ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿಯಿಂದ ಭಾರತ ಹೊರಕ್ಕೆ

ತ್ರಿಕೋನ ಏಕದಿನ ಕ್ರಿಕೆಟ್‌
Last Updated 30 ಜನವರಿ 2015, 13:43 IST
ಅಕ್ಷರ ಗಾತ್ರ

ಪರ್ತ್‌ (ಪಿಟಿಐ) : ಭಾರತ – ಇಂಗ್ಲೆಂಡ್ ನಡುವಿನ ತ್ರಿಕೋನ ಏಕದಿನ ಕ್ರಿಕೆಟ್‌ನ  ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ತಂಡವು 3 ವಿಕೆಟ್‌ಗಳ ಸೋಲನ್ನು ಅನುಭವಿಸಿ ಸರಣಿಯಿಂದ ಹೊರಬಿದ್ದಿದೆ. ಈ ಸೋಲಿನಿಂದ ಫೈನಲ್ ತಲುಪುವ ಕನಸನ್ನು ಹೊತ್ತಿದ್ದ ದೋನಿ ಬಳಗಕ್ಕೆ ಆಘಾತ ಉಂಟಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 1 ವಿಕೆಟ್‌ ನಷ್ಟಕ್ಕೆ 103ರನ್‌ಗಳನ್ನು ಗಳಿಸಿ  ಉತ್ತಮ ಆರಂಭ ಪಡೆದಿತ್ತು. 97 ರನ್‌ಗಳ ಅಂತರದಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು, ಕೊನೆಗೆ 48.1 ಓವರ್‌ಗಳಲ್ಲಿ 200 ರನ್‌ಗಳಿಗೆ ಆಲೌಟಾಯಿತು. ಭಾರತ ತಂಡದಲ್ಲಿ ಅಜಿಂಕ್ಯಾ ರಹಾನೆ (73)  ಅರ್ಧಶತಕ ದಾಖಲಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ತಂಡ ಆರಂಭಿಕ ಆಘಾತ ಅನುಭವಿಸಿದರೂ ನಂತರ ಚೇತರಿಸಿಕೊಂಡು 7 ವಿಕೆಟ್‌ ನಷ್ಟಕ್ಕೆ ಗೆಲುವಿನ 201 ರನ್‌ಗಳ ಗುರಿಯನ್ನು ತಲುಪಿತು. ಜೇಮ್ಸ್‌ ಟೇಲರ್ (82), ಜೋಸ್‌ ಬಟ್ಲರ್‌ (67) ಜೋಡಿ ಇಂಗ್ಲೆಂಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ  ಬೌಲಿಂಗ್ ವಿಭಾಗದಲ್ಲಿ ಸ್ಟುವರ್ಟ್‌ ಬಿನ್ನಿ 3 ವಿಕೆಟ್‌ ಪಡೆದರು.

ಆಸ್ಟ್ರೇಲಿಯಾ – ಇಂಗ್ಲೆಂಡ್‌ ತಂಡಗಳ ನಡುವೆ ಸರಣಿಯ ಫೈನಲ್ ಸೆಣಸಾಟ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT