ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯತ್ವ ರದ್ದು: ಇಂದು ನಿರ್ಧಾರ

ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರು
Last Updated 21 ಆಗಸ್ಟ್ 2014, 19:54 IST
ಅಕ್ಷರ ಗಾತ್ರ

ಬೆಂಗಳೂರು: ನಿಗದಿತ ಕಾಲಮಿತಿ­ಯಲ್ಲಿ ಆಸ್ತಿ ವಿವರ ಸಲ್ಲಿಸದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ  ಸದಸ್ಯರ ಸದಸ್ಯತ್ವ ರದ್ದುಗೊಳಿ­ಸುವ ಸಂಬಂಧ ಶುಕ್ರವಾರ ನಡೆ­ಯ­ಲಿರುವ ಬಿಬಿಎಂಪಿ ಕೌನ್ಸಿಲ್‌ ಸಭೆ­ಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.

ನ್ಯಾಯಾಂಗ ಬಡಾವಣೆಯ ವಿ. ಶಶಿಧರ್‌ ಎಂಬುವವರು 2012–13ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಕೆ ಸಂಬಂಧ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ವಿವರಣೆ ಕೇಳಿದ್ದರು. ವಾರ್ಡ್‌ ನಂ. 37ರ ಸದಸ್ಯ ಮುನಿ­ರತ್ನ (ಈಗ ಶಾಸಕ), ವಾರ್ಡ್‌ ನಂ. 92ರ ಸದಸ್ಯೆ ಫರೀದಾ ಹಾಗೂ ವಾರ್ಡ್‌ ನಂ. 141ರ ಸದಸ್ಯೆ ಗೌರಮ್ಮ ವಿವರ ಸಲ್ಲಿಸಿಲ್ಲ ಎಂಬ ಮಾಹಿತಿಯನ್ನು ಕೊಡಲಾಗಿತ್ತು.

ಆಸ್ತಿ ವಿವರ ಸಲ್ಲಿಸದ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂಬ ನಿಯಮ ಕೆಎಂಸಿ ಕಾಯ್ದೆಯ­ಲ್ಲಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಶಶಿಧರ್‌ ಪ್ರಶ್ನಿಸಿದ್ದರು. ಈ ಕುರಿತು ಆಯುಕ್ತರು ಕಾನೂನು ಘಟಕದಿಂದ ಸಲಹೆ ಕೇಳಿದ್ದರು.

‘ಕೆಎಂಸಿ ಕಾಯ್ದೆಯ 19(2) ಕಲಂ ಪ್ರಕಾರ ಯಾವುದೇ ಸದಸ್ಯರು ಚುನಾ­ವಣೆಯಾದ ಒಂದು ತಿಂಗಳೊಳಗೆ ಮತ್ತು ಪ್ರತಿ ವರ್ಷ ಅದೇ ತಿಂಗಳು ಆಸ್ತಿ ವಿವರ ಸಲ್ಲಿಸಬೇಕು. ಒಂದು­ವೇಳೆ ವಿವರ ಸಲ್ಲಿಸದಿದ್ದಲ್ಲಿ ಅಥವಾ ತಪ್ಪು ಮಾಹಿತಿ ಕೊಟ್ಟಲ್ಲಿ ಅಂತಹ ಸದಸ್ಯರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಈ ಸಂಬಂಧ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬ­ಹುದು’ ಎಂದು ಕಾನೂನು ಘಟಕ ಅಭಿಪ್ರಾಯಪಟ್ಟಿದೆ. ಹೀಗಾಗಿ ಈ ವಿಷಯವನ್ನು ಆಯು­­ಕ್ತರು ಕೌನ್ಸಿಲ್‌ ಸಭೆಯ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT