ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ, ರಾಹುಲ್‌ಗೆ ಸಮನ್ಸ್‌

Last Updated 26 ಜೂನ್ 2014, 16:26 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ನ್ಯಾಷ­ನಲ್‌ ಹೆರಾಲ್ಡ್‌  ಪತ್ರಿಕೆಯ ನಿಧಿಯನ್ನು ದುರುಪಯೋಗ­ಪಡಿಸಿಕೊಂಡ ಆರೋ­ಪದ ಮೇಲೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ದೆಹಲಿ ಕೋರ್ಟ್‌ ಗುರುವಾರ ಸಮನ್ಸ್‌ ಜಾರಿಗೊಳಿಸಿದೆ.

ಬಿಜೆಪಿಯ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಖಾಸಗಿ ದೂರನ್ನು  ವಿಚಾರಣೆ ನಡೆಸಿದ  ಮೆಟ್ರೊಪಾ­ಲಿಟನ್‌ ಮ್ಯಾಜಿಸ್ಟ್ರೇಟ್‌ ಗೋಮತಿ ಮನೋಚಾ ಸಮನ್ಸ್‌ ಜಾರಿಗೊಳಿಸಿದ­ರು.

ಆಗಸ್ಟ್‌ 7ರ ಒಳಗೆ  ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಹಾಗೂ ರಾಹುಲ್‌ಗೆ ಕೋರ್ಟ್‌ ಆದೇಶಿಸಿದೆ. ಸೋನಿಯಾ, ರಾಹುಲ್‌ ಅವರನ್ನು ಹೊರತುಪಡಿಸಿ ಇನ್ನೂ ಐವರಿಗೆ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ.

ದೇಶದ ಮೊದಲ ಪ್ರಧಾನಿ ಜವಾಹ­ರಲಾಲ್‌ ನೆಹರು ಅವರು 1938ರಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಾರಂಭಿ­ಸಿದ್ದರು.  2008ರಲ್ಲಿ ಈ ಪತ್ರಿಕೆ ಸ್ಥಗಿತಗೊಂ­ಡಿತ್ತು. ಈ ಪತ್ರಿಕೆಗೆ ಸೇರಿದ ₨2 ಸಾವಿರ  ಕೋಟಿ ನಿಧಿಯನ್ನು ಸೋನಿಯಾ ಮತ್ತು ರಾಹುಲ್‌ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್‌ ಸ್ವಾಮಿ ಆರೋಪಿ­ಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT