ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ಕಣ್ಣಿಗೆ ಪೊರೆ: ಷಾ ತಿರುಗೇಟು

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸೋನೆಪತ್‌/ ನವದೆಹಲಿ (ಪಿಟಿಐ): ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕಣ್ಣಿಗೆ ಪೊರೆ ಕವಿದಿದ್ದು, ಹರಿ­ಯಾ­ಣದ ಕಾಂಗ್ರೆಸ್‌ ಸರ್ಕಾರದಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬಡಜನರ ರೋದನ ಅವರಿಗೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಟೀಕಿಸಿದ್ದಾರೆ.

‘ಕೃತಿಯಲ್ಲಿ ಮಾಡಿ ತೋರಿಸ­ಲಾಗದ­ವರು ಆಡಂಬರದ ಮಾತುಗಳನ್ನು ಆಡು­ತ್ತಾರೆ’ ಎಂದು ಪ್ರಧಾನಿ ಮೋದಿ ಅವ­ರನ್ನು ಸೋನಿಯಾ ಶನಿ­ವಾರ ಟೀಕಿ­ಸಿ­ದ್ದಕ್ಕೆ ಷಾ ಹೀಗೆ ತಿರುಗೇಟು ನೀಡಿದ್ದಾರೆ. ಹರಿಯಾಣದಲ್ಲಿ ಮಹಿಳೆಯರು ದೌರ್ಜ­ನ್ಯಕ್ಕೆ ಗುರಿಯಾಗಿ ರೋದಿಸುತ್ತಿ­ರು­ವು­ದನ್ನು ಅಲ್ಲಗಳೆ­ಯಲು ಸಾಧ್ಯವೇ? ಅಲ್ಲಿನ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಂಡಿರುವುದು ಹಾಗೂ ಹೀಗೆ ಸಂಕ­ಷ್ಟಕ್ಕೆ ಒಳಗಾಗಿರುವ ರೈತರು ಕಣ್ಣೀರು ಹಾಕುತ್ತಿರುವುದು ನಿಜವ­ಲ್ಲವೇ?– ಎಂದು ಸೋನೆಪತ್‌ ಜಿಲ್ಲೆ­ಯಲ್ಲಿ ನಡೆದ ಚುನಾವಣಾ ರ್‍್ಯಾಲಿ­ಯಲ್ಲಿ ಅವರು ಕೇಳಿದರು.

ನೀವು (ಸೋನಿಯಾ) ಹಳ್ಳಿಗೆ ಹೋಗು­­ವುದಿಲ್ಲವಾದ್ದರಿಂದ ನಿಮಗೆ ಗ್ರಾಮಸ್ಥರ ಕಷ್ಟಗಳು ಗೊತ್ತಿಲ್ಲ. ಅಂದು ಚಹಾ ಮಾರು­ತ್ತಿ­ದ್ದ ಮೋದಿ ಇಂದು ಈ ಹಂತ ಮುಟ್ಟಿ­ದ್ದಾರೆ. ಹೀಗಾಗಿ ಅವರಿಗೆ ಜನರ ಕಷ್ಟ­ಗಳು ಗೊತ್ತಾಗುತ್ತವೆ ಎಂದು  ಷಾ ಹೇಳಿದರು.
ಸೋನಿಯಾ ಅವರು ಶನಿ­ವಾರ ಚುನಾ­ವಣಾ ಭಾಷಣದಲ್ಲಿ ಮಾತ­ನಾಡಿ, ಎಲ್ಲ ಕೆಲಸಗಳೂ ತಮ್ಮ ಸರ್ಕಾರ ಅಧಿ­ಕಾರಕ್ಕೆ ಬಂದ ಮೇಲೆಯೇ ನಡೆ­ಯು­­ತ್ತಿವೆ ಎಂಬಂತೆ ಮೋದಿ ಬಿಂಬಿ­ಸಿ­ಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT