ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಪ್ರತಿಗಳ ಸಂರಕ್ಷಣೆಗೆ ಆದ್ಯತೆ ನೀಡಿ: ದೇಜಗೌ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹೊಸಪೇಟೆ: ‘ಹುಳುಗಳಿಗೆ ಆಹಾರ­ವಾ­ಗಿದ್ದ ಹಸ್ತ­ಪ್ರತಿಗ­ಳನ್ನು ರಕ್ಷಿಸದೆ ಹೋಗಿ­ದ್ದರೆ ಕರ್ನಾಟಕದ ಸಾಂಸ್ಕೃತಿಕ ಇತಿ­ಹಾಸ ತಿಳಿ­ಯುತ್ತಿರಲಿಲ್ಲ. ಈಗಲೂ ಕತ್ತಲಲ್ಲಿ ಇರುವ ಇಂಥ ಐತಿಹಾಸಿಕ ಪುರಾವೆಗಳ ರಕ್ಷ­ಣೆಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು’ ಎಂದು ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಗುರುವಾರ ಒತ್ತಾಯಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಆರಂಭವಾದ ಎರಡು ದಿನಗಳ  ಅಖಿಲ ಕರ್ನಾಟಕ 11ನೇ ಹಸ್ತಪ್ರತಿ ಸಮ್ಮೇ­ಳ­ನಾ­ಧ್ಯಕ್ಷ ಭಾಷಣ ಮಾಡಿದ ಅವರು, ‘ಸರ್ಕಾರಿ ಅಧಿ­ಕಾರಿಗಳಿಗೆ ತಾವು ಕಾರ್ಯ ನಿರ್ವಹಿಸುವ ಪ್ರದೇಶ­ಗಳ ಸಂಪೂರ್ಣ ಪರಿಚಯ ಹಾಗೂ ಅಲ್ಲಿನ ಜನರ ಒಡ­ನಾಟ ಇರುತ್ತದೆ. ಇಂಥ ಒಡ­ನಾಟದ ಮೂಲಕ ಅಲ್ಲಿ­ರುವ ಹಸ್ತಪ್ರತಿ`ಗಳನ್ನು ಸಂಗ್ರಹಿಸಿ ವಿಶ್ವವಿದ್ಯಾಲ­ಯದ ಹಸ್ತಪ್ರತಿ ವಿಭಾಗಕ್ಕೆ ನೀಡುವ ಮೂಲಕ ಸಂರಕ್ಷಣೆಗೆ ಮುಂದಾಗಬೇಕು’ ಎಂದರು.

‘ಬಸವೇಶ್ವರಾದಿಯಾಗಿ ಶಿವಶರಣರ ಸಂದೇಶ ಇಂದಿನ ಎಲ್ಲ ಸಾಮಾಜಿಕ ರೋಗ­ಗಳಿಗೆ ಸಿದ್ಧೌಷಧ. ಈಗ ಲಭ್ಯವಿ­ಲ್ಲದ ಅನೇಕ ಕೃತಿ­ಗಳಲ್ಲಿ ಇನ್ನೂ ಎಂತಹ ಮೌಲಿಕ ಸಂಗತಿಗಳು ಅಡಗಿವೆಯೋ ಗೊತ್ತಿಲ್ಲ. ಹಸ್ತಪ್ರತಿಗಳು ಸಮಾಜ ಹಾಗೂ ಸರ್ಕಾರದ ಆಸ್ತಿ­ಯಾ­ಗಿದ್ದು, ನಾಡಿನ ಸಂಸ್ಕೃತಿ ಮತ್ತು ಇತಿಹಾಸದ ಸಂಪು­­ಟಗಳು ಸಂಪೂರ್ಣ­ವಾಗಿ ಕನ್ನಡಿ­ಗ­ರಿಗೆ ಪರಿಚಯವಾಗ­ಬೇಕಾದರೆ, ಕತ್ತಲೆ­ಯಲ್ಲಿ ಹುದುಗಿರುವ ಇಂಥ ಹಸ್ತ­ಪ್ರತಿ­ಗಳು ಬೆಳಕಿಗೆ ಬರಬೇಕು’ ಎಂದು ಪ್ರತಿ­ಪಾದಿಸಿದರು.

ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಸಮ್ಮೇಳನ ಉದ್ಘಾಟಿಸಿದರು. ಹಸ್ತ­ಪ್ರತಿ ವಿಭಾಗದ ಮುಖ್ಯಸ್ಥ ಡಾ.­ವೀರೇಶ ಬಡಿಗೇರ  ಸಂಪಾದಿಸಿರುವ ‘ಹಸ್ತ­ಪ್ರತಿ ವ್ಯಾಸಂಗ–13’ ಕೃತಿಯನ್ನು ಹಿರಿಯ ವಿದ್ವಾಂಸ ಡಾ.ಬಿ.ಕೆ. ಹಿರೇಮಠ ಬಿಡು­ಗಡೆ ಮಾಡಿದರು. ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT