ಯಾದಗಿರಿ; ರಾಜ್ಯದಲ್ಲಿ ನೂತನ ರೈಲ್ವೆ ಮಾರ್ಗಗಳ ನಿರ್ಮಾಣ ಯೋಜನೆಗಳು ವಿಳಂಬಗತಿಯಲ್ಲಿ ನಡೆಯುತ್ತಿದ್ದು, ಅವುಗಳನ್ನು ಚುರುಕುಗೊಳಿಸಿ ಕಾಮ ಗಾರಿ ಕೈಗೆತ್ತಿಕೊಳ್ಳಬೇಕು ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಈ ಕುರಿತ ತಮ್ಮ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ನೀಡಿದ ಲಿಖಿತ ಉತ್ತರಕ್ಕೆ ಪ್ರತಿಕ್ರಿಯಿಸಿದ ಡಾ. ಮಾಲಕರಡ್ಡಿ, ಆಲಮಟ್ಟಿ-–ಯಾದಗಿರಿ ಮತ್ತು ಆಲಮಟ್ಟಿ-–ಕೊಪ್ಪಳ ರೈಲ್ವೆ ಮಾರ್ಗದ ಸಮೀಕ್ಷೆಯನ್ನು ಶೀಘ್ರ ವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ನೂತನ ರೈಲ್ವೆ ಮಾರ್ಗಗಳ ನಿರ್ಮಾಣ ಯೋಜನೆಗಳು ವಿಳಂಬವಾ ಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವುಗಳನ್ನು ಮುಗಿಸಲು ಸರ್ಕಾರ ಉತ್ಸುಕತೆ ಹೊಂದಿದೆ ಎಂದು ಸಚಿವ ರೋಷನ್ ಬೇಗ್ ಉತ್ತರಿಸಿದ್ದಾರೆ.

ಆಲಮಟ್ಟಿ-–ಯಾದಗಿರಿ ರೈಲ್ವೆ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಮಾಹಿತಿಯಂತೆ 2012ರ ಫೆಬ್ರುವರಿ ತಿಂಗಳಲ್ಲಿ ಪ್ರಿಲಿಮಿ ನರಿ ಎಂಜನಿಯರಿಂಗ್ ಕಂ ಟ್ರಾಫಿಕ್ ಸರ್ವೇ ಕರಡು ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದ್ದು, ಪ್ರಧಾನ ವ್ಯವಸ್ಥಾಪಕರ ವರದಿಯನ್ನು 2015ರ ಏಪ್ರಿಲ್ 15ರಂದು ಪರಿಶೀಲಿಸಲಾಗಿದೆ. ಟ್ರಾಫಿಕ್ ಸರ್ವೇಯನ್ನು ಮರು ಪರಿಶೀ ಲಿಸಲಾಗುತ್ತಿದೆ. ಹಾಗೆಯೇ ಆಲಮಟ್ಟಿ-–ಕೊಪ್ಪಳ ಯೋಜನೆಗೆ ಸಂಬಂಧಿಸಿದಂತೆ ಪ್ರಿಲಿಮಿನರಿ ಎಂಜನಿಯರಿಂಗ್ ಕಂ ಟ್ರಾಫಿಕ್ ಸರ್ವೇ ವರದಿಯನ್ನು ರೈಲ್ವೆ ಮಂಡಳಿಗೆ 2012ರ ಫೆಬ್ರುವರಿಯಲ್ಲಿ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇವೆರಡೂ ಯೋಜನೆಗಳ ಯೋಜನಾವಾರು ಅಂದಾಜು ಮೊತ್ತದ ವಿವರ ನೀಡಬೇಕು ಎಂಬ ಡಾ. ಮಾಲಕರಡ್ಡಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಲಮಟ್ಟಿ–-ಯಾದಗಿರಿ ಯೋಜನೆಗೆ ₨ 1,393 ಕೋಟಿ ಮತ್ತು ಆಲಮಟ್ಟಿ–-ಕೊಪ್ಪಳ ಯೋಜನೆಗೆ ₨ 904 ಕೋಟಿ ಅಂದಾಜು ಮೊತ್ತ ನಿಗದಿಪಡಿ ಸಲಾಗಿದೆ ಎಂದು ವಿವರಿಸಿದ್ದಾರೆ.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜನತೆಯ ದೀರ್ಘಕಾಲದ ಬೇಡಿಕೆಯಾಗಿ ರುವ ಈ ಎರಡೂ ಯೋಜನೆಗಳಿಗೆ ಸರ್ಕಾರ ಕೆ–-ರೈಡ್ ಮೂಲಕ ತನ್ನ ಪಾಲಿನ ಹಣವನ್ನು ನೀಡಿ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲು ಮುಂದಾಗ ಬೇಕು ಎಂದು ಡಾ. ಮಾಲಕರಡ್ಡಿ ಒತ್ತಾಯಿಸಿದರು.

ರೈಲ್ವೆ ಇಲಾಖೆಯ ಮಾಹಿತಿಯಂತೆ ಈ ಎರಡೂ ಯೋಜನೆಗಳನ್ನು ರೈಲ್ವೆ ಮಂತ್ರಾಲಯದ ವತಿಯಿಂದಲೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿರುವ ಪ್ರಗತಿಯಲ್ಲಿರುವ ಯೋಜನೆಗಳ ವಿವರ ಒದಗಿಸಿದ ಸಚಿವ ಬೇಗ್, ರಾಮನಗರ–-ಮೈಸೂರು ಯೋಜನೆಗೆ (2007) ರಾಜ್ಯದ ಪಾಲಿನ ಮೊತ್ತ ₨ 503 ಕೋಟಿಯಲ್ಲಿ, ₨ 468 ಕೋಟಿ ಒದಗಿಸಲಾಗಿದ್ದು, ಈ ವರ್ಷ ಪೂರ್ಣಗೊಳ್ಳಲಿದೆ. ಬೆಂಗಳೂರು– -ಶ್ರವಣಬೆಳಗೊಳ (1997) ಯೋಜನೆಗೆ ರಾಜ್ಯದ ಪಾಲು ₨ 467 ಕೋಟಿ ಇದ್ದು, 106 ಕಿ.ಮೀ ಮಾರ್ಗ ಪೂರ್ಣ ಗೊಂಡಿದೆ. ಬೀದರ–-ಗುಲ್ಬರ್ಗ (2007) ಯೋಜನೆಗೆ ₨ 422 ಕೋಟಿ ರಾಜ್ಯದ ಪಾಲು ಇದ್ದು, 38 ಕಿಮೀ ಸಂಚಾರಕ್ಕೆ ಮುಕ್ತವಾಗಿದೆ. ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. ಮುನಿರಾಬಾದ್–-ಮೆಹಬೂಬ್ನಗರ ಮಾರ್ಗ (2007)- ₨ 350 ಕೋಟಿ ರಾಜ್ಯದ ಪಾಲು ಹೊಂದಿದ್ದು, ಪ್ರಗತಿಯಲ್ಲಿದೆ. ತುಮ ಕೂರು–ರಾಯದುರ್ಗ ಮಾರ್ಗ (2007–-08) ₨ 239 ಕೋಟಿ ರಾಜ್ಯದ ಪಾಲು ಹೊಂದಿದ್ದು, ಪ್ರಗತಿಯಲ್ಲಿದೆ.

ಚಿಕ್ಕಮಗಳೂರು–-ಸಕಲೇಶಪುರ ಮಾರ್ಗ (2013–-14) ₨ 328 ಕೋಟಿ ರಾಜ್ಯದ ಪಾಲು ಇದ್ದು, ಭೂಸ್ವಾಧೀನ ಪ್ರಾರಂಭಿಸಬೇಕಿದೆ. ಕುಡಚಿ–-ಬಾಗಲ ಕೋಟೆ (2010–-11) ₨ 408 ಕೋಟಿ ರಾಜ್ಯದ ಪಾಲು ಹೊಂದಿದ್ದು, 10 ಕಿಮೀ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಮುಗಿದಿದೆ. ಗದಗ–-ವಾಡಿ (2013–-14) ಮಾರ್ಗಕ್ಕೆ ₨ 961 ಕೋಟಿ ರಾಜ್ಯದ ಪಾಲು ಇದ್ದು, ಭೂಸ್ವಾಧೀನ ಪ್ರಾರಂಭಿ ಬೇಕಿದೆ.

ಹೆಜ್ಜಾಲ–-ಚಾಮರಾಜನಗರ (2013–-14) ಮಾರ್ಗಕ್ಕೆ ₨ 627 ಕೋಟಿ ರಾಜ್ಯದ ಪಾಲು ಇದ್ದು, ಇನ್ನಷ್ಟೇ ಭೂಸ್ವಾಧೀನ ಆರಂಭಿಸಬೇಕಿದೆ ಎಂದು ಸಚಿವ ರೋಷನ್ ಬೇಗ್ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.