ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನ್ಹಾ ಮೇಲೆ ತೂಗುಗತ್ತಿ

ಸಿಬಿಐ ನಿರ್ದೇಶಕರಿಂದ ಕಳಂಕಿತರ ರಕ್ಷಣೆ: ಅರ್ಜಿ ಪರಿಗಣಿಸಿದ ‘ಸುಪ್ರೀಂ’
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ಅವರು,  ‘2ಜಿ’ ಹಾಗೂ ಕಲ್ಲಿದ್ದಲು ಹಂಚಿಕೆ ಹಗರ­ಣಗಳ ಆರೋಪಿ­ಗಳನ್ನು ರಕ್ಷಿಸುತ್ತಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದ ಅರ್ಜಿಯನ್ನು  ವಿಚಾರ­ಣೆಗೆ  ಪರಿಗಣಿಸಲು ಸುಪ್ರೀಂ­ಕೋರ್ಟ್‌ ಸೋಮವಾರ ಒಪ್ಪಿ­ಕೊಂಡಿದೆ.

ಸ್ವಯಂಸೇವಾ ಸಂಸ್ಥೆ  ‘ಸೆಂಟರ್‌್ ಫಾರ್‌್ ಪಬ್ಲಿಕ್‌ ಇಂಟರೆಸ್ಟ್‌ ಲಿಟಿ­ಗೇಷನ್‌’ ಸಿನ್ಹಾ ವಿರುದ್ಧ ಈ ಆರೋಪ ಮಾಡಿತ್ತು. ಆದರೆ ಈ ಮಾಹಿತಿ ಕೊಟ್ಟ­ವರ ಹೆಸರು ಬಹಿರಂಗಪಡಿ­ಸುವಂತೆ ಕೋರ್ಟ್‌್  ಈ ಹಿಂದೆ ಆದೇಶಿಸಿತ್ತು. ‘ಆರೋಪ ಮೂಲ ಬಹಿರಂಗಪಡಿ­ಸುವುದಕ್ಕೆ ನಮಗೆ ಸಾಧ್ಯವಾಗುತ್ತಿಲ್ಲ.  ಇದಕ್ಕಾಗಿ ಬೇಷರತ್‌ ಕ್ಷಮೆ ಕೇಳು­ತ್ತೇವೆ. ದಯವಿಟ್ಟು ಈ ಆದೇಶವನ್ನು ಕೋರ್ಟ್‌ ವಾಪಸ್‌ ಪಡೆಯಬೇಕು’ ಎಂದು ಸಂಸ್ಥೆ ಪರ ಹಾಜರಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ ಹಾಗೂ ಪ್ರಶಾಂತ್‌ ಭೂಷಣ್‌ ಕೋರಿಕೊಂಡರು. 
  
‘ನಾವು ಸಿನ್ಹಾ ಚಾರಿತ್ರ್ಯವಧೆ ಮಾಡು­ತ್ತಿಲ್ಲ. ಆದರೆ, ಅವರ ವಿರು­ದ್ಧದ ಆರೋಪಗಳನ್ನು ಸುಪ್ರೀಂ­ಕೋರ್ಟ್‌ ಪರಿಶೀಲಿಸಬೇಕೆಂದು ಆಗ್ರಹಿ­ಸುತ್ತಿ­ದ್ದೇವೆ’ ಎಂದು ದವೆ  ಹೇಳಿದರು. ‘ಸ್ವಯಂಸೇವಾ ಸಂಸ್ಥೆಯು ಸಿನ್ಹಾ ವಿರುದ್ಧದ ಆರೋಪದ ಮೂಲ­ಬಹಿ­ರಂಗ­ಪ­ಡಿಸಬೇಕು. ಇಲ್ಲದಿದ್ದರೆ ಯಾರು ಬೇಕಾದರೂ ಸುಪ್ರೀಂ­ಕೋರ್ಟ್‌­-­ನಲ್ಲಿ ಆಧಾರರಹಿತ ಆರೋಪ ಮಾಡಲು ಅವಕಾಶ ಮಾಡಿಕೊಟ್ಟಂತಾ­ಗುತ್ತದೆ’ ಎಂದು ಸಿನ್ಹಾ ಪರ ವಕೀಲ ವಿಕಾಸ್‌ ಸಿಂಗ್‌ ವಾದಿಸಿದರು.

‘ಸಂಸ್ಥೆಯು ತನ್ನ ಆರೋಪದ ಮೂಲ ಬಹಿರಂಗಪಡಿಸುವುದಕ್ಕೆ ತಯಾ­­­­ರಿಲ್ಲ. ಆದ ಕಾರಣ ಈ ಅರ್ಜಿಯ ವಿಚಾ­ರಣೆ ಮಾಡಬಾರದು’ ಎಂದು ವಿಕಾಸ್‌ ಸಿಂಗ್‌ ಸಲ್ಲಿಸಿದ್ದ ಮನ­ವಿ ಯನ್ನೂ ಕೋರ್ಟ್‌ ತಳ್ಳಿ­ಹಾಕಿತು. ಕೋರ್ಟ್‌ ತಳೆದ ಈ ನಿಲುವಿನಿಂದ ಸಿನ್ಹಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಸಿಬಿಐ ತನಿಖೆ ಮಾಡಿರುವ ಯಾವುದೇ ಪ್ರಕರಣದಲ್ಲಿ ತಮ್ಮ ಹಸ್ತಕ್ಷೇಪ­ವಿಲ್ಲ ಎಂದ ರಂಜಿತ್‌್ ಸಿನ್ಹಾ, ಈ ಅರ್ಜಿ ವಿಚಾರಣೆ­ಯನ್ನು ಒಂದೇ ಒಂದು ದಿನ ಮುಂದು­ವರಿಸಿದರೂ ಅದು ೨ಜಿ ಪ್ರಕರ­ಣದ ಮೇಲೆ ಪರಿಣಾಮ ಬೀರು­ತ್ತದೆ ಎಂದರು. ಆದರೆ, ಸಿನ್ಹಾ ಮನವಿಗೆ ನ್ಯಾಯಪೀಠ ಸೊಪ್ಪು ಹಾಕಲಿಲ್ಲ.

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌್ ನೆರವು: ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಅವರಿದ್ದ ಪೀಠ, ಸಿನ್ಹಾ ವಿರುದ್ಧದ ಆರೋಪದ ವಿಚಾರಣೆಗೆ ‘೨ಜಿ’ ಪ್ರಕರ­ಣದ ತನಿಖೆಗಾಗಿ  ತಾನು ನೇಮಿಸಿರುವ   ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌್ ನೆರವು  ಕೇಳಿತು. ಸಿನ್ಹಾ ವಿರುದ್ಧದ ಆರೋಪಕ್ಕೆ ಸಂಬಂಧಿ­ಸಿದ ಎಲ್ಲ ದಾಖಲೆಗಳನ್ನು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌್ ಆನಂದ್‌್ ಗ್ರೋವರ್‌್ ಅವರಿಗೆ ಹಸ್ತಾಂ­ತರಿ­ಸುವಂತೆ ಸ್ವಯಂಸೇವಾ ಸಂಸ್ಥೆಗೆ  ನಿರ್ದೇಶನ ನೀಡಿತು. ಗ್ರೋವರ್‌್ ಈ ಎಲ್ಲ ಮಾಹಿತಿ­ಗಳನ್ನು ಪರಿಶೀಲಿಸಲಿದ್ದಾರೆ. ಅಕ್ಟೋ­ಬರ್‌್ ೧೦ರಂದು ನಡೆಯಲಿರುವ ವಿಚಾರಣೆ ವೇಳೆ ಕೋರ್ಟ್‌ಗೆ ನೆರವು ನೀಡಲಿದ್ದಾರೆ.

ಇಂಥ ಪ್ರಕರಣಗಳಲ್ಲಿ ನಾವು ಆದೇಶ ನೀಡಲು ಆಗದು. ಹಾಗೇ­ನಾದರೂ ಆದೇಶ ನೀಡಿದರೆ ಅದು ಬಹುಕೋಟಿ ಹಗರಣಗಳ ವಿಚಾರ­ಣೆಯ ಮೇಲೆ ಪರಿಣಾಮ ಬೀರುತ್ತದೆ
–ಸುಪ್ರೀಂಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT