಅದೇ ರೀತಿ ‘content’ ಪದ, ಕಾಂಟೆಂಟ್ ಎಂಬ ಉಚ್ಚಾರಣೆ ಹಾಗೂ ಪರಿವಿಡಿ ಎಂಬ ಅರ್ಥವನ್ನು ಹೊಂದಿದ್ದು, noun ಆಗಿ ಕೆಲಸ ಮಾಡುತ್ತದೆ. ಅದೇ ರೀತಿ, ಕಂಟೆಂಟ್ ಎಂಬ ಉಚ್ಚಾರಣೆ, ತೃಪ್ತಿ ಎನ್ನುವ ಅರ್ಥವಿದ್ದು, vverb ಆಗಿಯೂ ಕೆಲಸ ಮಾಡುತ್ತದೆ.
ಈ ರೀತಿಯಾಗಿ ಪದಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದು, ಅವುಗಳನ್ನು ಬಳಸುವುದರಿಂದ ನಾವು ನಿರರ್ಗಳವಾಗಿ ಸಂಭಾಷಿಸಬಹುದಷ್ಟೇ ಅಲ್ಲದೆ ನಮ್ಮ ಶಬ್ದಸಂಪತ್ತು ಸಹಾ ಹೆಚ್ಚುತ್ತಾ ಹೋಗುತ್ತದೆ.

Homonyms ಎನ್ನುವ ಪದದಲ್ಲಿ ‘homo’ಎಂದರೆ ‘same’ (ಒಂದೇ ರೀತಿಯ) ಎಂದರ್ಥ ಹಾಗೂ ‘nyms’ ಎಂದರೆ ‘names’  (ಇಲ್ಲಿ ಪದಗಳು) ಎಂದರ್ಥ. ಹಾಗಾಗಿ, ಯಾವ ಪದಗಳು ಒಂದೇ sspelling ಮತ್ತು ಉಚ್ಚಾರಣೆ ಹೊಂದಿದ್ದು, ಬೇರೆ ಬೇರೆ ಅರ್ಥಗಳನ್ನು ಹೊಮ್ಮಿಸುತ್ತವೋ ಅಂತಹ ಪದಗಳನ್ನು homonyms (ಹೋಮೋನಿಮ್ಸ್) ಎಂದು ಕರೆಯುತ್ತೇವೆ.
ಉದಾ:‘fair’ (ಫೇರ್) ಎನ್ನುವ ಪದಕ್ಕೆ ‘ಪಕ್ಷಪಾತ ವಿಲ್ಲದ’, ‘ಜಾತ್ರೆ’ ಹಾಗೂ ‘ಸುಂದರ’ ಎನ್ನುವ ಅರ್ಥಗಳಿವೆ.

ಇವುಗಳನ್ನು ವಾಕ್ಯಗಳಲ್ಲಿ ಗಮನಿಸಿ:
The property division is fair enough (ಪಕ್ಷಪಾತ ವಿಲ್ಲದ).
I bougI bought this chain from the fair (ಜಾತ್ರೆ).
She iShe is fair (ಸುಂದರ).
ಇಂಗ್ಲಿಷ್‌ನಲ್ಲಿ ಈ ರೀತಿಯ ಪದಗಳು ಹಲವಾರು (watch, light, right, bank, lie.....)

Homographs ಎನ್ನುವ ಪದದಲ್ಲಿ g‘graph’ಎಂದರೆ ‘writing’ (ಇಲ್ಲಿ spelling) ಎಂದರ್ಥ. ಹಾಗಾಗಿ, ಯಾವ ಪದಗಳು ಒಂದೇ ರೀತಿಯ  spelling, ಬೇರೆ ಬೇರೆ ಉಚ್ಚಾರಣೆ ಹಾಗೂ ಅರ್ಥಗಳನ್ನು ಹೊಂದಿರುತ್ತವೆಯೋ, ಆ ಪದಗಳನ್ನು homographs (ಹೋಮೋಗ್ರಾಫ್ಸ್) ಎಂದು ಕರೆಯುತ್ತೇವೆ.
ಉದಾ: ‘tear’ ಎನ್ನುವ ಪದಕ್ಕೆ ‘ಟಿಯರ್’ ಎಂಬ ಉಚ್ಚಾರಣೆ ಹಾಗೂ ‘ಕಣ್ಣೀರು’ ಎಂಬ ಅರ್ಥವಷ್ಟೇ ಅಲ್ಲದೆ ‘ಟಿಯರ್’ ಎಂಬ ಉಚ್ಚಾರಣೆ ಹಾಗೂ ‘ಹರಿಯುವುದು’ ಎನ್ನುವ ಅರ್ಥ ಕೂಡ ಇದೆ. ಈ ಪದವನ್ನು ವಿವಿಧ ವಾಕ್ಯಗಳಲ್ಲಿ ಈ ರೀತಿಯಾಗಿ ಬಳಸಬಹುದು:
He had tears in his eyes (ಕಣ್ಣೀರು)
Don’t tear the book (ಹರಿಯುವುದು).

ಈ ಗುಂಪಿಗೆ ಸೇರುವ ಹಲವಾರು ಪದಗಳಲ್ಲಿ ಕೆಲವೆಂದರೆ content, object, wind, live, bow...
Homophones ಪದದಲ್ಲಿ ‘phone’ ಎಂದರೆ ಶಬ್ಧ (ಇಲ್ಲಿ ಉಚ್ಚಾರಣೆ) ಎಂದರ್ಥ. ಆದ್ದರಿಂದ, ಒಂದೇ ರೀತಿಯ ಉಚ್ಚಾರಣೆ, ಆದರೆ ಬೇರೆ ಬೇರೆ sspelling ಮತ್ತು ಅರ್ಥಗಳಿರುವ ಪದಗಳನ್ನು homophones (ಹೋಮೋಫೋನ್ಸ್) ಎನ್ನುತ್ತೇವೆ.
ಉದಾ : waste (ಉಪಯೋಗಕ್ಕೆ ಬಾರದ) ಹಾಗೂ waist (ಸೊಂಟ), ಈ ಇರಡೂ ಪದಗಳಿಗೆ ‘ವೇಯ್ಸ್ಟ್’ ಎಂಬ ಒಂದೇ ಉಚ್ಚಾರಣೆ ಇದೆ.

Flour (ಹಿಟ್ಟು) ಮತ್ತು flower (ಹೂವು), ಈ ಎರಡೂ ಪದಗಳಿಗೆ ಫ್ಲಾವರ್ ಎಂಬ ಒಂದೇ ಉಚ್ಚಾರಣೆ ಇದೆ.
ಈ ಗುಂಪಿಗೆ ಸೇರಿದ ಇನ್ನೂ ಕೆಲವು ಪದಗಳೆಂದರೆ:
(break, brake), (heel, heal), (bored, board), (sent, scent, scent,cent)...
Homonyms, homographs, homophonesಗಳನ್ನು ಕಲಿಯುವುದರಲ್ಲಿ ಸ್ವಾರಸ್ಯಕರವಾದ ವಿಷಯವೆಂದರೆ, ನಾವು ಒಂದು ಪದವನ್ನು ಕಲಿಯುವಾಗ, ಅದಕ್ಕೆ ಸಂಬಂಧಿಸಿದ ಇನ್ನೂ ಕೆಲವು ಪದಗಳನ್ನು ತಿಳಿದುಕೊಳ್ಳುವ ಅವಕಾಶ ಲಭಿಸುತ್ತದೆ. ಹಾಗೆಯೇ, ಪದಗಳಲ್ಲಿನ ಹಲವಾರು ಅರ್ಥ ಛಾಯೆಗಳನ್ನು ಸೂಕ್ಷ್ಮವಾಗಿ ಬಳಸುವ ಸಾಮರ್ಥ್ಯ ಕ್ರಮೇಣ ಒದಗುತ್ತದೆ. ಈ ಸಾಮರ್ಥ್ಯದಿಂದ ನಮ್ಮ ಭಾಷೆಯ ಸೃಜನಶೀಲತೆ ಹಾಗೂ ಅಭಿವ್ಯಕ್ತಿಯ ವ್ಯಾಪ್ತಿ ಹೆಚ್ಚುತ್ತಾ ಹೋಗುತ್ತದೆ.

ಮಾಹಿತಿಗೆ: 98452 13417

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT