ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುಹಸೆ,‘3 ಪೆಗ್’ ನಶೆ

ಸಿನಿ ಹನಿ
Last Updated 11 ಮೇ 2016, 19:44 IST
ಅಕ್ಷರ ಗಾತ್ರ

ಎಂಟು ತಿಂಗಳ ಹಿಂದೆ ಯುಟ್ಯೂಬ್‌ನಲ್ಲಿ ‘ಹಾಳಾಗೋದೆ’ ಎಂಬ ಕನ್ನಡ ರ್‍ಯಾಪ್ ಹಾಡೊಂದನ್ನು ಚಂದನ್ ಶೆಟ್ಟಿ ಮತ್ತು ತಂಡ ಅಪ್‌ಲೋಡ್ ಮಾಡಿತ್ತು. ಈ ಹಾಡನ್ನು ಈಗ ಐದು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಹಾಡಿಗೆ  ದೇಶವಿದೇಶದಿಂದ ಬಂದ ಪ್ರೋತ್ಸಾಹದ ಸಂದೇಶದಿಂದಾಗಿ ಖುಷಿಯಾಗಿರುವ ತಂಡ, ಈಗ ಮತ್ತೊಂದು ರ್‍ಯಾಪ್ ಹಾಡನ್ನು ಬಿಡುಗಡೆ ಮಾಡುತ್ತಿದೆ.

ಈ ಬಾರಿ ‘3 ಪೆಗ್’ ಎಂಬ ಪಾರ್ಟಿ ಹಾಡೊಂದನ್ನು ತಯಾರು ಮಾಡಿರುವ ಚಂದನ್ ಶೆಟ್ಟಿ ಬಳಗ, ಮೇ 14ರಂದು ‘ಯುಟ್ಯೂಬ್‌’ನಲ್ಲಿ ಹಾಡನ್ನು ಅಪ್‌ಲೋಡ್ ಮಾಡಲಿದೆ. ಚಂದನ್ ಶೆಟ್ಟಿ ಅವರೇ ಸಾಹಿತ್ಯ ಬರೆದು, ಹಾಡಿ, ನಟಿಸಿದ್ದಾರೆ.

ವಿಶೇಷವೆಂದರೆ ಇತ್ತೀಚೆಗೆ ಸಿನಿಮಾಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿರುವ ನಟಿ ಐಂದ್ರಿತಾ ರೇ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಲ್ಕು ನಿಮಿಷಗಳ ‘3 ಪೆಗ್’ಗೆ ವಿಜೇತ್ ಎಂಬುವವರು ಮಟ್ಟು ಹಾಕಿದ್ದಾರೆ.

ಚಂದನ್ ಅವರ ಸ್ನೇಹಿತ ವಿಜೇತ್ ಐದು ವರ್ಷಗಳ ಹಿಂದೆಯೇ ಈ ಹಾಡಿನ ಸಂಗೀತವನ್ನು ಸಂಯೋಜಿಸಿದ್ದರಂತೆ. ಶ್ರೀಶ ಕೂದುವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ‘ಶ್ರೀಶ ಈ ಹಾಡಿನ ಕಣ್ಣು’ ಎಂಬುದು ನಿರ್ಮಾಪಕ ದಿನಿ ಸಿನಿ ಕ್ರಿಯೇಶನ್ಸ್‌ನ ದಿನೇಶ್ ಅಭಿಪ್ರಾಯ. ‘ಸಿನಿಮಾಕ್ಕೆ ಬಳಸುವ ಕ್ಯಾಮೆರಾವನ್ನೇ ಬಳಸಿದ್ದೇವೆ.

ಗುಣಮಟ್ಟದಲ್ಲಿ ಕೊರತೆಯಿಲ್ಲ. ಇಂಥದ್ದೊಂದು ಹಾಡು ಮಾಡಿರುವುದು ನನಗೂ ಹೊಸ ಅನುಭವ’ ಎಂದರು ಶ್ರೀಶ. ಧೀರಜ್ ಪ್ರಸಾದ್ ಹಾಡಿನ ಪ್ರಾಯೋಜಕರಲ್ಲಿ ಒಬ್ಬರು. ಈ ವಿಡಿಯೊ ಹಾಡಿಗೆ ಎಂಟು ಲಕ್ಷ ರೂಪಾಯಿಗಳ ವೆಚ್ಚವಾಗಿದ್ದು, ಈಗಾಗಲೇ ತಂಡ ಲಾಭವನ್ನೂ ಕಂಡಿದೆಯಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT