ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್: ಕಂಚಿಗೆ ತೃಪ್ತಿ ಪಟ್ಟ ದೀಪಿಕಾ

Last Updated 22 ಸೆಪ್ಟೆಂಬರ್ 2014, 6:37 IST
ಅಕ್ಷರ ಗಾತ್ರ

ಇಂಚೆನ್ (ಪಿಟಿಐ): ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್‌ ಅವರು ಇಲ್ಲಿ ನಡೆಯುತ್ತಿರುವ 17ನೇ  ಏಷ್ಯನ್‌ ಕ್ರೀಡಾಕೂಟದ ಫೈನಲ್‌ ಸುತ್ತು ಪ್ರವೇಶಿಸುವಲ್ಲಿ  ವಿಫಲರಾಗುವ ಮೂಲಕ ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.

ಸೋಮವಾರ ನಡೆದ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಪಳ್ಳಿಕಲ್‌ ಅವರು ವಿಶ್ವ ಅಗ್ರಕ್ರಮಾಂಕದ ಆಟಗಾರ್ತಿ ನಿಕೊಲ್‌ ಡೇವಿಡ್‌ ಕೈಯಲ್ಲಿ ಸೋಲುಂಡು ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.

23 ವರ್ಷದ ಭಾರತದ ಆಟಗಾರ್ತಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ದೀಪಿಕಾ 4–11, 4–11, 5–11ರಲ್ಲಿ ಮಲೇಷ್ಯಾದ ಆಟಗಾರ್ತಿ ವಿರುದ್ಧ ಸುಲಭವಾಗಿ ಸೋಲು ಕಂಡರು.

ಕೇವಲ 25  ನಿಮಿಷಗಳ ಹೋರಾಟದಲ್ಲಿ ಗೆಲುವಿನ ನಗೆ ಬೀರಿದ ಡೇವಿಡ್‌ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT