ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ರಾಮನವಮಿ

Last Updated 28 ಮಾರ್ಚ್ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರದ ಅಮೃತಹಳ್ಳಿಯ ಗೋವಿಂದಪ್ಪ ಬಡಾವಣೆಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಶನಿವಾರ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು.

ಬೆಳಗ್ಗೆ 4.30ರಿಂದ ಬ್ರಾಹ್ಮೀ ಮುಹೂರ್ತದಲ್ಲಿ ಸೀತಾರಾಮರಿಗೆ ಪಂಚಾ ಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ. ಸುಪ್ರಭಾತಸೇವೆ, ವೇದ ಪಾರಾಯಣ, ಆಂಜನೇಯಸ್ವಾಮಿಯ ನೂತನ ಬೆಳ್ಳಿಕವಚಕ್ಕೆ ಮತ್ತು ಕೇದಾರೇಶ್ವರಸ್ವಾಮಿಯ ನೂತನ ಬೆಳ್ಳಿ ನಾಗಾಭರಣಕ್ಕೆ ಪಂಚಗವ್ಯ ಕಲಶ ಅಭಿಷೇಕ ಮತ್ತು ಕವಚಧಾರಣೆ ಕಾರ್ಯಗಳನ್ನು ನೆರವೇರಿಸಲಾ ಯಿತು.

ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀರಾಮದೇವಾಲಯದ ಪ್ರಪ್ರಥಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT